ಬಿಗ್ ನ್ಯೂಸ್: ವಿಶ್ವಕಪ್ ತಂಡದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ: ಭಾರತ ತಂಡಕ್ಕೆ ಸೇರಿಕೊಳ್ಳಲಿರುವ ಖಡಕ್ ಆಟಗಾರ ಯಾರು ಗೊತ್ತೇ??

ಬಿಗ್ ನ್ಯೂಸ್: ವಿಶ್ವಕಪ್ ತಂಡದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ: ಭಾರತ ತಂಡಕ್ಕೆ ಸೇರಿಕೊಳ್ಳಲಿರುವ ಖಡಕ್ ಆಟಗಾರ ಯಾರು ಗೊತ್ತೇ??

ಆಸ್ಟ್ರೇಲಿಯಾದಲ್ಲಿ ಮುಂದಿನ ತಿಂಗಳು ಶುರುವಾಗಲಿರುವ ಟಿ20 ವಿಶ್ವಕಪ್ ಪಂದ್ಯಕ್ಕೆ ಈಗಾಗಲೇ ಭಾರತ ತಂಡ ಸದಸ್ಯರ ಪಟ್ಟಿಯನ್ನು ಆಯ್ಕೆ ಮಾಡಿ ಆಗಿದೆ, ಭಾರತ ತಂಡದಲ್ಲಿ ಬಲಿಷ್ಠ ಆಟಗಾರರು ಇದ್ದರು ಸಹ, ಕೆಲವು ಅನುಭವಿ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ ಎನ್ನುವ ವಿಚಾರದ ಬಗ್ಗೆ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಭಾರತ ತಂಡಕ್ಕೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿಲ್ಲ, ಮೀಸಲು ಆಟಗಾರರ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಹಿರಿಯ ಆಟಗಾರ ಮತ್ತು ಮಾಜಿ ಕೋಚ್ ರವಿ ಶಾಸ್ತ್ರಿ, ಮೊಹಮ್ಮದ್ ಅಜರುದ್ದೀನ್, ಕೆ.ಶ್ರೀಕಾಂತ್ ಅವರು ಸಹ ಆಯ್ಕೆ ಸಮಿತಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಬಿಸಿಸಿಐ ಮೋಹಮ್ಮದ್ ಶಮಿ ಅವರನ್ನು ಆಯ್ಕೆ ಮುಖ್ಯ ತಂಡಕ್ಕೆ ಆಯ್ಕೆ ಮಾಡದೆ ಇರುವುದಕ್ಕೆ ಒಂದು ಕಾರಣ ಸಹ ಇದೆ. ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ಮೊಹಮ್ಮದ್ ಶಮಿ ಅಬರು ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡಲಿಲ್ಲ. ಜೊತೆಗೆ ಆ ಪಂದ್ಯದ ಬಳಿಕ ಶಮಿ ಅವರು ಇನ್ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಸಹ ಆಡಿಲ್ಲ. ಆದರೆ 2022ರ ಐಪಿಎಲ್ ನಲ್ಲಿ ಮೊಹಮ್ಮದ್ ಶಮಿ ಅವರು ಉತ್ತಮವಾದ ಪ್ರದರ್ಶನ ನೀಡಿ, ಗುಜರಾತ್ ಟೈಟನ್ಸ್ ತಂಡದ ಪರವಾಗಿ 20 ವಿಕೆಟ್ಸ್ ಕಬಳಿಸಿದರು. ಹಾಗಾಗಿ ಮೊಹಮ್ಮದ್ ಶಮಿ ಅವರಂತಹ ಆಟಗಾರರನ್ನು ಮುಖ್ಯ ತಂಡಕ್ಕೆ ಆಯ್ಕೆ ಮಾಡಿಕೊಳ್ಳದೆ ಇರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಆದರೆ ಭಾರತ ತಂಡವು ಮೊಹಮ್ಮದ್ ಶಮಿ ಅವರಿಗೆ ಒಂದು ಅವಕಾಶ ಇದೆ. ವಿಶ್ವಕಪ್ ಗಿಂತ ಮೊದಲು ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳಲ್ಲಿ ಮುಖ್ಯ ಟೀಮ್ ಗೆ ಶಮಿ ಅವರು ಆಯ್ಕೆಯಾಗಿದ್ದು, ಆ ಸರಣಿಗಳಲ್ಲಿ ಮೊಹಮ್ಮದ್ ಶಮಿ ಅವರು ಉತ್ತಮ ಪ್ರದರ್ಶನ ನೀಡಿದರೆ, ಟಿ20 ವಿಶ್ವಕಪ್ ಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಟಿ20 ವಿಶ್ವಕಪ್ ಗೆ ತಂಡ ಆಯ್ಕೆಯಾಗಿದ್ದರು ಸಹ, ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡುವ ಆಯ್ಕೆಯನ್ನು ಐಸಿಸಿ ನೀಡಿದೆ, ಈ ಹಿಂದೆ ಸಹ ಈ ರೀತಿಯ ಘಟನೆ ನಡೆದಿತ್ತು. ಹಾಗಾಗಿ ಮೊಹಮ್ಮದ್ ಶಮಿ ಅವರು ಆಯ್ಕೆಯಾಗುವುದಕ್ಕೆ ಇನ್ನು ಒಂದು ಅವಕಾಶ ಇದೆ. ಹಾಗಾಗಿ ಮುಂಬರುವ ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಅವರು ಉತ್ತಮ ಪ್ರದರ್ಶನ ನೀಡುವುದರ ಮೇಲೆ ಎಲ್ಲವೂ ನಿಂತಿದೆ.