ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದ್ರಾವಿಡ್ ಹಾಗೂ ರೋಹಿತ್ ರವರಿಗೆ ಸೋಲಿನ ಜೊತೆಗೆ ಮತ್ತೊಂದು ಟೆನ್ಶನ್: ಹೀಗಾದರೆ ಭಾರತ ಗೆಲ್ಲುವುದಾದರೂ ಹೇಗೆ?? ವಿಶ್ವಕಪ್ ಕನಸು ಮುಗಿಯಿತೇ??

637

Get real time updates directly on you device, subscribe now.

ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಈಗ ಭಾರಿ ನಿರಾಸೆ ಮೂಡಿದೆ. ಏಷ್ಯಾಕಪ್ ಟೂರ್ನಿಯನ್ನು ಭಾರತ ತಂಡ ಗೆಲ್ಲುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು, ಅದರ ಈಗ ಅದಕ್ಕೆ ವಿರುದ್ಧವಾಗಿ ಭಾರತ ತಂಡ ಸೋತಿದೆ. ಏಷ್ಯಾಕಪ್ ಟೂರ್ನಿಯ ಆರಂಭ ಚೆನ್ನಾಗಿಯೇ ಆದರೂ, ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿ ಸತತವಾಗಿ ಭಾರತ ತಂಡ ಸೋತಿತು ಕೊನೆಯ ಪಂದ್ಯ ಮಾತ್ರ ಗೆದ್ದು ಸಮಾಧಾನ ಪಟ್ಟುಕೊಂಡಿದೆ.. 10 ತಿಂಗಳ ಬಳಿಕ ಭಾರತ ತಂಡ ಸತತವಾಗಿ ಎರಡು ಬಾರಿ ಸೋತಿದೆ. ಇದೇ ರೀತಿಯ ಘಟನೆ 10 ತಿಂಗಳ ಹಿಂದೆ ದುಬೈನಲ್ಲೇ ನಡೆದಿತ್ತು, ಅದು ಟಿ20 ವಿಶ್ವಕಪ್ ಪಂದ್ಯಗಳಲ್ಲಿ. ಈಗ ಏಷ್ಯಾಕಪ್ ಟೂರ್ನಿಯಲ್ಲೂ ಅದೇ ರೀತಿ ಆಗಿದೆ.

ಟೂರ್ನಿಯಲ್ಲಿ ಈಗಾಗಲೇ ತಂಡ ಹೊರಬಿದ್ದಿದೆ, ಈ ರೀತಿ ಆಗಲು ತಂಡದ ಬೌಲಿಂಗ್ ಪಡೆಯ ವೈಫಲ್ಯತೆ ಮುಖ್ಯ ಕಾರಣ. ಕಳೆದ ಭಾನುವಾರ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ, 182 ರನ್ ಗಳ ಗುರಿ ನೀಡಿತು, ಪಾಕಿಸ್ತಾನ್ ಈ ಪಂದ್ಯದಲ್ಲಿ ಜಯ ಸಾಧಿಸಿತು. ಶ್ರೀಲಂಕಾ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ 174 ರನ್ ಗಳ ಗುರಿ ನೀಡಿತು, ಆ ಪಂದ್ಯವನ್ನು ಶ್ರೀಲಂಕಾ ತಂಡ ಗೆದ್ದಿತು. ಈ ಎರಡು ಪಂದ್ಯಗಳಲ್ಲೂ ಒಂದೇ ರೀತಿ ಸೋಲು ಕಂಡಿದ್ದನ್ನು ಗಮನಿಸಬೇಕಾಗಿದೆ. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಎರಡು ಓವರ್ ಗೆ, 26 ರನ್ ಬೇಕಿತ್ತು, ಶ್ರೀಲಂಕಾ ಪಂದ್ಯದಲ್ಲಿ ಎರಡು ಓವರ್ ಗೆ 21 ರನ್ ಗಳು ಬೇಕಿದ್ದವು.

ಟಿ20 ಪಂದ್ಯಗಳಲ್ಲಿ 19ನೇ ಓವರ್ ಬಹಳ ಮುಖ್ಯವಾದದ್ದು, ಆ ಓವರ್ ಅನ್ನು ಬಿಗಿಯಾಗಿ ಮುಗಿಸಿದರೆ, 20ನೇ ಓವರ್ ಕೊಂಚ ಸುಲಭವಾಗುತ್ತದೆ. ಭುವನೇಶ್ವರ್ ಕುಮಾರ್ ಅವರು ಡೆತ್ ಓವರ್ ಗಳಲ್ಲಿ ಒಳ್ಳೆಯ ಬೌಲಿಂಗ್ ಮಾಡುತ್ತಾರೆ ಎಂದು ರೋಹಿತ್ ಶರ್ಮಾ ಅವರು ಈ ಎರಡು ಪಂದ್ಯಗಳಲ್ಲೂ 19ನೇ ಓವರ್ ಬೌಲಿಂಗ್ ಮಾಡುವ ಅವಕಾಶವನ್ನು ಭುವನೇಶ್ವರ್ ಕುಮಾರ್ ಅವರಿಗೆ ನೀಡಿದರು. ಆದರೆ, ಪಾಕಿಸ್ತಾನ್ ವಿರುದ್ಧ ಪಂದ್ಯದಲ್ಲಿ 19ನೇ ಓವರ್ ನಲ್ಲಿ 19 ರನ್ ಗಳು, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 19ನೇ ಓವರ್ ನಲ್ಲಿ 14 ರನ್ ನೀಡಿ ದುಬಾರಿಯಾದರು ಭುವನೇಶ್ವರ್ ಕುಮಾರ್. ಇದರಿಂದ ಭಾರತ ತಂಡ ಸೋಲುವ ಹಾಗಾಯಿತು. ಈ ಎರಡು ಪಂದ್ಯಗಳಲ್ಲೂ ಕೊನೆಯ ಓವರ್ ನಲ್ಲಿ ಎದುರಾಳಿ ತಂಡ 7 ರನ್ ಗಳಿಸಬೇಕಿತ್ತು. ಸೋಲಿನ ಜೊತೆಗೆ ಈ ಡೆತ್ ಓವರ್ ಬೌಲಿಂಗ್ ಟೆನ್ಷನ್ ಸಹ ಇರುವುದು ಭಾರತ ತಂಡದ ಸ್ಟ್ರೆಸ್ ಅನ್ನು ಇನ್ನಷ್ಟು ಹೆಚ್ಚಿಸಿದೆ, ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು ಕೂಡ ಕೊನೆಯ ಓವರ್ ಗಳಲ್ಲಿ ರನ್ ಗಳಿಗೆ ಕಡಿವಾಣ ಹಾಕುವುದು ಎಷ್ಟು ಮುಖ್ಯ, ಅದರಲ್ಲಿಯೂ ಟಿ 20 ಪಂದ್ಯಗಳಲ್ಲಿ ಎಂಬುದು ನಿಮಗೆ ತಿಳಿದೇ ಇರುತ್ತದೆ. ಹೀಗೆ ಆದರೆ, ಮುಂದಿನ ಸರಣಿಗಳು, ವಿಶ್ವಕಪ್ ಪಂದ್ಯಗಳ ಕಥೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.