ತಂಡದಲ್ಲಿ ಮಹತ್ವದ ಬದಲಾವಣೆ ನಡೆಯುತ್ತದೆಯೇ?? ಕೊಹ್ಲಿ – ರಾಹುಲ್ ನಡುವೆ ಯಾರು ಆರಂಭಿಕರಂತೆ ಗೊತ್ತೇ?? ರೋಹಿತ್ ಹೇಳಿದ್ದೇನು ಗೊತ್ತೇ??

ತಂಡದಲ್ಲಿ ಮಹತ್ವದ ಬದಲಾವಣೆ ನಡೆಯುತ್ತದೆಯೇ?? ಕೊಹ್ಲಿ – ರಾಹುಲ್ ನಡುವೆ ಯಾರು ಆರಂಭಿಕರಂತೆ ಗೊತ್ತೇ?? ರೋಹಿತ್ ಹೇಳಿದ್ದೇನು ಗೊತ್ತೇ??

ಮುಂದಿನ ತಿಂಗಳು 11 ರಿಂದ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ, ಅದಕ್ಕಿಂತ ಮೊದಲು ಸೆಪ್ಟೆಂಬರ್ 20ರಿಂದ ಪಂಜಾಬ್ ನ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವರ್ಸಸ್ ಭಾರತ ಸರಣಿ ಪಂದ್ಯಗಳು ಶುರುವಾಗಲಿದೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಶುರು ಆಗುವುದಕ್ಕಿಂತ ಮೊದಲು, ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಕೆಲವು ಮಹತ್ವದ ಮಾತುಗಳನ್ನಾಡಿದ್ದಾರೆ, ವಿಶ್ವಕಪ್ ನಲ್ಲಿ ಓಪನರ್ ಆಟಗಾರರ ಬಗ್ಗೆ ಹೇಳಿಕೆ ನೀಡಿದ್ದಾರೆ..

ಸಾಮಾನ್ಯವಾಗಿ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಅವರೇ ಓಪನರ್ ಗಳಾಗಿರುತ್ತಿದ್ದರು, ಆದರೆ ಏಷ್ಯಾಕಪ್ ನಲ್ಲಿ ಕೆ.ಎಲ್.ರಾಹುಲ್ ಅವರು ಕಳಪೆ ಪ್ರದರ್ಶನ ನೀಡಿದರು, ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಓಪನರ್ ಆಗಿ ಕಣಕ್ಕೆ ಇಳಿದು, ಅದ್ಭುತವಾದ ಪ್ರದರ್ಶನ ನೀಡಿದರು, ಹಾಗಾಗಿ ವಿರಾಟ್ ಅವರು ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ, ಇದೀಗ ರೋಹಿತ್ ಶರ್ಮಾ ಅವರು ಸಹ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. “ವಿರಾಟ್ ಕೋಹ್ಲಿ ಅವರು ನಮ್ಮ ಮೂರನೇ ಓಪನರ್ ಆಗಿರುತ್ತಾರೆ, ಕೆಲವು ಪಂದ್ಯಗಳಲ್ಲಿ ಅವರು ಓಪನಿಂಗ್ ಮಾಡಬೇಕಾಗಬಹುದು, ಆದರೆ ಭಾರತ ತಂಡದ ಓಪನರ್ ಆಗಿ ಕೆ.ಎಲ್.ರಾಹುಲ್ ಅವರು ಇರುತ್ತಾರೆ. ಅವರ ಕೆಲವು ಪ್ರದರ್ಶನಗಳು ನಮ್ಮ ಗಮನಕ್ಕೆ ಬರುವುದಿಲ್ಲ..” ಎಂದಿದ್ದಾರೆ ರೋಹಿತ್ ಶರ್ಮಾ.

“ಕೆ.ಎಲ್.ರಾಹುಲ್ ನಮಗೆ ಬಹಳ ಮುಖ್ಯವಾದ ಆಟಗಾರ. ಕಳೆದ ಮೂರು ವರ್ಷಗಳಿಂದ ಕೆ.ಎಲ್.ರಾಹುಲ್. ಅವರ ಪ್ರದರ್ಶನ ಹೇಗಿದೆ ಎಂದು ನಾವೆಲ್ಲಾ ನೋಡಿದ್ದೇವೆ. ಅವರ ಬಗ್ಗ ನಮಗೆ ಪೂರ್ತಿಯಾಗಿ ಸ್ಪಷ್ಟತೆ ಇದೆ. ಖ್ಯಾ ಖಿಚ್ಡಿ ಪಾಕ್ ರಹಾ ಹೈ ಎಂದು ನಮಗೆ ಗೊತ್ತಿದೆ ಎಂದು ಎಲ್ಲರಿಗು ಸ್ಪಷ್ಟವಾಗಿ ಹೇಳುತ್ತೇನೆ..” ಎಂದಿದ್ದಾರೆ ರೋಹಿತ್ ಶರ್ಮಾ. ಈ ಮೂಲಕ ಕೆ.ಎಲ್.ರಾಹುಲ್ ಅವರೇ ಆರಂಭಿಕ ಆಟಗಾರನಾಗಿ ಮುಂದುವರೆಯುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಏಷ್ಯಾಕಪ್ ನಲ್ಲಿ ಕೆ.ಎಲ್.ರಾಹುಲ್ ಅವರ ಪ್ರದರ್ಶನ ಮತ್ತು ಅವರ ಸ್ಟ್ರೈಕ್ ರೇಟ್ ಬಗ್ಗೆ ಈಗ ಭಾರಿ ಚರ್ಚೆಯಾಗುತ್ತಿದ್ದು, ರೋಹಿತ್ ಅವರೊಡನೆ ಓಪನಿಂಗ್ ಬ್ಯಾಟ್ಸ್ಮನ್ ಯಾರು ಎನ್ನುವ ಬಗ್ಗೆ ಸಹ ಬೇರೆ ಮಾತುಗಳೇ ಕೇಳಿ ಬರುತ್ತಿದೆ.