ಬಿಗ್ ನ್ಯೂಸ್: ಬಾಯ್ ಕಾಟ್ ಮಾಡುವ ಅಗತ್ಯತೆ ಇಲ್ಲ ಅನಿಸುತ್ತಿದೆ- ಪ್ರೀಮಿಯೂರ್ ಶೋ ನೋಡಿದವರು ಬ್ರಹ್ಮಾಸ್ತ್ರ ಗೆ ಕೊಟ್ಟ ರಿವ್ಯೂ ಹೇಗಿದೆ ಗೊತ್ತೇ??

ಬಿಗ್ ನ್ಯೂಸ್: ಬಾಯ್ ಕಾಟ್ ಮಾಡುವ ಅಗತ್ಯತೆ ಇಲ್ಲ ಅನಿಸುತ್ತಿದೆ- ಪ್ರೀಮಿಯೂರ್ ಶೋ ನೋಡಿದವರು ಬ್ರಹ್ಮಾಸ್ತ್ರ ಗೆ ಕೊಟ್ಟ ರಿವ್ಯೂ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ನಲ್ಲಿ ತಯಾರಾಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಆಗುತ್ತಿರುವುದು ಬ್ರಹ್ಮಾಸ್ತ್ರ ಸಿನಿಮಾ, ರಣಬೀರ್ ಕಪೂರ್ ನಾಯಕನಾಗಿ, ಆಲಿಯಾ ಭಟ್ ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು ಬ್ರಹ್ಮಾಸ್ತ್ರ ದೇಶಾದ್ಯಂತ ತೆರೆಕಾಣುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ಆಗುವ ಮೊದಲೇ ಈ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಎಲ್ಲಾ ವಿವಾದಗಳ ನಡೆವೆಯು ಬ್ರಹ್ಮಾಸ್ತ್ರ ಸಿನಿಮಾ ತೆರೆಕಾಣುತ್ತಿದೆ. ಈಗಾಗಲೇ ಬ್ರಹ್ಮಾಸ್ತ್ರ ಸಿನಿಮಾದ ಮೊದಲ ರಿವ್ಯೂ ಸಹ ಹೊರಬಂದಿದ್ದು, ಉಮೈರ್ ಸಂದು ಅವರು ಬ್ರಹ್ಮಾಸ್ತ್ರ ಸಿನಿಮಾ ನೋಡಿ ರಿವ್ಯೂ ಹಂಚಿಕೊಂಡಿದ್ದಾರೆ.

ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನೆಗಟಿವ್ ಅಂಶಗಳು ಹೆಚ್ಚಾಗಿವೆ ಎಂದು ಉಮೈರ್ ಅವರು ಹೇಳಿದ್ದು, ಸಿನಿಮಾ ಬಿಡುಗಡೆ ಆಗಲು ಇನ್ನು ಸ್ವಲ್ಪ ಸಮಯ ಮಾತ್ರ ಇರುವಾಗ, ಅವರು ನೀಡಿರುವ ಈ ರಿವ್ಯೂ ಬ್ರಹ್ಮಾಸ್ತ್ರ ಸಿನಿಮಾ ಮೇಲೆ ಪರಿಣಾಮ ಬೀರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಎಲ್ಲ ಅರ್ಥದಲ್ಲೂ ಬ್ರಹ್ಮಾಸ್ತ್ರ ಸಿನಿಮಾ ದೊಡ್ಡ ಸಿನಿಮಾ ಆಗಿಯೇ ಕಾಣಿಸಿಕೊಂಡಿದೆ, ಚಿತ್ರತಂಡ ಬ್ರಹ್ಮಾಸ್ತ್ರ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಿತ್ತು, ಆದರೆ ಒಂದು ಸಿನಿಮಾಗೆ ಮುಖ್ಯವಾದ ಅಂಶ ಕಥೆ, ಈ ಸಿನಿಮಾದ ಕಥೆಯಲ್ಲಿ ವೀಕ್ಷಕರನ್ನು ಹಿಡಿದಿಡುವ ಅಂಶ ಇಲ್ಲದ ಕಾರಣ ಬ್ರಹ್ಮಾಸ್ತ್ರ ಸಿನಿಮಾ ನಿರಾಶೆ ಮೂಡಿಸಿದೆ ಎಂದಿದ್ದಾರೆ ವಿಮರ್ಶಕ ಉಮೈರ್. ಆದರೆ ಬ್ರಹ್ಮಾಸ್ತ್ರ ಸಿನಿಮಾಗೆ ಭಾರಿ ಪ್ರಚಾರ ಮಾಡಿರುವ ಕಾರಣ, ಓಪನಿಂಗ್ ಕಲೆಕ್ಷನ್ ಚೆನ್ನಾಗಿಯೇ ಆಗುತ್ತದೆ ಎನ್ನುವ ಅಭಿಪ್ರಾಯ ಇದೆ, ಆದರೆ ಅದು ಒಂದೆರಡು ದಿನಕ್ಕೆ ಮಾತ್ರ ಸೀಮಿತ.

ಬ್ರಹ್ಮಾಸ್ತ್ರ ಅಂತಹ ಸಾಕಷ್ಟು ಸಿನಿಮಾಗಳು ಬಾಲಿವುಡ್ ನಲ್ಲಿಯೇ ಈಗಾಗಲೇ ಬಂದು ಹೋಗಿದೆ, ಈಗಿನ ದಿನಗಳಲ್ಲಿ ಸಿನಿಪ್ರಿಯರನ್ನು ಥಿಯೇಟರ್ ಕಡೆಗೆ ಸೆಳೆಯಲು ಸಿನಿಮಾದಲ್ಲಿ ವಿಶೇಷವಾದ ಅಂಶ ಯಾವುದಾದರೂ ಒಂದು ಇರಲೇಬೇಕು. ಬಿಡುಗಡೆ ಆಗುವ ಎಲ್ಲಾ ಬಿಗ್ ಬಜೆಟ್, ಹಾಗೂ ಸ್ಟಾರ್ ಗಳು ನಟಿಸಿರುವ ಸಿನಿಮಾಗಳು ಹಿಟ್ ಲಿಸ್ಟ್ ಸೇರುವುದಿಲ್ಲ ಎನ್ನುವುದಕ್ಕೆ ಬ್ರಹ್ಮಾಸ್ತ್ರ ಸಿನಿಮಾ ಸಾಕ್ಷಿ ಎಂದರೆ ತಪ್ಪಾಗುವುದಿಲ್ಲ. ಈ ಸಿನಿಮಾ ವಿಚಾರದಲ್ಲಿ ನಿರ್ದೇಶಕರಿಗೆ ಪ್ರಶಂಸೆ ನೀಡಬೇಕು, ಆದರೆ ಕಥೆಯಲ್ಲಿ ಗ್ರಿಪ್ ಇಲ್ಲದ ಕಾರಣ ವೀಕ್ಷಕರಿಗೆ ಸಿನಿಮಾ ಇಷ್ಟವಾಗುವುದು ಕಷ್ಟಕರವಾಗಿದೆ. ಈ ಸಿನಿಮಾದಲ್ಲಿ ನಟ ರಣಬೀರ್ ಕಪೂರ್ ಅವರ ಪಾತ್ರ ಗೊಂದಲಮಯ ಆಗಿರುವ ಹಾಗೆ ತೋರುತ್ತದೆ, ಇನ್ನು ಆಲಿಯಾ ಭಟ್ ತಮಗೆ ಕೊಟ್ಟಿರುವ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಮೌನಿ ರಾಯ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ, ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ತಕ್ಕ ಪಾತ್ರವಾಗಿದೆ, ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಹಾಗೂ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬಳಸಿರುವ ಗ್ರಾಫಿಕ್ಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿದೆ ಎಂದು ಉಮೈರ್ ಸಂದು ಅವರು ತಿಳಿಸಿದ್ದು, ಬ್ರಹ್ಮಾಸ್ತ್ರ ಸಿನಿಮಾಗೆ 2.5 ರೇಟಿಂಗ್ ಕೊಟ್ಟಿದ್ದಾರೆ. ಜನರು ಈ ರಿವ್ಯೂ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಸಿನಿಮಾ ಕ್ರಿಯೇಟ್ ಮಾಡಿರುವ ಹೈಪ್ ಇಂದ ಒಂದು ಸಾರಿ ಥಿಯೇಟರ್ ಗೆ ಹೋಗಿ ಬ್ರಹ್ಮಾಸ್ತ್ರ ಸಿನಿಮಾ ನೋಡಿ ಬರುತ್ತಾರೆಯೇ?? ಅದು ಕೂಡ ಸಾದ್ಯವಿದ್ದಂತೆ ಕಾಣಿಸುತ್ತಿಲ್ಲ ಯಾಕೆಂದರೆ ಬಾಯ್ಕಾಟ್ ಬ್ರಹ್ಮಾಸ್ತ್ರ ಹ್ಯಾಶ್ ಟ್ಯಾಗ್ ಜೋರಾಗಿ ಸದ್ದು ಮಾಡಿದೆ. ಈಗಿರುವಾಗ ನಿಜಕ್ಕೂ ಹಾಕಿರುವ ಬಂಡವಾಳ ಆದರೂ ವಾಪಸ್ಸು ಬರುವುದು ಅನುಮಾನವೇ ಸರಿ.