ಬಿಸಿಸಿಐ ನಡೆಯಿತು ಹಲವಾರು ಚರ್ಚೆ; ಕೊನೆಗೂ ಏಷ್ಯಾ ಕಪ್ ಸೋಲಿಗೆ ಕಾರಣ ಹುಡುಕಿದ ಬಿಸಿಸಿಐ ಹೇಳಿದ್ದೇನು ಗೊತ್ತೇ??

ಬಿಸಿಸಿಐ ನಡೆಯಿತು ಹಲವಾರು ಚರ್ಚೆ; ಕೊನೆಗೂ ಏಷ್ಯಾ ಕಪ್ ಸೋಲಿಗೆ ಕಾರಣ ಹುಡುಕಿದ ಬಿಸಿಸಿಐ ಹೇಳಿದ್ದೇನು ಗೊತ್ತೇ??

ಭಾರತ ಕ್ರಿಕೆಟ್ ಅಕ್ಟೋಬರ್ 16ರಂದು ಶುರುವಾಗಲಿರುವ ವಿಶ್ವಕಪ್ ಪಂದ್ಯಗಳಿಗೆ ತಯಾರಿ ನಡೆಸುತ್ತಿದೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ್ ವಿರುದ್ಧ ಮೊದಲ ಪಂದ್ಯ ಆಡಲಿದೆ ಭಾರತ ತಂಡ. ಕಳೆದ ತಿಂಗಳು ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಹಿನ್ನಡೆ ಅನುಭವಿಸಿತು. ಮೊದಲ ಮೂರು ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ನಂತರ ಸೂಪರ್ 4 ಹಂತದ ಮೊದಲ ಎರಡು ಪಂದ್ಯಗಳಲ್ಲೂ ಸಹ ಭಾರತ ತಂಡ ಸೋಲು ನೋಡಿದ ನಂತರ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿತು.

ಈಗ ವಿಶ್ವಕಪ್ ಪಂದ್ಯಗಳಲ್ಲಿ ಭಾರತ ತಂಡ ಉತ್ತಮವಾದ ಪ್ರದರ್ಶನ ಕೊಡುವುದು ಬಹಳ ಮುಖ್ಯ, ಈ ಪಂದ್ಯಗಳು ಭಾರತ ತಂಡದ ಪಾಲಿಗೆ ಬಹಳ ಮುಖ್ಯವಾದ ಪಂದ್ಯ ಆಗಿರುವ ಕಾರಣ, ಬಿಸಿಸಿಐ ಇದರ ಬಗ್ಗೆ ದೀರ್ಘವಾದ ಚರ್ಚೆ ನಡೆಸಿದೆ. ಏಷ್ಯಾಕಪ್ ಸೋಲಿಗೆ ಕಾರಣ ಏನು ಹಾಗೂ, ಮುಂದಿನ ವಿಶ್ವಕಪ್ ಪಂದ್ಯಗಳಿಗೆ ತಯಾರಿಕೆ ಹೇಗಿರಬೇಕು ಎನ್ನುವ ಬಗ್ಗೆ ಬಿಸಿಸಿಐ ತಂಡದ ಕ್ಯಾಪ್ಟನ್ ಹಾಗೂ ಇನ್ನಿತರ ಸದಸ್ಯರ ಜೊತೆಗೆ ಕೂತು ಚರ್ಚೆ ನಡೆಸಿದ್ದು, ಕೊನೆಗೂ ಭಾರತದ ಸೋಲಿಗೆ ಕಾರಣ ಏನು ಎಂದು ತಿಳಿದುಬಂದಿದೆ.

ಚರ್ಚೆ ನಡೆಸಿದ ಸಭೆಯಲ್ಲಿ ಚರ್ಚೆಯಾಗಿ ತಿಳಿದುಬಂದಿರುವ ಪ್ರಕಾರ, ಮಧ್ಯಮ ಓವರ್ ಗಳಲ್ಲಿ ಭಾರತ ತಂಡದ ಪ್ರದರ್ಶನ ಚೆನ್ನಾಗಿಲ್ಲದ ಕಾರಣ ಪಂದ್ಯಗಳಲ್ಲಿ ಸೋಲು ಅನುಭವಿಸುವ ಹಾಗೆ ಆಯಿತು ಎಂದು ತಿಳಿದುಬಂದಿದೆ. 7 ರಿಂದ 15ನೇ ಓವರ್ ವರೆಗೂ ಬ್ಯಾಟಿಂಗ್ ನಲ್ಲಿ ಹೆಚ್ಚಿನ ರನ್ ಗಳು ಬಂದಿಲ್ಲ, ಪಾಕಿಸ್ತಾನ್ ವಿರುದ್ಧದ ಮೊದಲ ಪಂದ್ಯದಲ್ಲಿ 59ರನ್ ಗಳಿಸಿ, 3 ವಿಕೆಟ್ಸ್ ಕಳೆದುಕೊಂಡಿತ್ತು. ಹಾಂಗ್ ಕಾಂಗ್ ವಿರುದ್ಧ 62 ರನ್ ಗಳಿಸಿತ್ತು, ಹಾಗೂ ಸೂಪರ್ 4 ಹಂತದಲ್ಲಿ ಪಾಕಿಸ್ತಾನ್ ವಿರುದ್ಧ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತ್ತು. ಹಾಗಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಪ್ರವೀಣತೆ ಇರಬೇಕು ಎಂದು ಬಿಸಿಸಿಐ ವಾರ್ನಿಂಗ್ ನೀಡಿದೆ ಎಂದು ಮಾಹಿತಿ ಸಿಕ್ಕಿದೆ.