ವಿಶ್ವಕಪ್ ಗೆ ಭಾರತ ತಂಡ ಹೇಗಿರಬೇಕಂತೆ ಗೊತ್ತೇ?? ಬಲಿಷ್ಠ ತಂಡ ಕಟ್ಟಿದ ಗಂಭೀರ್ – ರವಿ ಶಾಸ್ತ್ರೀ. ಹೇಗಿದೆ ಗೊತ್ತೇ?ಈ ತಂಡ ವಿಶ್ವಕಪ್ ಗೆಲ್ಲಬಹುದೇ?

ವಿಶ್ವಕಪ್ ಗೆ ಭಾರತ ತಂಡ ಹೇಗಿರಬೇಕಂತೆ ಗೊತ್ತೇ?? ಬಲಿಷ್ಠ ತಂಡ ಕಟ್ಟಿದ ಗಂಭೀರ್ – ರವಿ ಶಾಸ್ತ್ರೀ. ಹೇಗಿದೆ ಗೊತ್ತೇ?ಈ ತಂಡ ವಿಶ್ವಕಪ್ ಗೆಲ್ಲಬಹುದೇ?

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿ ಭಾರತ ತಂಡ ಒಳ್ಳೆಯ ಪಾಠ ಕಲಿತು, ಅಫ್ಘಾನಿಸ್ತಾನ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿತು, ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಪ್ರದರ್ಶನ ಅದ್ಭುತವಾಗಿತ್ತು. ಎದುರಾಳಿ ತಂಡಕ್ಕೆ 4 ಓವರ್ ಗಳಲ್ಲಿ ಕೇವಲ 4 ರನ್ ನೀಡಿ, 5 ವಿಕೆಟ್ ಪಡೆದರು. ಇದು ಭಾರತದ ಪಾಲಿಗೆ ಭರ್ಜರಿಯಾದ ಗೆಲುವು ಸಾಧಿಸಲು ಸಹಾಯ ಮಾಡಿತು. 212 ರನ್ ಗಳ ಗುರಿಯನ್ನು ಭಾರತ ತಂಡ ನೀಡಿತ್ತು, ಕ್ದರೆ ಅತ್ಯುತ್ತಮವಾದ ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನದಿಂದಾಗಿ, ಅಫ್ಘಾನ್ ತಂಡ ಕೇವಲ 111 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಭಾರತಕ್ಕ 101 ರನ್ ಗಳ ಭರ್ಜರಿ ಜಯ ಸಿಕ್ಕಿತು.

ಅಂದಿನ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಸಹ ಅದ್ಭುತವಾದ ಶತಕ ಸಿಡಿಸಿದರು, 61 ಬಾಲ್ ಗಳಲ್ಲಿ 122 ರನ್ಸ್ ಚಚ್ಚಿದರು. 1021 ದಿನಗಳ ಬಳಿಕ ವಿರಾಟ್ ಕೋಹ್ಲಿ ಅವರಿಂದ ಸೆಂಚುರಿ ಬಂದಿತ್ತು, ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಇದು ವಿರಾಟ್ ಕೋಹ್ಲಿ ಅವರ ಮೊದಲ ಶತಕ ಆಗಿತ್ತು. ಅದಕ್ಕಿಂತ ಮೊದಲು ಏಷ್ಯಾಕಪ್ ಟೂರ್ನಿಯಲ್ಲಿ ಎರಡು ಅರ್ಧಶತಕ ಸಹ ಸಿಡಿಸಿದ್ದರು ಕೋಹ್ಲಿ. ಟಿ20 ವಿಶ್ವಕಪ್ ಪಂದ್ಯಗಳು ಅಕ್ಟೋಬರ್ 16ರಿಂದ ಅಸ್ಟ್ರೇಲಿಯಾದಲ್ಲಿ ಶುರುವಾಗಲಿದ್ದು, ಅಫ್ಗಾನಿಸ್ತಾನ್ ವಿರುದ್ಧದ ಪಂದ್ಯ ನಡೆಯುವುದಕ್ಕಿಂತ ಮೊದಲು, ಸಂದರ್ಶನ ಒಂದರಲ್ಲಿ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಹಾಗೂ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಟಿ20 ವಿಶ್ವಕಪ್ ಗೆ ಸೂಕ್ತವಾಗುವ 15 ಆಟಗಾರರನ್ನು ಹೆಸರಿಸಿದರು.

ಆದರೆ ಇವರಿಬ್ಬರು ಸಹ ಭುವನೇಶ್ವರ್ ಕುಮಾರ್ ಅವರ ಹೆಸರನ್ನು ತೆಗೆದುಕೊಳ್ಳಲಿಲ್ಲ. ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರ ಅವರನ್ನು ವೇಗಿಗಳ ಲಿಸ್ಟ್ ಗೆ ತೆಗೆದುಕೊಂಡ ರವಿಶಾಸ್ತ್ರಿ ಅವರು, ಎಡಗೈ ವೇಗಿಯಾಗಿ ಮೋಹಸಿನ್ ಖಾನ್ ಅವರನ್ನು ಸೆಲೆಕ್ಟ್ ಮಾಡಿದರು. 2022ರ ಐಪಿಎಲ್ ನಲ್ಲಿ ಲಕ್ನೌ ಸೂಪರ್ ಜೈನ್ಟ್ಸ್ ಪರ ಆಡಿದ ಮೋಹಸಿನ್ ಖಾನ್, 9 ಪಂದ್ಯಗಳಲ್ಲಿ 14 ವಿಕೆಟ್ ಪಡೆದು, ಸಂಚಲನ ಮೂಡಿಸಿದ್ದರು. 16 ರನ್ ಗಳನ್ನು ನೀಡಿ, 4 ವಿಕೆಟ್ ಪಡೆದ ಅವರ ಬೌಲಿಂಗ್ ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಇನ್ನು ಗೌತಮ್ ಗಂಭೀರ್ ಅವರು, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರ, ಹರ್ಷಲ್ ಪಟೇಲ್, ಮೋಹಸಿನ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ವೇಗಿಗಳಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಇರ್ಫಾನ್ ಪಠಾಣ್ ಅವರು ಸಹ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಅವರನ್ನೇ ವೇಗಿಗಳಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೂ 5ನೇ ವೇಗಿಯಾಗಿ ಭುವನೇಶ್ವರ್ ಕುಮಾರ್ ಅಥವಾ ಶಮಿ ಅವರನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ.

ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ರಾಹುಲ್ ಶರ್ಮಾ, ಇಶಾನ್ ಕಿಶನ್ ಅಥವಾ ಶಿಖರ್ ಧವನ್, ದಿನೇಶ್ ಕಾರ್ತಿಕ್ ಅಥವಾ ಸಂಜು ಸ್ಯಾಮ್ಸನ್, ಹಾರ್ದಿಕ್ ಪಟೇಲ್, ಯುಜವೆಂದ್ರ ಚಾಹಲ್, ರಿಷಬ್ ಪಂತ್, ಅರ್ಷದೀಪ್ ಸಿಂಗ್ ಅಥವಾ ಮೊಹಸಿನ್ ಖಾನ್, ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಶಮಿ ಅವರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ರವಿಶಾಸ್ತ್ರಿ ಅವರು.

ಇನ್ನು ಗೌತಮ್ ಗಂಭೀರ್ ಅವರು, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಯುಜವೆಂದ್ರ ಚಾಹಲ್, ಜಸ್ಪ್ರೀತ್ ಬುಮ್ರ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಮೊಹಮ್ಮದ್ ಸಿಂಗ್ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಹಾಗೂ ಇರ್ಫಾನ್ ಪಠಾಣ್ ಅವರು, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಯುಜವೆಂದ್ರ ಚಾಹಲ್, ಜಸ್ಪ್ರೀತ್ ಬುಮ್ರ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ದಿನೇಶ್ ಕಾರ್ತಿಕ್, ರವಿ ಬಿಶ್ನೋಯ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಅಥವಾ ಮೊಹಮ್ಮದ್ ಶಮಿ ಎಂದು ಆಯ್ಕೆ ಮಾಡಿದ್ದಾರೆ. ಈ ತಂಡಗಳ ಪೈಕಿ ನಿಮಗೆ ಇಷ್ಟವಾದ ತಂಡ ಯಾವುದು? ಅಥವಾ ನಿಮ್ಮ ಪ್ರಕಾರ ಟಿ20 ವಿಶ್ವಕಪ್ ಗೆ ಭಾರತ ತಂಡ ಹೇಗಿರಬೇಕು ಎನ್ನುವ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್ ಮೂಲಕ ತಿಳಿಸಿ.