ಭಾರತಕ್ಕೆ ಬರುತ್ತಿರುವ ಚಿರತೆಗಳ ವಿಶೇಷತೆ ಏನು ಗೊತ್ತೇ?? ಯಾಕೆ ಇದೇ ಚಿರತೆಗಳು ಬೇಕು ಎಂದು ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ ಗೊತ್ತೇ?

ಭಾರತಕ್ಕೆ ಬರುತ್ತಿರುವ ಚಿರತೆಗಳ ವಿಶೇಷತೆ ಏನು ಗೊತ್ತೇ?? ಯಾಕೆ ಇದೇ ಚಿರತೆಗಳು ಬೇಕು ಎಂದು ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ ಗೊತ್ತೇ?

ಬರೋಬ್ಬರಿ 7 ದಶಕಗಳ ನಂತರ ಚೀತಾಗಳು ಮಿಂಚಿನ ವೇಗದಲ್ಲಿ ಓಡುವುದನ್ನು ನಮ್ಮ ದೇಶದಲ್ಲಿ ನೋಡಬಹುದು. ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯ ಅಡಿಯಲ್ಲಿ ನಮಿಬಿಯಾ ಇಂದ 8 ಚೀತಾಗಳನ್ನು ಭಾರತಕ್ಕೆ ತರಲಾಗುತ್ತಿದೆ. ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ, ಅದರ ವಿಶೇಷವಾಗಿ
ನಮಿಬಿಯಾ ಇಂದ 6 ವರ್ಷದ 3 ಗಂಡು ಮತ್ತು 5 ಹೆಣ್ಣು ಚೀತಾಗಳನ್ನು ಮಧ್ಯಪ್ರದೇಶದ ಕುನ್ಹೋಪಾಲ್‌ಪುರ್ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ವಿಶೇಷ ವಿಮಾನದ ಮೂಲಕ ತರಲಾಗುತ್ತಿದೆ. ಈಗಾಗಲೇ ಚೀತಾಗಳು ಇರುವ 717 ಜಂಬೊಜೆಟ್ ವಿಮಾನ ನಮಿಬಿಯಾ ಇಂದ ಟೇಕ್ ಆಗಿದ್ದು, ನಾಳೆ ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯರ್ ಗೆ ಬರಲಿದೆ. ಅಲ್ಲಿಂದ ಚೀತಾಗಳನ್ನು ಹೆಲಿಕಾಪ್ಟರ್ ಮೂಲಕ ಮಧ್ಯಪ್ರದೇಶದ ಕುನ್ಹೋ ನ್ಯಾಷನಲ್ ಪಾರ್ಕ್ ಗೆ ತರಲಾಗುತ್ತಿದೆ.

ಮೋದಿ ಅವರೇ ಚೀತಾಗಳನ್ನು ರಿಲೀಸ್ ಮಾಡಲಿದ್ದು, ಈ ಪ್ರಯಾಣದಲ್ಲಿ ಅವುಗಳಿಗೆ ಯಾವುದೇ ತೊಂದರೆ ಆಗದ ಹಾಗೆ ಎಚ್ಚರಿಕೆ ವಹಿಸಲಾಗುತ್ತಿದೆ. ಚೀತಾಗಳನ್ನು ಭಾರತಕ್ಕೆ ಕಳಿಸುವ ಮೊದಲು, ಒಂದು ತಿಂಗಳು ಕ್ವಾರಂಟೈನ್ ಮಾಡಿ ಲಸಿಕೆ ಹಾಕಿಸಲಾಗಿದೆ. ಭಾರತದಲ್ಲಿರುವ ವಾತವಾರಣಕ್ಕೆ ಚೀತಾಗಳು ಹೊಂದಿಕೊಳ್ಳಲು ಕೆಲ ಸಮಯ ತೆಗೆದುಕೊಳ್ಳುತ್ತದೆ, ಹಾಗಾಗಿ ಅವುಗಳಿಗೆ ಫ್ರೀಯಾಗಿ ಓಡಾಡುವ ಅವಕಾಶ ನೀಡಲಾಗುತ್ತದೆ. ಚೀತಾಗಳನ್ನು ಹೊತ್ತು ತರುತ್ತಿರುವ ವಿಮಾನಕ್ಕೆ ಚೀತಾ ಮುಖದ ಪೇಂಟಿಂಗ್ ಅನ್ನೇ ಮಾಡಲಾಗಿದೆ. ಈ ಕಾರ್ಗೋ ವಿಮಾನ ನಮಿಬಿಯಾದಲ್ಲಿ ಹೊರಟು ನೇರವಾಗಿ ಭಾರತದಲ್ಲಿ ಲ್ಯಾಂಡ್ ಆಗಲಿದೆ. ವಿಮಾನದ ಒಳಗೆ ಚೀತಾಗಳಿಗೆ ವಿಶೇಷವಾಗಿ ಬೋನ್ ಇಡಲಾಗಿದ್ದು, ಪ್ರಯಾಣದ ಸಮಯದಲ್ಲಿ ಅವುಗಳಿಗೆ ಆಹಾರ ನೀಡುವುದಿಲ್ಲ.

ಚೀತಾಗಳನ್ನು ಕರೆತರಲು ಮೂವರು ಸಿಬ್ಬಂದಿಗಳು ಹಾಗೂ ಒಬ್ಬ ಪಶುವೈದ್ಯರನ್ನು ಜೊತೆಗಿರಿಸಲಾಗಿದೆ. ಮಚ್ಚೆ ಗುರುತುಗಳು ಇರುವ ಚೀತಾಳ ಸಂತತಿ ಭಾರತದಲ್ಲಿ ಈಗಾಗಲೇ ನಾಶವಾಗಿದೆ. ಮಚ್ಚೆಗಳಿದ್ದ ಭಾರತದ ಕೊನೆಯ ಚೀತಾ 1947ರಲ್ಲಿ ಮೃತವಾಯಿತು. ಈ ಪ್ರಭೇಧವು ಭಾರತದಲ್ಲಿ ಇಲ್ಲ ಎಂದು 1952 ರಲ್ಲಿ ಘೋಷಣೆ ಮಾಡಿದರು. ಆಫ್ರಿಕನ್ ಚೀತಾಗಳನ್ನು ಕರೆತರಲು 1975ರಲ್ಲಿ ಅನುಷ್ಠಾನ ಮಾಡಲಾಗಿದ್ದು, ಆದರೆ ಹಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ 75 ವರ್ಷಗಳ ನಂತರ ಚೀತಾಗಳು ಭಾರತಕ್ಕೆ ಬರುತ್ತಿದೆ. ಇವುಗಳಿಗೆ ಕುನ್ಹೋ ನ್ಯಾಷನಲ್ ಪಾರ್ಕ್ ನ ವಾತಾವರಣ ಹೊಂದಿಕೆ ಆಗಿದ್ದು, ಅಲ್ಲಿನ ಸುತ್ತಮುತ್ತಲಿನ 24 ಎಕರೆ ಜಾಗವನ್ನು ಖಾಲಿ ಮಾಡಲಾಗಿದೆ.

8 ಚೀತಾಳಿಗೆ 75 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಚೀತಾಗಳಲ್ಲಿ ತೆಳುಕಪ್ಪು ಬಣ್ಣದ ಮಚ್ಚೆಗಳು ಕಂಡುಬರುತ್ತದೆ ಹಾಗೂ ಚಿರತೆಗಳಲ್ಲಿ ಕಡುಕಪ್ಪು ಪಿಂಕ್ ಬಣ್ಣದ ಪಕಳೆ ಆಕಾರದ ಮಚ್ಚೆಗಳು ಕಾಣಸಿಗುತ್ತದೆ. ಚಿರತೆಯು ಗಂಟೆಗೆ 58 ಕಿಮೀ ವೇಗದಲ್ಲಿ ಓಡುತ್ತದೆ, ಆದರೆ ಚೀತಾ ಗಂಟೆಗೆ 120 ಕಿಮೀ ವೇಗದಲ್ಲಿ ಓಡುತ್ತದೆ. ಮರ ಹತ್ತುವುದರಲ್ಲಿ ಚಿರತೆ ಎಕ್ಸ್ಪರ್ಟ್ ಆಗಿರುತ್ತದೆ. ಆದರೆ ಚೀತಾ ಬೇಟೆಯಾಡುವ ಸಮಯದಲ್ಲಿ ಚುರುಕಾಗಿ ದಿಕ್ಕು ಬದಲಾಯಿಸುತ್ತದೆ. ಇಷ್ಟೇ ಅಲ್ಲದೆ, ಚೀತಾಗಳ ದೇಹದ ತೂಕ ಕಡಿಮೆ ಇರುತ್ತದೆ ಹಾಗೂ ಚಿರತೆಗಳ ದೇಹದ ತೂಕ ಜಾಸ್ತಿ ಇರುತ್ತದೆ.