ಮುಗಿಯಿತೇ ಇಬ್ಬರು ಸ್ಟಾರ್ ಆಟಗಾರರ ಭವಿಷ್ಯ: ಏಷ್ಯಾ ಕಪ್ ಟೂರ್ನಿಯಲ್ಲಿ ವಿಫಲವಾದ ಕಾರಣ, ತಂಡದಿಂದ ಹೊರಬೀಳ ಬಹುದಾದ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ಮುಗಿಯಿತೇ ಇಬ್ಬರು ಸ್ಟಾರ್ ಆಟಗಾರರ ಭವಿಷ್ಯ: ಏಷ್ಯಾ ಕಪ್ ಟೂರ್ನಿಯಲ್ಲಿ ವಿಫಲವಾದ ಕಾರಣ, ತಂಡದಿಂದ ಹೊರಬೀಳ ಬಹುದಾದ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ಯುಎಇ ನಲ್ಲಿ ಏಷ್ಯಾಕಪ್ 2022 ಟೂರ್ನಿ ಶುರುವಾಗುವ ಸಮಯದಲ್ಲಿ, ಈ ವರ್ಷದ ಚಾಂಪಿಯನ್ಸ್ ಭಾರತ ತಂಡವೆ ಆಗುವುದು ಪಕ್ಕಾ ಎನ್ನುವ ಮಾತುಗಳು ಕೇಳಿಬಂದಿತ್ತು. ಅದೇ ರೀತಿ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದು, ಒಳ್ಳೆಯ ಓಪನಿಂಗ್ ಮಾಡಿತು ಭಾರತ ತಂಡ, ಆದರೆ ಸೂಪರ್ 4 ಹಂತದ ಎರಡು ಪಂದ್ಯಗಳಲ್ಲೂ ಸೋಲುವ ಮೂಲಕ, ಟೂರ್ನಿ ಇಂದಲೇ ಹೊರಬಿದ್ದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರತ ತಂಡ ವೈಫಲ್ಯ ಅನುಭವಿಸಿತು. ಕೆಲವು ಆಟಗಾರರು ಕಳಪೆ ಪ್ರದರ್ಶನ ನೀಡಿದರು. ಆದರೆ ಆ ಇಬ್ಬರು ಆಟಗಾರರು ಕಳಪೆ ಪ್ರದರ್ಶನ ನೀಡಿರುವ ಕಾರಣ, ಇನ್ನುಮುಂದೆ ಅವರ ಭಾರತ ತಂಡದಿಂದ ಶಾಶ್ವತವಾಗಿ ಹೊರಗುಳಿಯುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆ ಇಬ್ಬರು ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..

ಭುವನೇಶ್ವರ್ ಕುಮಾರ್ :- ಟೀಮ್ ಇಂಡಿಯಾ ಇವರ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿತ್ತು, ಆದರೆ ಸೂಪರ್ 4 ಹಂತದ ನಿರ್ಣಾಯಕ ಪಂದ್ಯ, ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ ಎರಡು ಓವರ್ ಗಳಲ್ಲಿ 21 ರನ್ ಗಳು ಬೇಕಿತ್ತು. ಆಗ ರೋಹಿತ್ ಶರ್ಮಾ ಅವರು ಭುವನೇಶ್ವರ್ ಕುಮಾರ್ ಅವರ ಮೇಲೆ ನಂಬಿಕೆ ಇಟ್ಟು ಬೌಲಿಂಗ್ ಗೆ ಕಳಿಸಿದರು. ಇಷ್ಟು ಸಮಯದ ಅವರ ಅನುಭವಗಳು ಅಂದು ಕೆಲಸಕ್ಕೆ ಬರಲಿಲ್ಲ, ಒಂದೇ ಓವರ್ ನಲ್ಲಿ 14 ರನ್ ನೀಡಿ, ಭಾರತ ತಂಡ ಸೋಲಿಗೆ ಸಮೀಪ ಆಗುವ ಹಾಗೆ ಮಾಡಿದರು. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲು 19ನೇ ಓವರ್ ಅನ್ನು ಭುವನೇಶ್ವರ್ ಕುಮಾರ್ ಅವರಿಗೆ ನೀಡಲಾಯಿತು, ಆಗಲು ಸಹ ಒಂದು ಓವರ್ ನಲ್ಲಿ 19 ರನ್ ನೀಡಿದರು, ಇದರಿಂದ ಕೊನೆಯ ಓವರ್ ನಲ್ಲಿ ಅರ್ಷದೀಪ್ ಸಿಂಗ್ ಉತ್ತಮವಾಗಿ ಬೌಲಿಂಗ್ ಮಾಡಿದರು ಸಹ ಗೆಲ್ಲಲು ಆಗಲಿಲ್ಲ. ಭುವನೇಶ್ವರ್ ಕುಮಾರ್ ಅವರ ಕಳಪೆ ಪ್ರದರ್ಶನವೇ ಭಾರತ ಸೋಲಲು ಮುಖ್ಯ ಕಾರಣ ಎನ್ನಲಾಗುತ್ತಿದೆ.

ಕೆ.ಎಲ್.ರಾಹುಲ್ :- ಇಂಡಿಯಾದ ಸ್ಟಾರ್ ಓಪನರ್ ಪ್ಲೇಯರ್ ಕೆ.ಎಲ್.ರಾಹುಲ್ ಏಷ್ಯಾಕಪ್ ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಇದಕ್ಕಿಂತ ಮೊದಲು ಅವರು ಫಿಟ್ ಆಗಿದ್ದರೋ ಇಲ್ಲವೋ ಎಂದು ಗೊತ್ತಿಲ್ಲ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 6 ರನ್ ಗಳಿಸಿ ಔಟ್ ಆದರು, ಪಾಕಿಸ್ತಾನ್ ವಿರುದ್ಧ ಕೇವಲ 28 ರನ್ ಗಳಿಸಿ ಔಟ್ ಆದರು. ರಾಹುಲ್ ಅವರ ಸ್ಟ್ರೈಕ್ ರೇಟ್ 106.67 ಇತ್ತು. ಹಾಗಾಗಿ ರಾಹುಲ್ ಅವರನ್ನು ಟಿ20 ವಿಶ್ವಕಪ್ ಇಂದ ದೂರವಿಟ್ಟರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ರಾಹುಲ್ ಅವರ ಓಪನರ್ ಸ್ಥಾನಕ್ಕೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು. ತಂಡದಿಂದ ಹೊರಗಿರುವ ಹಿರಿಯ ಅನುಭವಿ ಆಟಗಾರ ಶಿಖರ್ ಧವನ್ ಅವರನ್ನು ಸಹ ಪರಿಗಣಿಸಿ, ನ್ಯಾಷನಲ್ ಟೀಮ್ ಗೆ ಆಯ್ಕೆ ಮಾಡಿಕೊಳ್ಳಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.