ಪಂತ್ ಹಾಗೂ ರಾಹುಲ್ ರವರಿಗೆ ಸ್ಥಾನ ಕಳೆದುಕೊಳ್ಳುತ್ತಿದ್ದರೂ ಕೂಡ ಸಂಜು ಸ್ಯಾಮ್ಸನ್ ಹೇಳಿದ್ದೇನು ಗೊತ್ತೇ?? ಆ ಉತ್ತರ ನೋಡಿದರೆ ನಿಜಕ್ಕೂ ಭೇಷ್ ಅಂತೀರಾ.

ಪಂತ್ ಹಾಗೂ ರಾಹುಲ್ ರವರಿಗೆ ಸ್ಥಾನ ಕಳೆದುಕೊಳ್ಳುತ್ತಿದ್ದರೂ ಕೂಡ ಸಂಜು ಸ್ಯಾಮ್ಸನ್ ಹೇಳಿದ್ದೇನು ಗೊತ್ತೇ?? ಆ ಉತ್ತರ ನೋಡಿದರೆ ನಿಜಕ್ಕೂ ಭೇಷ್ ಅಂತೀರಾ.

ಮುಂದಿನ ತಿಂಗಳು ಶುರುವಾಗಲಿರುವ ಟಿ20 ವಿಶ್ವಕಪ್ ಪಂದ್ಯಗಳಿಗೆ ಈಗಾಗಲೇ ಭಾರತ ತಂಡದ ಆಯ್ಕೆ ನಡೆದಿದೆ. ವಿಶ್ವಕಪ್ ಗೆ ಬಿಸಿಸಿಐ ಆಟಗಾರರನ್ನು ಆಯ್ಕೆ ಮಾಡಿ ಪ್ರಕಟಿಸಿದ ನಂತರ ಹಲವರಿಗೆ ಬಹಳ ಶಾಕ್ ಆಗಿತ್ತು, ಕೇರಳ ಮೂಲದ ಆಟಗಾರ ಸಂಜು ಸ್ಯಾಮ್ಸನ್ ಅವರು ಭಾರತ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ರಿಷಬ್ ಪಂತ್ ಅವರು ವೈಫಲ್ಯ ಅನುಭವಿಸುತ್ತಿದ್ದಾರೆ. ಹಾಗೆಯೇ ಕೆ.ಎಲ್.ರಾಹುಲ್ ಅವರು ಸಹ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹಾಗಾಗಿ ಸಂಜು ಸ್ಯಾಮ್ಸನ್ ಅವರು ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯಬಹುದು ಎಂದೇ ಎಲ್ಲರ ನಿರೀಕ್ಷೆ ಆಗಿತ್ತು.

ಸಂಜು ಸ್ಯಾಮ್ಸನ್ ಅವರ ಕ್ರಮಾಂಕದಲ್ಲಿ ಆದರೂ ಉತ್ತಮವಾಗಿ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ, ಇಂತಹ ಆಟಗಾರನನ್ನು ಸೆಲೆಕ್ಟ್ ಮಾಡಿಲ್ಲ ಎಂದು ಅಸಮಾಧಾನ ಸಹ ವ್ಯಕ್ತವಾಗಿತ್ತು. ಇದೇ ವಿಚಾರದ ಬಗ್ಗೆ ಸಂಜು ಸ್ಯಾಮ್ಸನ್ ಅವರಿಗೂ ಸಹ ಪ್ರಶ್ನೆ ಕೇಳಲಾಗಿದೆ, ರಿಷಬ್ ಪಂತ್ ಹಾಗೂ ಕೆ.ಎಲ್.ರಾಹುಲ್ ಅವರ ಕಾರಣದಿಂದ ನಿಮಗೆ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಸಂಜು ಸ್ಯಾಮ್ಸನ್ ಅವರು ಕೊಟ್ಟಿರುವ ಉತ್ತರ ಕೇಳಿದರೆ ಅವರು ನಿಜಕ್ಕೂ ಗ್ರೇಟ್ ಎನ್ನಿಸುತ್ತದೆ. “ಯಾರ ಬದಲಿಗೆ ನಾನು ಆಡುತ್ತೇನೆ ಎಂದು ಹೆಚ್ಚಾಗಿ ಚರ್ಚೆ ಆಗುತ್ತಿದೆ. ನಾನು ರಾಹುಲ್ ಅಥವಾ ಪಂತ್ ಜೊತೆಗೆ ಸ್ಪರ್ಧೆ ಮಾಡುತ್ತಿಲ್ಲ.

ಅವರು ನಾನು ಒಂದೇ ತಂಡದಲ್ಲೇ ಆಡುತ್ತಿದ್ದೇವೆ. ಅವರನ್ನು ನಾನು ಬಿಟ್ಟುಕೊಟ್ಟರೆ ನನ್ನ ದೇಶವನ್ನು ನಾನು ಬಿಟ್ಟುಕೊಟ್ಟ ಹಾಗೆ ಆಗುತ್ತದೆ. 5 ವರ್ಷಗಳ ಬಳಿಕ ನಾನು ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿರುವುದು ನನ್ನ ಅದೃಷ್ಟ. 5 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡವನ್ನು ಪ್ರಪಂಚದ ಅತ್ಯಂತ ಬಲಿಷ್ಠ ಕ್ರಿಕೆಟ್ ತಂಡ ಎನ್ನುತ್ತಿದ್ದರು. ಈಗಲು ಕೂಡ ಭಾರತ ತಂಡ ನಂಬರ್ 1 ಸ್ಥಾನದಲ್ಲಿಯೇ ಇದೆ. ಪ್ರಪಂಚದ ನಂಬರ್ 1 ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಹಾಗೆಯೇ ನಮ್ಮ ಬಗ್ಗೆ ಸಹ ನಾವು ಯೋಚನೆ ಮಾಡಬೇಕು, ನಮಗೆ ಯಾವಾಗ ಎಷ್ಟು ಅವಕಾಶ ಸಿಕ್ಕಿದೆ ಎಂದು ಯೋಚನೆ ಮಾಡಬೇಕು. ಸರಿಯಾದ ದಾರಿಯಲ್ಲಿ ಯೋಚಿಸುವ ಮನಸ್ಥಿತಿ ಇರಬೇಕು..” ಎಂದಿದ್ದಾರೆ ಸಂಜು ಸ್ಯಾಮ್ಸನ್. ಇವರು ನೀಡಿರುವ ಈ ಹೇಳಿಕೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.