ಭಾರತಕ್ಕೆ ವಿಶ್ವಕಪ್ ಗೆದ್ದುಕೊಡಲಿರುವ ಟಾಪ್ ಇಬ್ಬರು ಆಟಗಾರರು ಯಾರ್ಯಾರು ಅಂತೇ ಗೊತ್ತೇ?? ಇವರಿಂದಾನೆ ಭಾರತಕ್ಕೆ ಕಪ್ ಎಂದ ಮಹೇಲಾ.

ಭಾರತಕ್ಕೆ ವಿಶ್ವಕಪ್ ಗೆದ್ದುಕೊಡಲಿರುವ ಟಾಪ್ ಇಬ್ಬರು ಆಟಗಾರರು ಯಾರ್ಯಾರು ಅಂತೇ ಗೊತ್ತೇ?? ಇವರಿಂದಾನೆ ಭಾರತಕ್ಕೆ ಕಪ್ ಎಂದ ಮಹೇಲಾ.

ನಮಸ್ಕಾರ ಸ್ನೇಹಿತರೇ ಇನ್ನು ಒಂದು ತಿಂಗಳ ಅಂತರದಲ್ಲಿ ಟಿ 20 ವಿಶ್ವಕಪ್ ಆರಂಭವಾಗಲಿದೆ. ಐಸಿಸಿ ಟ್ರೋಫಿಗಳ ಬರದಲ್ಲಿರುವ ಭಾರತ ತಂಡ ಈ ಭಾರಿ ಶತಾಯಗತಾಯ ಗೆಲ್ಲಲೇಬೆಕೆಂದು ಸಿದ್ದವಾಗಿದೆ. ಈ ನಡುವೆ 15 ಸದಸ್ಯರ ಭಾರತ ತಂಡ ಸಹ ಪ್ರಕಟವಾಗಿದೆ. ಹರ್ಷಲ್ ಪಟೇಲ್ ಹಾಗೂ ಜಸಪ್ರಿತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಇನ್ನು ಭಾರತ ತಂಡದ ಬಗ್ಗೆ ಮಾತನಾಡಿರುವ ಶ್ರೀಲಂಕಾ ತಂಡದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಈ ಭಾರಿ ಭಾರತ ಕಪ್ ಗೆಲ್ಲಬಹುದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಕ್ರಿಕೆಟ್ ತಂಡ ಈ ಇಬ್ಬರೂ ಆಟಗಾರರಿಂದ ಗೆದ್ದರೂ ಗೆಲ್ಲಬಹುದು ಎಂದು ಹೇಳಿದ್ದಾರೆ. ಬನ್ನಿ ಆ ಇಬ್ಬರು ಆಟಗಾರರು ಯಾರು ಎಂಬುದನ್ನು ತಿಳಿಯೋಣ.

1.ವಿರಾಟ್ ಕೊಹ್ಲಿ: ಸದ್ಯ ವಿರಾಟ್ ಕೊಹ್ಲಿ ತಮ್ಮ ಬಹುದಿನದ 71 ನೇ ಶತಕವನ್ನು ದಾಖಲಿಸಿ ಫಾರ್ಮ್ ಕಂಡು ಕೊಂಡಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್ ನಲ್ಲಿದ್ದಾಗ ಭಾರತ ತಂಡ ಸದಾ ಯಶಸ್ಸುಗಳಿಸಿದೆ. ಹೀಗಾಗಿ ಈ ಭಾರಿ ಸಹ ಯಶಸ್ವಿಯಾಗುವ ನೀರಿಕ್ಷೆ ಇದೆ. ಒಮ್ಮೆ ವಿರಾಟ್ ಫಾರ್ಮ್ ಗೆ ಮರಳಿದರೇ ಅವರನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ ಭಾರತ ಈ ಭಾರಿ ವಿಶ್ವಕಪ್ ಎತ್ತಿ ಹಿಡಿಯಬಹುದು.

2.ಜಸಪ್ರಿತ್ ಬುಮ್ರಾ : ಭಾರತ ಟಿ 20 ತಂಡಕ್ಕೆ ಬುಮ್ರಾ ಮರಳಿದ್ದಾರೆ. ಏಷ್ಯಾ ಕಪ್ ನಲ್ಲಿ ಅವರ ಅನುಪಸ್ಥಿತಿ ಬಹಳ ಕಾಡಿತ್ತು. ಪವರ್ ಪ್ಲೇ, ಸ್ಲಾಗ್ ಓವರ್ ಗಳಲ್ಲಿ ಬುಮ್ರಾ ವಿಕೇಟ್ ತೆಗೆಯುವ ಸಾಮರ್ಥ ಹೊಂದಿದ್ದಾರೆ. ಹಾಗಾಗಿ ಭಾರತ ತಂಡ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲಬೇಕು ಎಂದರೆ ಒಂದು ಕಡೆ ತಂಡದ ಸಂಯೋಜನೆ ಉತ್ತಮವಾಗಿ ಇರಬೇಕು ಎಂದಾದರೆ ಮತ್ತೊಂದೆಡೆ ಬ್ಯಾಟಿಂಗ್ ನಲ್ಲಿ ಕಿಂಗ್ ಕೊಹ್ಲಿ ಹಾಗೂ ಬೌಲಿಂಗ್ ನಲ್ಲಿ ಬುಮ್ರಾ ಮಿಂಚಲೇ ಬೇಕಾದ ಅವಶ್ಯಕತೆ ಇದೆ ಎಂಬುದು ಮತ್ತೊಮ್ಮೆ ಸಾಬಿಟ್ಟಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ