ಬಲಿಷ್ಠ ಆಸ್ಟ್ರೇಲಿಯಾ ತಂಡದ ಸರಣಿಗೂ ಮುನ್ನವೇ ಭಾರತ ತಂಡಕ್ಕೆ ಬಿಗ್ ಶಾಕ್: ಹೊರ ಹೋದ ಪ್ರಮುಖ ಸ್ಟಾರ್ ಆಟಗಾರ ಯಾರು ಗೊತ್ತೇ??

ಬಲಿಷ್ಠ ಆಸ್ಟ್ರೇಲಿಯಾ ತಂಡದ ಸರಣಿಗೂ ಮುನ್ನವೇ ಭಾರತ ತಂಡಕ್ಕೆ ಬಿಗ್ ಶಾಕ್: ಹೊರ ಹೋದ ಪ್ರಮುಖ ಸ್ಟಾರ್ ಆಟಗಾರ ಯಾರು ಗೊತ್ತೇ??

ಟಿ20 ವಿಶ್ವಕಪ್ ಪಂದ್ಯಗಳು ಮುಂದಿನ ತಿಂಗಳು ಶುರುವಾಗಲಿದೆ, ಇದಕ್ಕಿಂತ ಮೊದಲು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸರಣಿ ಪಂದ್ಯಗಳು ಭಾರತದಲ್ಲಿ ನಡೆಯಲಿದೆ. ಈ ಪಂದ್ಯಗಳು ಬಹಳ ಮಹತ್ವದ ಪಂದ್ಯಗಳಾಗಿದ್ದವು. ಆದರೆ ಈಗ ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳು ಶುರು ಆಗುವುದಕ್ಕಿಂತ ಮೊದಲೇ, ಭಾರತ ತಂಡಕ್ಕೆ ಒಂದು ದೊಡ್ಡ ಶಾಕ್ ಸಿಕ್ಕಿದೆ. ಆಸ್ಟ್ರೇಲಿಯಾ ಮ್ಯಾಚ್ ನಲ್ಲಿ ಆಡಬೇಕಿದ್ದ ಪ್ರಮುಖ ಆಟಗಾರ ಒಬ್ಬರಿಗೆ ಕೋವಿಡ್ ಸೋಂಕು ಪಾಸಿಟಿವ್ ಆಗಿದೆ.

ಈ ಸಮಯದಲ್ಲಿ ಕೋವಿಡ್ ಸೋಂಕಿಗೆ ಗುರಿಯಾಗಿರುವ ಆಟಗಾರ ಮತ್ಯಾರು ಅಲ್ಲ, ಹಿರಿಯ ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರು. ಇವರನ್ನು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡದ ವಿರುದ್ಧದ ಪಂದ್ಯಗಳಿಗೆ ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು, ಟಿ20 ವಿಶ್ವಕಪ್ ತಂಡಕ್ಕೆ ಮೀಸಲು ಆಟಗಾರನ ಪಟ್ಟಿಯಲ್ಲಿ ಶಮಿ ಇದ್ದರು. ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಶಮಿ ಅವರು ಉತ್ತಮ ಪ್ರದರ್ಶನ ನೀಡಿದರೆ, ವಿಶ್ವಕಪ್ ತಂಡಕ್ಕೂ ಅವರು ಆಯ್ಕೆಯಾಗುವ ಸಾಧ್ಯತೆ ಇತ್ತು. ಆದರೆ ಈಗ ಶಮಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಆಸ್ಟ್ರೇಲಿಯಾ ತಂಡದಿಂದ ಹೊರಬಂದಿದ್ದಾರೆ.

ಶಮಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ಭಾರತ ತಂಡಕ್ಕೆ ದೊಡ್ಡ ಹೊಡೆತವೇ ಆಗಿದೆ. ಭಾರತ ತಂಡ ಪಂಜಾಬ್ ನ ಮೊಹಾಲಿಯಲ್ಲಿದೆ, ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ನಡೆಯಲಿದೆ. ಬಿಸಿಸಿಐ ಸಹ ಮೊಹಾಲಿ ತಲುಪಿದಾಗ, ಮೊಹಮ್ಮದ್ ಶಮಿ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವ ವಿಚಾರ ತಿಳಿದುಬಂದಿದೆ. ಪ್ರಸ್ತುತ ಶಮಿ ಅವರ ಬದಲಾಗಿ ಮತ್ತೊಬ್ಬ ಅನುಭವಿ ಆಟಗಾರ ಉಮೇಶ್ ಯಾದವ್ ಅವರನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿರುವ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಶಮಿ ಅವರು ಈಗ ಬೇಗ ಕೋವಿಡ್ ಇಂದ ಚೇತರಿಸಿಕೊಳ್ಳಬೇಕು. ಒಂದು ವೇಳೆ ಶಮಿ ಅವರಿಗೆ ಕೋವಿಡ್ ಸೋಂಕು ನೆಗಟಿವ್ ಬರದೆ ಹೋದರೆ, ಸೌತ್ ಆಫ್ರಿಕಾ ವಿರುದ್ಧದ ಪಂದ್ಯಗಳಿಂದಲೂ ಹೊರಗುಳಿಯುವ ಹಾಗೆ ಆಗುತ್ತದೆ.