ನಿನ್ನೆ ಚೆನ್ನಾಗಿ ಆಡಿರಬಹುದು, ಆದರೆ ರಾಹುಲ್ ಸ್ಥಾನಕ್ಕೆ ನಡೆಯುತ್ತಿದೆ ಬಾರಿ ಪೈಪೋಟಿ: ವಿಶ್ವಕಪ್ ನಲ್ಲಿ ಯಾರು ಕೆ ಎಲ್ ರಾಹುಲ್ ಸ್ಥಾನ ತುಂಬಬಹುದು ಗೊತ್ತೇ?

ನಿನ್ನೆ ಚೆನ್ನಾಗಿ ಆಡಿರಬಹುದು, ಆದರೆ ರಾಹುಲ್ ಸ್ಥಾನಕ್ಕೆ ನಡೆಯುತ್ತಿದೆ ಬಾರಿ ಪೈಪೋಟಿ: ವಿಶ್ವಕಪ್ ನಲ್ಲಿ ಯಾರು ಕೆ ಎಲ್ ರಾಹುಲ್ ಸ್ಥಾನ ತುಂಬಬಹುದು ಗೊತ್ತೇ?

ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರು ಶಸ್ತ್ರಚಿಕಿತ್ಸೆ ಹಾಗೂ ಇಂಜುರಿ ಇಂದ ಹೊರಬಂದು ಫಿಟ್ ಆಗಿ ಟೀಮ್ ಇಂಡಿಯಾಗೆ ಜಿಂಬಾಬ್ವೆ ಸರಣಿ ಪಂದ್ಯಗಳಿಂದ ವಾಪಸ್ ಬಂದಿದ್ದಾರೆ. ಆದರೆ ರಾಹುಲ್ ಅವರು ಉತ್ತಮವಾದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ನಿನ್ನ ನಡೆದ ಅಫ್ಘಾನಿಸ್ಟನ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅವರು ಒಳ್ಳೆಯ ಇನ್ನಿಂಗ್ಸ್ ನೀಡಿದರು ಸಹ, ಟಿ20 ವಿಶ್ವಕಪ್ ಪಂದ್ಯಗಳಲಿಗೆ ಅವರ ಸ್ಥಾನಕ್ಕೆ ಮತ್ತೊಬ್ಬ ಆಟಗಾರ ಬಂದರೆ ಒಳ್ಳೆಯದು ಎನ್ನುವ ಮಾತುಗಳು ಕೇಳಿಬರುತ್ತಿದೆ. ರಾಹುಲ್ ಅವರ ಸ್ಥಾನಕ್ಕೆ ಈಗ ಭಾರಿ ಪೈಪೋಟಿ ಇದೆ, ಅವರ ಸ್ಥಾನಕ್ಕೆ ಬರಬಹುದಾದ ಬ್ಯಾಟ್ಸ್ಮನ್ ಗಳು ಯಾರ್ಯಾರು ಗೊತ್ತಾ?

ಇಶಾನ್ ಕಿಶನ್ :- ನಾಯಕ ರೋಹಿತ್ ಶರ್ಮಾ ಅವರ ಜೊತೆಗೆ ಇವರು ಓಪನಿಂಗ್ ಬ್ಯಾಟ್ಸ್ಮನ್ ಆಗಿ ಬಂದರೆ ಚೆನ್ನಾಗಿರುತ್ತದೆ ಎನ್ನತ್ತಿದ್ದಾರೆ ನೆಟ್ಟಿಗರು. ಲೆಫ್ಟ್ ಹಾಗೂ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ನ ಸಂಯೋಜನೆ ಆಗಿರುತ್ತದೆ. ಇಶಾನ್ ಅವರು ಈವರೆಗೂ ಆಡಿರುವ 14 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ, ಶೇ.30ರ ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 130ಕ್ಕಿಂತ ಹೆಚ್ಚು ಈ ವರ್ಷ ಐಪಿಎಲ್ ನಲ್ಲಿ ಕೂಡ ಉತ್ತಮವಾದ ಇನ್ನಿಂಗ್ಸ್ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ 416ರನ್ ಗಳಿಸಿದ್ದಾರೆ. ಇವರು ಬಿಗ್ ಹಿಟ್ಸ್ ಗಳನ್ನು ಚೆನ್ನಾಗಿ ಹೊಡೆಯುತ್ತಾರೆ, ಹಾಗೆಯೇ, ವಿಕೆಟ್ ಕೀಪರ್ ಆಗಿ ಸಹ ಸಹಾಯಕವಾಗಿರುತ್ತಾರೆ. ಇಶಾನ್ ಅವರು ಎಡಗೈ ಬ್ಯಾಟ್ಸ್ಮನ್ ಆಗಿರುವ ಕಾರಣ ತಂಡಕ್ಕೆ ಹೆಚ್ಚು ಸಹಾಯಕವಾಗಿರುತ್ತಾರೆ.

ರಿಷಬ್ ಪಂತ್ :- ಇವರು ಟಿ20 ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ಭುತವಾದ ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಸಹ ಆಗಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಆಗಿರುವ ರಿಷಬ್ ಪರಿಣಾಮಕಾರಿ ಬ್ಯಾಟಿಂಗ್ ಮಾಡುತ್ತಾರೆ. ಈವರೆಗೂ ರಿಷಬ್ ಅವರು 57 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 914 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 126ಕ್ಕಿಂತ ಹೆಚ್ಚಿದ್ದು, ಅತ್ಯುತ್ತಮ ಸ್ಕೋರ್ 65, ರಿಷಬ್ ಅವರು ಒಂದು ಬಾರಿ ಫಾರ್ಮ್ ಗೆ ಬಂದರೆ ಮ್ಯಾಚ್ ವಿನ್ನರ್ ಆಗಬಹುದು.

ದೀಪಕ್ ಹೂಡಾ :- ಇವರು ಬ್ಯಾಟಿಂಗ್ ನಲ್ಲಿ ಬಿಗ್ ಹಿಟ್ಸ್ ಹೊಡೆಯುವುದರ ಜೊತೆಗೆ ಬೌಲಿಂಗ್ ನಲ್ಲಿ ಕೂಡ ಸಹಾಯವಾಗುತ್ತಾರೆ. ಸ್ಪಿನ್ ಬೌಲ್ ಮಾಡುವ ದೀಪಕ್ ಹೂಡಾ ಅವರು ಭಾರತ ತಂಡಕ್ಕೆ ಸಿಕ್ಕಿರುವ ಅಪರೂಪದ ಬ್ಯಾಟ್ಸ್ಮನ್ ಎಂದರೆ ತಪ್ಪಾಗುವುದಿಲ್ಲ. ವೇಗವಾಗಿ ರನ್ಸ್ ಹೊಡೆಯಲು ಇವರು ಹೆಸರುವಾಸಿ, ಕೆ.ಎಲ್.ರಾಹುಲ್ ಅವರ ರಿಪ್ಲೇಸ್ಮೆಂಟ್ ಗೆ ಇವರು ಪರ್ಫೆಕ್ಟ್ ಆಗಿದ್ದಾರೆ. 2022ರ ಫೆಬ್ರವರಿಯಲ್ಲಿ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ದೀಪಕ್ ಹೂಡಾ ಅವರು, 54ಗಿಂತ ಜಾಸ್ತಿ ಸರಾಸರಿಯಲ್ಲಿ 274 ರನ್ಸ್ ಭಾರಿಸಿದ್ದಾರೆ. ಇವರ ಅತ್ಯುತ್ತಮ ಸ್ಕೋರ್ 104 ಆಗಿದ್ದು, ಸ್ಟ್ರೈಕ್ ರೇಟ್ 161ಕ್ಕಿಂತ ಹೆಚ್ಚು. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ. ಈ ವರ್ಷ ಐಪಿಎಲ್ ನಲ್ಲಿ ಸಹ ಉತ್ತಮವಾದ ಪ್ರದರ್ಶನ ನೀಡಿ, 451 ರನ್ ಗಳಿಸಿದರು. ಆಫ್ ಸ್ಪಿನ್ ಬೌಲಿಂಗ್ ನಲ್ಲಿ, 6ನೇ ಬೌಲರ್ ಆಗಿ ಸಹ ಇವರಿಗೆ ಅವಕಾಶ ನೀಡಬಹುದು.