ಕಿಂಗ್ ಕೊಹ್ಲಿ ಶತಕ ಗಳಿಸಿದ ತಕ್ಷಣ ಎಬಿಡಿ ಮಾಡಿದ್ದೇನು ಗೊತ್ತೇ?? ಖುಷಿಯಲ್ಲಿ ಎಬಿಡಿ ಏನು ಹೇಳಿದ್ದಾರೆ ಗೊತ್ತೆ??

ಕಿಂಗ್ ಕೊಹ್ಲಿ ಶತಕ ಗಳಿಸಿದ ತಕ್ಷಣ ಎಬಿಡಿ ಮಾಡಿದ್ದೇನು ಗೊತ್ತೇ?? ಖುಷಿಯಲ್ಲಿ ಎಬಿಡಿ ಏನು ಹೇಳಿದ್ದಾರೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್ ನಿಂದ ಹೊರಹೋದರೂ ಕೂಡ ಆಫ್ಘಾನಿಸ್ತಾನದ ವಿರುದ್ಧ ಇದೀಗ ಔಪಚಾರಿಕ ಪಂದ್ಯವನ್ನು ಆಡುತ್ತಿದೆ. ಈ ಲೇಖನ ಬರೆಯುವ ಹೊತ್ತಿನಲ್ಲಿ ಅಫ್ಘಾನಿಸ್ತಾನ 39 ರನ್ಗಳಿಗೆ 6 ಕೆಟ್ ಕಳೆದುಕೊಂಡು ಬಹುತೇಕ ಸೋಲಿನ ಅಂಚಿನಲ್ಲಿ ನಿಂತಿದೆ. ಭಾರತ ನೀಡಿರುವ 213 ರ ಗುರಿಯನ್ನು ಬೆನ್ನಟ್ಟುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇನ್ನು ಈ ಬೃಹತ್ ಮೊತ್ತಕ್ಕೆ ಕಾರಣವಾದ ವಿರಾಟ್ ಕೊಹ್ಲಿ ರವರು ಸೆಂಚುರಿ ಬಾರಿಸಿದ್ದು ಇಂದಿನ ಪಂದ್ಯದಲ್ಲಿ ಬಹಳ ವಿಶೇಷವಾಗಿತ್ತು.

ಸರಿ ಸುಮಾರು ಸಾವಿರ ದಿನಗಳಿಂದ ಕಾದು ಕುಳಿತಿದ್ದ ಕೊಹ್ಲಿ ಅಭಿಮಾನಿಗಳು ಕೊನೆಗೂ ಕೂಡ ವಿರಾಟ್ ಕೊಹ್ಲಿ ರವರ ಸೆಂಚುರಿಯನ್ನು ನೋಡಿ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ನಿಜ ಹೇಳಬೇಕು ಎಂದರೆ ಯಾರ ವಾಟ್ಸಪ್ ಸ್ಟೇಟಸ್ ಹಾಗೂ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನು ನೋಡಿದರೂ ಕೂಡ ವಿರಾಟ್ ಕೊಹ್ಲಿ ರವರ ಪೋಸ್ಟರ್ಗಳು ಕಾಣಿಸುತ್ತಿದ್ದು ಕಿಂಗ್ ಮತ್ತೆ ವಾಪಸ್ಸು ಬಂದಿದ್ದಾರೆ ಎಂಬ ಕ್ಯಾಪ್ಷನ್ಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಇನ್ನು ಇಂತಹ ಸಮಯದಲ್ಲಿ ವಿರಾಟ್ ಕೊಹ್ಲಿ ರವರ ಜೊತೆಗಾರ, ಆಪ್ತ ಸ್ನೇಹಿತ ಎಬಿ ಡಿವಿಲಿಯರ್ಸ್ ರವರು ಸೆಂಚುರಿ ಗಳಿಸಿದ ತಕ್ಷಣ ಟ್ವೀಟ್ ಮಾಡಿದ್ದಾರೆ.

ಹೌದು ಸ್ನೇಹಿತರೇ ಎಬಿ ಡಿವಿಲಿಯರ್ಸ್ ರವರು ಕೂಡ ಹಲವಾರು ದಿನಗಳಿಂದ ನಾನು ವಿರಾಟ್ ಕೊಹ್ಲಿಯವರು ಸೆಂಚುರಿ ಗಳಿಸುವುದನ್ನು ಕಾಯುತ್ತಿದ್ದೇನೆ ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ಇದೀಗ ಕೊನೆಗೂ ಆ ಕ್ಷಣ ಬಂದಿದ್ದು ವಿರಾಟ್ ಕೊಹ್ಲಿ ರವರು ಶತಕ ಗಳಿಸಿದ ತಕ್ಷಣ “ನಾನು ಮತ್ತೊಮ್ಮೆ ಡಾನ್ಸ್ ಮಾಡುತ್ತಿದ್ದೇನೆ ಎಂತಹ ಅದ್ಭುತ ಮನೋಹರ ದೃಶ್ಯ” ಎಂದು ಕೇವಲ ಒಂದೇ ವಾಕ್ಯದಲ್ಲಿ ಬಣ್ಣಿಸಿ ವಿರಾಟ್ ಕೊಹ್ಲಿ ರವರನ್ನು ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಸದಾ ವಿರಾಟ್ ಕೊಹ್ಲಿ ರವರ ಆಟದ ಕುರಿತು ಸಂದರ್ಶನಗಳಲ್ಲಿ ಮಾತನಾಡುವ ಎಬಿಡಿ ರವರು ಇಂದಿನ ಪಂದ್ಯದ ನಂತರ ಮುಂದಿನ ಸಂದರ್ಶನದಲ್ಲಿ ಏನು ಮಾತನಾಡುತ್ತಾರೆ ಎಂಬುದನ್ನು ನಿಜಕ್ಕೂ ಕೇಳಲು ಕಾತುರದಿಂದ ಕಾಯುತ್ತಿದ್ದೇವೆ.