ಈರುಳ್ಳಿಯಿಂದ ನಿಮ್ಮ ದೇಹದಲ್ಲಿರುವ ಮಧುಮೇಹವನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳಬಹುದು. ಹೇಗೆ ಗೊತ್ತೆ?? ನೀವೇನು ಮಾಡಬೇಕು ಗೊತ್ತೇ??
ಈರುಳ್ಳಿಯಿಂದ ನಿಮ್ಮ ದೇಹದಲ್ಲಿರುವ ಮಧುಮೇಹವನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳಬಹುದು. ಹೇಗೆ ಗೊತ್ತೆ?? ನೀವೇನು ಮಾಡಬೇಕು ಗೊತ್ತೇ??
ಈರುಳ್ಳಿ ಪ್ರತಿದಿನ, ಪ್ರತಿ ಮನೆಗಳಲ್ಲೂ ಅಡುಗೆಗೆ ಬಳಸುವ ಪದಾರ್ಥ. ಈರುಳ್ಳಿ ಇಲ್ಲದೆ ಬಹುತೇಕ ಅಡುಗೆಗಳು ಪೂರ್ತಿ ಆಗುವುದಿಲ್ಲ ಎನ್ನುವುದು ಸತ್ಯ. ಈರುಳ್ಳಿ ಮಾಡಿದ ಕೆಲಸವನ್ನು ತಾಯಿ ಕೂಡ ಮಾಡೋದಿಲ್ಲ ಎನ್ನುವ ಆಡುಮಾತು ಸಹ ಇದೆ. ಈರುಳ್ಳಿಯನ್ನು ಅಡುಗೆಯ ಪದಾರ್ಥ ಎನ್ನುವುದರ ಜೊತೆಗೆ ಅದರಲ್ಲಿರುವ ಪೌಷ್ಟಿಕಾಂಶಗಳಿಂದ ಈರುಳ್ಳಿಯನ್ನು ಬಳಸಲಾಗುತ್ತದೆ. ಇವುಗಳ ಜೊತೆಗೆ ಇರುಳ್ಳಿ ಬ್ಯಾಕ್ಟಿರಿಯಾ ವಿರೋಧಿ ಆಗಿದ್ದು, ಇದರಲ್ಲಿ ಉರಿಯ ಲಕ್ಷಣ ಸಹ ಇದೆ. ಇಷ್ಟೇ ಅಲ್ಲದೆ, ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುವ, ಖನಿಜದ ಅಂಶಗಳು ಸಹ ಇದೆ. ಈರುಳ್ಳಿ ಕತ್ತರಿಸುವಾಗ ಕಣ್ಣುಗಳಿಂದ ನೀರು ಬಂದರು ಸಹ, ಇದರಲ್ಲಿ ಬಹಳಷ್ಟು ಆರೋಗ್ಯ ಪ್ರಯೋಜನ ಸಹ ಇದೆ..
ಈರುಳ್ಳಿಯಲ್ಲಿ ದೇಹದ ರಕ್ತವನ್ನು ಶುದ್ಧಿ ಮಾಡುವ ಅಂಶಗಳಿವೆ. ಈರುಲ್ಲಿಯಲ್ಲಿರುವ ಕೆಲವು ಅಂಶಗಳು ದೇಹಕ್ಕೆ ಕ್ಯಾನ್ಸರ್ ರೋಗ ಬರದ ಹಾಗೆ ತಡೆಗಟ್ಟುತ್ತದೆ. ಇಷ್ಟೇ ಅಲ್ಲದೆ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಸಾಮರ್ಥ್ಯ ಈರುಳ್ಳಿಗೆ ಇದೆ. ಹಲ್ಲುಗಳಿಗೆ ತಗಲುವ ಸೋಂಕುಗಳನ್ನು ಗುಣಪಡಿಸುವ ಶಕ್ತಿ ಈರುಳ್ಳಿ ಗೆ ಇದೆ. ಇನ್ನು ಈರುಳ್ಳಿಯನ್ನು ಹಸಿಯಾಗಿ ಸೇವಿಸುವುದರಿಂದ ಬಾಯಿಯಲ್ಲಿ ಇರುವ ಸೂಕ್ಷ್ಮಜೀವಗಳ ಅಂತ್ಯವಾಗುತ್ತದೆ. ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಈರುಳ್ಳಿ ಸಹಾಯ ಮಾಡುತ್ತದೆ. ರಕ್ತದ ಹರಿವು ತಡೆಯಲು ಸಹಾಯ ಮಾಡುತ್ತದೆ. ಆರೋಗ್ಯದ ವಿಚಾರದಲ್ಲಿ ಮಾತ್ರವಲ್ಲ, ಸೌಂದರ್ಯ ವರ್ಧನೆಯಲ್ಲು ಸಹ ಈರುಳ್ಳಿಯ ಪ್ರಯೋಜನ ಇದೆ, ಹಾಗಾಗಿ ಸೌಂದರ್ಯ ತಜ್ಞರು ಪ್ರತಿದಿನ ಈರುಳ್ಳಿ ಸೇವಿಸಿ ಎಂದು ಸಲಹೆ ನೀಡುತ್ತಾರೆ.
ಇತ್ತೀಚೆಗೆ ನಡೆಸಿರುವ ಸಂಶೋಧನೆಗಳ ಪ್ರಕಾರ ಈರುಳ್ಳಿ ಬಗ್ಗೆ ಇನ್ನೊಂದು ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಅದೇನೆಂದರೆ, ಈರುಳ್ಳಿ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮವಾದ ಆಹಾರ ಪದಾರ್ಥ ಆಗಿದೆ. ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇಡಲು, ಪ್ರತಿದಿನ ಎರಡು ಈರುಳ್ಳಿ ಸೇವಿಸಿದರೆ ಒಳ್ಳೆಯದು ಎಂದು ಅಧ್ಯಯನದ ಮೂಲಕ ತಿಳಿದುಬಂದಿದೆ. ಆಂಟಿ ಫಾರ್ಮಿನ್ ಎನ್ನುವ ಡ್ರಗ್ ಅನ್ನು ಟೈಪ್ 2 ಡೈಯಾಬಿಟಿಸ್ ಇರುವವರಿಗೆ ನೀಡಲಾಗುತ್ತದೆ. ಈ ಡ್ರಗ್ ಜೊತೆಗೆ ಈರುಳ್ಳಿ ಸೇವಿಸಿದರೆ, ಸಕ್ಕರೆಯ ಮಟ್ಟ ಶೇ.50ರಷ್ಟು ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿದುಬಂದಿದೆ. ಪ್ರಸ್ತುತ ಇದರ ಪ್ರಯೋಗ ಇಲಿಯ ಮೇಲೆ ಆಗಿದ್ದು, ಮನುಷ್ಯರ ಮೇಲೆ ಇನ್ನು ಪ್ರಯೋಗ ಮಾಡಿಲ್ಲ, ಹಾಗಾಗಿ ಅಧಿಕೃತವಾಗಿ ಈ ವಿಚಾರದ ಬಗ್ಗೆ ತೀರ್ಮಾನ ನೀಡಲು ಸಾಧ್ಯವಿಲ್ಲ. ಈ ಅಧ್ಯಯನ ನಡೆದ ಬಳಿಕ ಒಂದು ಪ್ರಶ್ನೆ ಸಹ ಶುರುವಾಗಿದೆ, ಭಾರತದ ಜನರು ಹೆಚ್ಚಾಗಿ ಈರುಳ್ಳಿ ಸೇವಿಸಿದರು ಸಹ ಅತಿಹೆಚ್ಚು ಮಧುಮೇಹಿಗಳು ಭಾರತದಲ್ಲಿ ಯಾಕಿದ್ದಾರೆ ಎನ್ನುವ ಪ್ರಶ್ನೆ ಶುರುವಾಗಿದೆ. ಅದರಿಂದಾಗಿ ಸರಿಯಾದ ಮಾಹಿತಿ ಸಿಗುವವರೆಗೂ ಕಾಯಬೇಕಿದೆ