ಏಷ್ಯಾ ಕಪ್ ಟೂರ್ನಿಯ ಸೋಲಿನ ಬಗ್ಗೆ ಕೇಳಿದಕ್ಕೆ ದ್ರಾವಿಡ್ ಕೊಟ್ಟ ಉತ್ತರ ಕೇಳಿ ಶಾಕ್ ಆದ ಫ್ಯಾನ್ಸ್. ಅಷ್ಟಕ್ಕೂ ದ್ರಾವಿಡ್ ಹೇಳಿದ್ದೇನು ಗೊತ್ತೆ??
ಏಷ್ಯಾ ಕಪ್ ಟೂರ್ನಿಯ ಸೋಲಿನ ಬಗ್ಗೆ ಕೇಳಿದಕ್ಕೆ ದ್ರಾವಿಡ್ ಕೊಟ್ಟ ಉತ್ತರ ಕೇಳಿ ಶಾಕ್ ಆದ ಫ್ಯಾನ್ಸ್. ಅಷ್ಟಕ್ಕೂ ದ್ರಾವಿಡ್ ಹೇಳಿದ್ದೇನು ಗೊತ್ತೆ??
ದುಬೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿ ಇಂದ ಭಾರತ ತಂಡ ಹೊರಬಂದಿದೆ. ಆರಂಭದಲ್ಲಿ ಮಾಡಿದ ಗ್ರೂಪ್ ಎ ನ ಎರಡು ಪಂದ್ಯಗಳು ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ, ಎರಡನೇ ಪಂದ್ಯ ಹಾಂಗ್ ಕಾಂಗ್ ವಿರುದ್ಧದ, ಈ ಎರಡರಲ್ಲಿ ಗೆಲುವು ಸಾಧಿಸಿದ ಭಾರತ ತಂಡ, ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡಿತು. ಆದರೆ ಅಫ್ಘಾನಿಸ್ತಾನ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಭರ್ಜರಿಯಾದ ಗೆಲುವು ಸಾಧಿಸುವ ಮೂಲಕ ಟೂರ್ನಿಯಿಂದ ಹೊರಬಂದಿದೆ ಭಾರತ ತಂಡ. ಏಷ್ಯಾಕಪ್ ಟೂರ್ನಿ ಇಂದ ಹೊರಬಂದಿರುವುದು ಭಾರತ ತಂಡದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಏಷ್ಯಾಕಪ್ ಟೂರ್ನಿಯಿಂದ ಹೊರಬಂದ ಬಳಿಕ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಮಾತನಾಡಿದ್ದು, ಸೋತಿದ್ದರು ತಂಡದಲ್ಲಿ ಒಳ್ಳೆಯ ವಾತಾವರಣ ಇದೆ ಎಂದು ಹೇಳಿದ್ದಾರೆ, ದ್ರಾವಿಡ್ ಅವರು ನೀಡಿರುವ ಈ ಹೇಳಿಕೆ ಕ್ರಿಕೆಟ್ ಪ್ರಿಯರಿಗೆ ಶಾಕ್ ನೀಡಿದೆ.”ಇಲ್ಲಿ ನಡೆದ ವಿಚಾರಗಳನ್ನು ನಾವು ಸಾಮಾನ್ಯವಾದ ರೀತಿಯಲ್ಲೇ ಸ್ವೀಕರಿಸಿದ್ದೇವೆ. ರಕ್ಷಣೆ ಮಾಡಲು ಕಷ್ಟವಾದ ಪಿಚ್ ನಲ್ಲಿ ನಮ್ಮ ತಂಡ ಸೋತಿದೆ. ಏಷ್ಯಾಕಪ್ ನಲ್ಲಿ ಪಂದ್ಯಗಳನ್ನು ಸೋತಿರುವುದು ನಮ್ಮ ತಂಡ ಒಳ್ಳೆಯ ತಂಡ ಅಲ್ಲ ಎನ್ನುವ ಹಾಗೆ ಬಿಂಬಿಸುವುದಿಲ್ಲ..” ಎಂದಿದ್ದಾರೆ ಕೋಚ್ ದ್ರಾವಿಡ್. ಭಾರತ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಕೇಳಲಾಯಿತು..
ಅದಕ್ಕೆ ಉತ್ತರಿಸಿದ ದ್ರಾವಿಡ್ ಅವರು, “ತಂಡದ ಮುನ್ನಡೆಸುವ ಹಾಗೂ ತಂಡಕ್ಕೆ ಬೆಂಬಲ ನೀಡುವಲ್ಲಿ ನನ್ನ ಪಾತ್ರವನ್ನು ನಾನು ನೋಡುತ್ತೇನೆ. ತಂಡವು ನನ್ನಿಂದ ಒಳ್ಳೆಯ ಪ್ರತಿಫಲ ಪಡೆಯಲು ಬಯಸುತ್ತದೆ. ಒಂದು ಸಾರಿ ಗ್ರೌಂಡ್ ಗೆ ಹೋದಮೇಲೆ, ಎಲ್ಲಾ ಪ್ಲಾನ್ ಗಳು, ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು, ತಂಡವನ್ನು ಉತ್ತಮವಾಗಿ ಮುನ್ನಡೆಸುವುದು ಕ್ಯಾಪ್ಟನ್ ಹಾಗೂ ನಾಯಕರಿಗೆ ಬಿಟ್ಟಿದ್ದು..” ಎಂದು ಹೇಳಿದ್ದಾರೆ. ಈ ಹೇಳಿಕೆ ಒಂದು ರೀತಿ ಶಾಕಿಂಗ್ ಆಗಿರುವುದಂತೂ ಸತ್ಯ. ರಾಹುಲ್ ದ್ರಾವಿಡ್ ಅವರು ನೀಡಿರುವ ಈ ಹೇಳಿಕೆ ಬಗ್ಗೆ ಈಗ ಚರ್ಚೆ ಶುರುವಾಗಿದೆ.