ಕೆಟ್ಟ ಮೇಲೆ ಬುದ್ದಿ ಬಂದಿತೇ?? ಟೀಮ್ ಇಂಡಿಯಾಗೆ ಬಲಿಷ್ಠ ಆಟಗಾರರನ್ನು ಕರೆತರಲು ಸಿದ್ಧತೆ: ಕಮ್ ಬ್ಯಾಕ್ ಮಾಡಲಿರುವ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ಕೆಟ್ಟ ಮೇಲೆ ಬುದ್ದಿ ಬಂದಿತೇ?? ಟೀಮ್ ಇಂಡಿಯಾಗೆ ಬಲಿಷ್ಠ ಆಟಗಾರರನ್ನು ಕರೆತರಲು ಸಿದ್ಧತೆ: ಕಮ್ ಬ್ಯಾಕ್ ಮಾಡಲಿರುವ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ಏಷ್ಯಾಕಪ್ ಪಂದ್ಯಗಳು ಭಾರತ ತಂಡಕ್ಕೆ ಒಳ್ಳೆಯ ಪಾಠ ಕಲಿಸಿಕೊಟ್ಟಿದೆ. ಏಷ್ಯಾಕಪ್ ನ ಹಾಲಿ ಚಾಂಪಿಯನ್ಸ್ ಆಗಿದ್ದ ಭಾರತ ತಂಡ ಈ ವರ್ಷ ಕೂಡ ಗೆಲ್ಲುವ ಉತ್ಸಾಹದಲ್ಲೇ ಕಣಕ್ಕೆ ಇಳಿಯಿತು, ಅದೇ ರೀತಿ ಮೊದಲ ಎರಡು ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ಪಾಕಿಸ್ತಾನ್ ಹಾಗೂ ಹಾಂಗ್ ಕಾಂಗ್ ವಿರುದ್ಧ ಎರಡು ಗೆಲುವು ಸಾಧಿಸಿ, ಸೂಪರ್ 4 ಹಂತ ತಲುಪಿತು. ಆದರೆ ಸೂಪಎ 4 ಹಂತದಲ್ಲಿ ಎಲ್ಲವೂ ತಲೆಕೆಳಗಾಯಿತು. ಕೆಲವು ಆಟಗಾರರು ಒಳ್ಳೆಯ ಪ್ರದರ್ಶನ ನೀಡದ ಕಾರಣ, ಭಾರತ ತಂಡ ಸೋಲು ಕಾಣುವ ಹಾಗೆ ಆಯಿತು.

ಈ ಮೂಲಕ ಭಾರತ ತಂಡದಲ್ಲಿರುವ ಸಮಸ್ಯೆಗಳು ಏನು ಎನ್ನುವುದು ಸಹ ಅರಿವಾಗಿದೆ. ಕೆಲವು ಆಟಗಾರರ ಪ್ರದರ್ಶನಕ್ಕೆ ಭಾರತ ತಂಡವನ್ನು ಮುಂದಕ್ಕೆ ಕರೆದೊಯ್ಯಲು ಸಹಾಯ ಮಾಡಿದರೆ, ಇನ್ನು ಕೆಲವು ಆಟಗಾರರ ಪ್ರದರ್ಶನ ಸೋಲಿಗೆ ಕಾರಣವಾಯಿತು. ಏಷ್ಯಾಕಪ್ ಟೂರ್ನಿಯಿಂದ ಹೊರಬಂದಿದ್ದು, ಆಗಿದೆ, ಆದರೆ ಇನ್ನೂ ಎರಡು ಸರಣಿಗಳು ಹಾಗೂ, ಅಕ್ಟೋಬರ್ ತಿಂಗಳಿನಲ್ಲಿ ಟಿ20 ವಿಶ್ವಕಪ್ ಶುರುವಾಗಲಿದ್ದು, ಇವುಗಳಲ್ಲಿ ಭಾರತ ತಂಡ ಉತ್ತಮವಾದ ಪ್ರದರ್ಶನವನ್ನು ನೀಡುವುದು ಬಹಳ ಮುಖ್ಯವಾಗಿದೆ.

ಹಾಗಾಗಿ ಮ್ಯಾನೇಜ್ಮೆಂಟ್ ಈ ಬಾರಿ ಬಹಳ ಎಚ್ಚರಿಕೆಯಿಂದ ತಂಡವನ್ನು ಆಯ್ಕೆ ಮಾಡಬೇಕು. ಎಲ್ಲಾ ರೀತಿಯ ಪ್ಲೇಯರ್ ಗಳನ್ನು ಭಾರತ ತಂಡ ಒಳಗೊಂಡಿರುವುದರ ಜೊತೆಗೆ ತಂಡದಲ್ಲಿ ಸಮತೋಲನ ಇರಬೇಕು. ಹಾಗಿದ್ದರೆ ಮಾತ್ರ, ಟಿ20 ವಿಶ್ವಕಪ್ ಗೆಲ್ಲಲು ಸಹಾಯವಾಗುತ್ತದೆ. ಇದರಿಂದ ಮ್ಯಾನೇಜ್ಮೆಂಟ್ ಒಂದು ಹೊಸ ನಿರ್ಧಾರ ಕೈಗೊಂಡಿದ್ದು, ಕೆಲವು ಆಟಗಾರರನ್ನು ನ್ಯಾಷನಲ್ ಟೀಮ್ ಗೆ ಮರಳಿ ಕರೆತರುವ ಯೋಜನೆ ಹಾಕಲಾಗಿದ್ದು, ಭಾರತಕ್ಕೆ ಮರಳಿ ಬರುವ ಆ ಆಟಗಾರರು ಯಾರಿರಬಹುದು ಎಂದು ತಿಳಿಸುತ್ತೇವೆ ನೋಡಿ..

ಮೊಹಮ್ಮದ್ ಶಮಿ :- ಏಷ್ಯಾಕಪ್ ನಲ್ಲಿ ಭಾರತ ತಂಡ ಸೋಲಲು ಬೌಲರ್ ಗಳ ಕೊರತೆ ಒಂದು ಮುಖ್ಯ ಕಾರಣ ಆಗಿತ್ತು, ಜಸ್ಪ್ರೀತ್ ಬುಮ್ರ, ಹರ್ಷಲ್ ಪಟೇಲ್ ಅವರಂತಹ ಬೌಲರ್ ಗಳ ಅಲಭ್ಯತೆಯಿಂದ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು, ಇಂತಹ ಸಮಯದಲ್ಲಿ ಅನುಭವಿ ವೇಗಿ ಬೌಲರ್ ಮೋಹಮ್ಮದ್ ಶಮಿ ಅವರನ್ನು ತಂಡದಿಂದ ಹೊರಗಿಟ್ಟ ಕಾರಣ ಟೀಕೆ ಮಾಡಲಾಗಿತ್ತು. 4ನೇ ವೇಗಿ ಆಗಿ ಹಾರ್ದಿಕ್ ಪಾಂಡ್ಯ ಇದ್ದರು ಸಹ, ಇನ್ನುಳಿದವರ ಪ್ರದರ್ಶನ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ. ಎಲ್ಲಾ ಭಾಗದ ಕ್ರಿಕೆಟ್ ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದು, ಆಸ್ಟ್ರೇಲಿಯಾ ಪಿಚ್ ನಲ್ಲಿ ಮೊಹಮ್ಮದ್ ಶಮಿ ಅವರಂತಹ ಆಟಗಾರ ಸಹಾಯವಾಗುತ್ತಾರೆ ಎನ್ನುವ ಕಾರಣಕ್ಕೆ ಅವರ ಮತ್ತೆ ಭಾರತ ತಂಡಕ್ಕೆ ಕರೆತರುವ ಅವಕಾಶ ಹೆಚ್ಚಿದೆ.

ಸಂಜು ಸ್ಯಾಮ್ಸನ್ :- ರಿಷಬ್ ಪಂತ್ ಅವರಿಗೆ ಸಾಕಷ್ಟು ಅವಕಾಶಗಳು ಸಿಕ್ಕರು ಸಹ ಅವುಗಳನ್ನು ಅವರು ಸರಿಯಾಗಿ ಬಳಸಿಕೊಳ್ಳಲಿಲ್ಲ. ಹಾಗಾಗಿ ಸಂಜು ಸ್ಯಾಮ್ಸನ್ ಅವರನ್ನು ಮತ್ತೆ ಕರೆತರಬೇಕು ಎನ್ನಲಾಗುತ್ತಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಲೈನಪ್ ನಲ್ಲಿ ಸಹ ಸಮಸ್ಯೆ ಇದೆ, ಸಂಜು ಸ್ಯಾಮ್ಸನ್ ಅವರು ಈ ಹಿಂದೆ ಹಲವು ಬಾರಿ ಭಾರತ ತಂಡಕ್ಕೆ ಸೆಲೆಕ್ಟ್ ಆಗುವುದು, ಹೊರಗುಳಿಯುವುದು ನಡೆಯುತ್ತಿದೆ. ಏಕೆಂದರೆ ಇವರು ಬಲಿಷ್ಠವಾದ ಬ್ಯಾಟ್ಸ್ಮನ್ ಆಗಿದ್ದರು ಸಹ, ಸ್ಥಿರವಾದ ಪ್ರದರ್ಶನ ಇಲ್ಲದ ಕಾರಣ, ತಂಡದಿಂದ ಹೊರಗುಳಿಯುತ್ತಾರೆ. ಆದರೆ ಈಗ ರಿಷಬ್ ಪಂತ್ ಅವರ ಬದಲಾಗಿ ಸಂಜು ಅವರನ್ನು ಕರೆತರಬಹುದು ಎನ್ನಲಾಗುತ್ತಿದೆ.

ವಾಷಿಂಗ್ಟನ್ ಸುಂದರ್ :- ಪ್ರಸ್ತುತ ತಂಡದ ಆಕ್ರಮಣಕಾರಿ ಆಲ್ ರೌಂಡರ್ ರವೀಂದ್ರ ಜಡೇಜಾ ಇಂಜುರಿ ಇಂದ ಹೊರಾಗುದಿಸಿದ್ದಾರೆ, ಅವರ ಸ್ಥಾನಕ್ಕೆ ಅಕ್ಷರ್ ಪಟೇಲ್ ಅವರನ್ನು ಕರೆತಂದರು ಸಹ, ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗಲಿಲ್ಲ. ವಾಷಿಂಗ್ಟನ್ ಸುಂದರ್ ಅವರು ರವೀಂದ್ರ ಜಡೇಜಾ ಅವರಂತಹ ಆಟಗಾರ ಆಗಿರುವ ಕಾರಣ ಅವರಿಗೆ ಸ್ಥಾನ ಸಿಕ್ಕರು ಸಿಗಬಹುದು. ಸುಂದರ್ ಅವರು ಪವರ್ ಪ್ಲೇ ನಲ್ಲಿ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುತ್ತಾರೆ, ಜೊತೆಗೆ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ. ಹಾಗಾಗಿ ಸುಂದರ್ ಅವರನ್ನು ತಂಡಕ್ಕೆ ಕರೆತರುವ ಸಾಧ್ಯತೆಗಳು ಹೆಚ್ಚಿದೆ.