ಅತ್ಯದ್ಭುತ ಫಾರ್ಮ್: ರೋಹಿತ್, ರಾಹುಲ್ ಗಿಂತ ಈತನೇ ಬೆಸ್ಟ್. ಆದರೂ ರಾಹುಲ್-ರೋಹಿತ್ ಕಡೆಯಿಂದ ಮೋಸ: ಆ ನತದೃಷ್ಟ ಆಟಗಾರ ಯಾರು ಗೊತ್ತೇ??

ಅತ್ಯದ್ಭುತ ಫಾರ್ಮ್: ರೋಹಿತ್, ರಾಹುಲ್ ಗಿಂತ ಈತನೇ ಬೆಸ್ಟ್. ಆದರೂ ರಾಹುಲ್-ರೋಹಿತ್ ಕಡೆಯಿಂದ ಮೋಸ: ಆ ನತದೃಷ್ಟ ಆಟಗಾರ ಯಾರು ಗೊತ್ತೇ??

ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್ ಪಂದ್ಯಗಳಿಗೆ ಬಿಸಿಸಿಐ ಈಗಾಗಲೇ 15ಸದಸ್ಯಯೂ ಹಾಗೂ 4 ಮೀಸಲು ಆಟಗಾರರ ತಂಡವನ್ನು ಪ್ರಕಟಿಸಿದೆ. ಈ ಬಾರಿ ಭಾರತ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಕೋಚ್ ರಾಹುಲ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಯುವ ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಅವಕಾಶ ಕೊಡುತ್ತಿದ್ದಾರೆ. ಆದರೆ ಅದ್ಭುತವಾಗಿ ಪರ್ಫಾರ್ಮ್ ಮಾಡುವ ಆ ಒಬ್ಬ ಯುವ ಆಟಗಾರನಿಗೆ ಕೋಚ್ ಹಾಗೂ ಕ್ಯಾಪ್ಟನ್ ಇಬ್ಬರು ಸಹ ಅವಕಾಶ ನೀಡಿಲ್ಲ.

ಆ ಯುವ ಆಟಗಾರ ಮತ್ಯಾರು ಅಲ್ಲ, ಶುಭಮನ್ ಗಿಲ್ ಅವರು. ಈ ವರ್ಷ ಐಪಿಎಲ್ ನಲ್ಲಿ ಅಮೋಘ ಪ್ರದರ್ಶನ ನೀಡಿ ತಮ್ಮ ತಂಡ ಫೈನಲ್ಸ್ ಗೆ ಪ್ರವೇಶ ಮಾಡಲು ಸಹಾಯವಾದರು ಗಿಲ್. ಈವರೆಗೂ ಇವರು ಆಡಿರುವ ಅಷ್ಟು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದರು ಸಹ ಮ್ಯಾನೇಜ್ಮೆಂಟ್ ಇವರನ್ನು ಆಯ್ಕೆ ಮಾಡಿಲ್ಲ. ಗಿಲ್ ಅವರಿಗೆ ಹೆಚ್ಚಿನ ಅವಕಾಶಗಳು ಕೂಡ ಸಿಕ್ಕಿಲ್ಲ. 2019 ನಲ್ಲಿ ಭಾರತದ ಪರವಾಗಿ ಮೊದಲ ಓಡಿಐ ಆಡಿದ ಶುಭಮನ್ ಗಿಲ್ ಅವರು ಓಡಿಐ ನಲ್ಲಿ 9 ಪಂದ್ಯಗಳನ್ನು ಆಡಿದ್ದು, 71.29ಸರಾಸರಿಯಲ್ಲಿ 499 ರನ್ಸ್ ಗಳಿಸಿದ್ದಾರೆ, ಇದರಲ್ಲಿ 1 ಶತಕ ಹಾಗೂ 3 ಅರ್ಧಶತಕ ಇದೆ. ಇನ್ನು ಶುಭಮನ್ ಗಿಲ್ ಅವರು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30.47ರ ಸರಾಸರಿಯಲ್ಲಿ, 579 ರನ್ ಗಳಿಸಿದ್ದಾರೆ.

ಶುಭಮನ್ ಗಿಲ್ ಅವರ ಆಟದ ವೈಖರಿ ಇಷ್ಟು ಚೆನ್ನಾಗಿದ್ದರು ಸಹ ಇವರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ. ಏಷ್ಯಾಕಪ್ ಪಂದ್ಯಗಳು ಶುರುವಾಗುವ ಮೊದಲು, ಭಾರತ ತಂಡವು ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸ ಮಾಡಿದಾಗ, ಶುಭಮನ್ ಗಿಲ್ ತಂಡದಲ್ಲಿದ್ದರು, ಆಗಲೂ ಸಹ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ 130 ರನ್ ಗಳನ್ನು ಸಿಡಿಸಿದ್ದರು. ಹಾಗೂ ಮೊದಲ ಓಡಿಐ ನಲ್ಲಿ 82 ರನ್ಸ್ ಭಾರಿಸಿದ್ದರು. ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಹ ದೊರೆಯಿತು. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರು ಪಂದ್ಯದಲ್ಲಿ 64, 43 ಹಾಗು 98 ರನ್ಸ್ ಭಾರಿಸಿದರು. ಶುಭಮನ್ ಗಿಲ್ ಅವರಿಗೆ ಇಲ್ಲಿ ಸಹ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿತು. ಇಷ್ಟೆಲ್ಲಾ ಇದ್ದರು ಸಹ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡದೆ ಇರುವುದು ನಿಜಕ್ಕೂ ಆಶ್ಚರ್ಯ ತರಿಸಿದೆ.