ಕೊನೆಯ ಪಂದ್ಯದಲ್ಲಿ ಶತಕ ಗಳಿಸಿದ ಬಳಿಕ ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳಿಗೆ ಖಡಕ್ ಸಂದೇಶ ರವಾನೆ ಮಾಡಿ ಕೊಹ್ಲಿ. ಹೇಳಿದ್ದೇನು ಗೊತ್ತೇ??
ಕೊನೆಯ ಪಂದ್ಯದಲ್ಲಿ ಶತಕ ಗಳಿಸಿದ ಬಳಿಕ ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳಿಗೆ ಖಡಕ್ ಸಂದೇಶ ರವಾನೆ ಮಾಡಿ ಕೊಹ್ಲಿ. ಹೇಳಿದ್ದೇನು ಗೊತ್ತೇ??
ಕಿಂಗ್ ಕೋಹ್ಲಿ ಅವರು ತಾವು ಕಿಂಗ್ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಭಾರತ ತಂಡವು ಏಷ್ಯಾಕಪ್ ಇಂದ ಹೊರಬಿದ್ದಿದೆ ಎನ್ನುವ ಬೇಸರ ಒಂದು ಕಡೆ ಇದ್ದರೂ, ಕಿಂಗ್ ಕೋಹ್ಲಿ ಫಾರ್ಮ್ ಗೆ ಮರಳಿ ಬಂದಿದ್ದಾರೆ ಎನ್ನುವ ಸಂತೋಷ ಮತ್ತೊಂದು ಕಡೆ ಇದೆ. ಏಷ್ಯಾಕಪ್ ಪಂದ್ಯಗಳು ಶುರುವಾದಾಗ ಮೊದಲ ಎರಡು ಪಂದ್ಯಗಳನ್ನು ಭಾರತ ತಂಡ ಗೆದ್ದರು ಸಹ, ಸೂಪರ್ 4 ಹಂತದಲ್ಲಿ ಎರಡು ಪಂದ್ಯಗಳನ್ನು ಸೋತಿತು, ಬಳಿಕ ನಿನ್ನೆ ನಡೆಯ ಅಫ್ಘಾನಿಸ್ತಾನ್ ತಂಡದ ವಿರುದ್ಧದ ಪಂದ್ಯದಲ್ಲಿ 101 ರನ್ ಗಳ ಜಯ ಸಾಧಿಸಿ ಟೂರ್ನಿಯಿಂದ ಹೊರಬಿದ್ದಿದೆ..
ಆದರೆ ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರ ಇನ್ನಿಂಗ್ಸ್ ಅದ್ಭುತವಾಗಿದ್ದು, ಅಭಿಮಾನಿಗಳು ಸಂತೋಷದಲ್ಲಿ ಕುಣಿಯುವ ಹಾಗೆ ಮಾಡಿತು ಎಂದರೆ ತಪ್ಪಾಗುವುದಿಲ್ಲ. ಕೋಹ್ಲಿ ಅವರು ಶತಕ ಸಿಡಿಸಿ ಮೂರು ವರ್ಷಗಳೇ ಆಗಿತ್ತು, 6 ಸಿಕ್ಸರ್ ಹಾಗೂ 12 ಬೌಂಡರಿ ಭಾರಿಸುವುದರ ಮೂಲಕ ವಿರಾಟ್ ಅವರು ಕಂಬ್ಯಾಕ್ ಮಾಡಿದ್ದಾರೆ. ಕೋಹ್ಲಿ ಅವರು ಫಾರ್ಮ್ ನಲ್ಲಿಲ್ಲ ಎಂದು ಹಲವರು ಟೀಕೆ ಮಾಡಿದ್ದರು. ಈಗ ಆ ಎಲ್ಲಾ ಟೀಕೆಗಳಿಗೂ ಕೋಹ್ಲಿ ಸರಿಯಾದ ಉತ್ತರ ಕೊಟ್ಟಿದ್ದಾರೆ, 3 ವರ್ಷಗಳ ಬಳಿಕ, ನಿನ್ನೆ ಶತಕ ಭಾರಿಸಿ, ಎದುರಾಳಿ ತಂಡಗಳಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ ವಿರಾಟ್ ಕೋಹ್ಲಿ.
ಕೋಹ್ಲಿ ಅವರ ಬ್ಯಾಟ್ ನಲ್ಲಿ ಬಂದ 71ನೇ ಸೆಂಚುರಿ ರೋಚಕವಾಗಿತ್ತು, 61 ಬಾಲ್ ಗಳಲ್ಲಿ ಭರ್ಜರಿಯಾದ 122 ರನ್ ಗಳಿಸಿದರು ಕಿಂಗ್ ಕೋಹ್ಲಿ. ನಿನ್ನೆಯ ಪಂದ್ಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪಂದ್ಯದ ಕೆಲವು ಫೋಟೋಗಳನ್ನು ಶೇರ್ ಮಾಡಿ, ಏಷ್ಯಾಕಪ್ ಟೂರ್ನಿಯಲ್ಲಿ ನಮಗೆ ಸಪೋರ್ಟ್ ಮಾಡಿ, ಜೊತೆಯಿದ್ದ ಎಲ್ಲರಿಗೂ ಧನ್ಯವಾದಗಳು, ಮುಂದಿನ ಸಾರಿ ಇನ್ನು ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತೇವೆ ಎನ್ನುವ ಸಾಲುಗಳನ್ನು ಕಿಂಗ್ ಕೋಹ್ಲಿ ಬರೆದುಕೊಂಡಿದ್ದಾರೆ. ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗುವ ಮೊದಲೇ ಕೋಹ್ಲಿ ಅವರು ಫಾರ್ಮ್ ಗೆ ಮರಳಿ ಬಂದಿರುವುದು ಭಾರತ ತಂಡಕ್ಕೆ ಬಹಳ ಸಂತೋಷವಾದ ವಿಚಾರ.