ಭಾರತ ತಂಡ ವಿಶ್ವಕಪ್ ಗೆಲ್ಲಬೇಕು ಎಂದರೇ, ಹೊರಹೋಗಬೇಕು ಟಾಪ್ ಮೂವರು ಆಟಗಾರರು. ಯಾರ್ಯಾರು ಗೊತ್ತೆ?? ಇವರು ಇದ್ದರೇ ಗೆಲ್ಲಲು ಅಸಾಧ್ಯ.

ಭಾರತ ತಂಡ ವಿಶ್ವಕಪ್ ಗೆಲ್ಲಬೇಕು ಎಂದರೇ, ಹೊರಹೋಗಬೇಕು ಟಾಪ್ ಮೂವರು ಆಟಗಾರರು. ಯಾರ್ಯಾರು ಗೊತ್ತೆ?? ಇವರು ಇದ್ದರೇ ಗೆಲ್ಲಲು ಅಸಾಧ್ಯ.

ಈ ವರ್ಷ ಟಿ29 ವಿಶ್ವಕಪ್ ಗೆಲ್ಲುವುದು ಭಾರತ ತಂಡಕ್ಕೆ ಬಹಳ ಮುಖ್ಯ, ಟಿ20 ವಿಶ್ವಕಪ್ ಶುರುವಾಗಲು ಇನ್ನು 2 ತಿಂಗಳು ಉಳಿದಿದೆ, ಇದಕ್ಕಿಂತ ಮೊದಲು ನಡೆದ ಸರಣಿ ಪಂದ್ಯಗಳನ್ನು ಉತ್ತಮವಾಗಿ ಪೂರೈಸಿ ಯಶಸ್ಸು ಪಡೆದ ಭಾರತ ತಂಡ, ಏಷ್ಯಾಕಪ್ ಟೂರ್ನಿಯಲ್ಲಿ ಸೋತಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದರು ಸಹ, ಸೂಪರ್ 4 ಹಂತದ ನಿರ್ಣಾಯಕ ಪಂದ್ಯಗಳಲ್ಲಿ ಅನುಭವಿ ಬೌಲರ್ ಗಳ ಅಲಭ್ಯತೆಯಿಂದ ಭಾರತ ತಂಡ ಸೋಲು ಕಂಡಿತು, ಆದರೆ ಅಫ್ಘಾನಿಸ್ತಾನ್ ವಿರುದ್ಧಡ್ಸ್ ಕೊನೆಯ ಪಂದ್ಯದಲ್ಲಿ ಭರ್ಜರಿಯಾಗಿ ಗೆಲುವು ದಾಖಲಿಸಿ, ಟೂರ್ನಿಗೆ ವಿದಾಯ ಹೇಳಿದೆ. ಈಗ ಎಲ್ಲರ ಕಣ್ಣು ಇರುವುದು ಟಿ20 ವಿಶ್ವಕಪ್ ಮೇಲೆ, ಈಗಿನ ಭಾರತ ತಂಡದ ಪ್ರದರ್ಶನ ನೋಡಿರುವ ಅಭಿಮಾನಿಗಳು, ಆ ಮೂವರು ಆಟಗಾರರನ್ನು ಹೋರಾಗಿಟ್ಟರೆ ಮಾತ್ರ ಭಾರತ ತಂಡ ಗೆಲ್ಲುತ್ತದೆ ಎಂದು ಸಲಹೆ ನೀಡಿದ್ದಾರೆ. ಆ ಮೂವರು ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..

ಆವೇಶ್ ಖಾನ್ :- ಆವೇಶ್ ಖಾನ್ ಅವರು ಏಷ್ಯಾಕಪ್ ಪಂದ್ಯಗಳಲ್ಲಿ ದುಬಾರಿಯಾದ ಕಾರಣ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತು ಎನ್ನುವುದು ಗೊತ್ತಿರುವ ವಿಚಾರ, ಹಾಗಾಗಿ ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಿಕೊಳ್ಳಬಾರದು, ಆವೇಶ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡರೆ, ಭಾರತ ತಂಡ ಗೆಲ್ಲುವುದಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

ರಿಷಬ್ ಪಂತ್ :- ರಿಷಬ್ ಪಂತ್ ಅವರು ಟೆಸ್ಟ್ ಕ್ರಿಕೆಟ್ ಗೆ ಸೂಕ್ತ ಹಾಗಾಗಿ ಅವರನ್ನು ಟಿ20 ಪಂದ್ಯಗಳಿಗೆ ಆಯ್ಕೆಮಾಡಿಕೊಳ್ಳುವುದು ಬೇಡ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಪಂತ್ ಅವರ ಬದಲಾಗಿ, ದಿನೇಶ್ ಕಾರ್ತಿಕ್ ಅವರನ್ನು ಅಥವಾ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆಮಾಡಿಕೊಳ್ಳಬೇಕು. ಅವರಿಬ್ಬರು ಉತ್ತಮ ಬ್ಯಾಟ್ಸ್ಮನ್ ಆಗಿ ಹಾಗೂ ವಿಕೆಟ್ ಕೀಪರ್ ಆಗಿ ಒಳ್ಳೆಯ ಪ್ರದರ್ಶನ ನೀಡುತ್ತಾರೆ ಎಂದು ಹೇಳುತ್ತಿದ್ದಾರೆ ಕ್ರಿಕೆಟ್ ಪ್ರಿಯರು.

ಕೆ.ಎಲ್.ರಾಹುಲ್ :- ಭಾರತ ತಂಡದ ಉಪನಾಯಕ ಕೆ.ಎಲ್.ರಾಹುಲ್ ಏಷ್ಯಾಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಮೂಲಕ ನಿರಾಸೆ ಮೂಡಿಸಿದ್ದಾರೆ ಹಾಗಾಗಿ ರಾಹುಲ್ ಅವರಿಗಿಂತ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಶುಬ್ಮನ್ ಗಿಲ್ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳುತ್ತಿದ್ದಾರೆ ಅಭಿಮಾನಿಗಳು. ರೋಹಿತ್ ಶರ್ಮಾ ಅವರೊಡನೆ ಓಪನಿಂಗ್ ಬ್ಯಾಟ್ಸ್ಮನ್ ಆಗಲು ರಾಹುಲ್ ಅವರಿಗಿಂತ ಶುಬ್ಮನ್ ಗಿಲ್ ಒಳ್ಳೆಯ ಆಯ್ಕೆ ಆಗುತ್ತಾರೆ ಎನ್ನಲಾಗಿದ್ದು, ಬಿಸಿಸಿಐ ಹಾಗೂ ರಾಹುಲ್ ದ್ರಾವಿಡ್ ಅವರು ಈ ಸಲಹೆಗಳನ್ನು ಪರಿಗಣಿಸುತ್ತಾರಾ ಎಂದು ಕಾದು ನೋಡಬೇಕಿದೆ.