ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೆಟ್ಟ ಮೇಲೆ ಬುದ್ದಿ ಬಂದಿತೇ?? ಮುಂದಿನ ಸರಣಿಗೆ ಸ್ಟಾರ್ ಆಟಗಾರರನ್ನು ಮತ್ತೆ ಕರೆ ತರಲು ನಿರ್ಧಾರ. ಬರುತ್ತಿರುವ ಖಡಕ್ ಆಟಗಾರ ಯಾರು ಗೊತ್ತೇ??

8,997

Get real time updates directly on you device, subscribe now.

ಏಷ್ಯಾಕಪ್ ಪಂದ್ಯಗಳಲ್ಲಿ ಭಾರತ ತಂಡ ಹೀನಾಯವಾದ ಸೋಲು ಕಂಡಿದೆ. ಸೋಲಿಗೆ ಪ್ರಮುಖ ಕಾರಣ ಕಳಪೆ ಬೌಲಿಂಗ್ ಪ್ರದರ್ಶನ ಎನ್ನುವುದು ಗೊತ್ತಿರುವ ವಿಚಾರ. ಈಗ ಭಾರತ ತಂಡದಲ್ಲಿರುವ ಬೌಲರ್ ಗಳು ಕಳಪೆ ಪ್ರದರ್ಶನ ನೀಡಿರುವ ಕಾರಣ, ಮುಂಬರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸರಣಿ ಪಂದ್ಯಗಳಲ್ಲಿ ಅನುಭವಿ ಆಟಗಾರನಿಗೆ ಅವಕಾಶ ನೀಡುವ ಪ್ಲಾನ್ ಮಾಡಿದೆ ಟೀಮ್ ಇಂಡಿಯಾ. ಇದೀಗ ಮೊಹಮ್ಮದ್ ಶಮಿ ಅವರನ್ನು ಮತ್ತೊಮ್ಮೆ ತಂಡಕ್ಕೆ ಆಯ್ಕೆ ಮಾಡಬಹುದು ಎನ್ನುವ ಸುಳಿವು ಸಿಕ್ಕಿದೆ.

2021ರ ವಿಶ್ವಕಪ್ ಬಳಿಕ ಶಮಿ ಅವರನ್ನು ಟಿ20 ಪಂದ್ಯಗಳಿಗೆ ಆಯ್ಕೆ ಮಾಡಿಲ್ಲ. ಬದಲಾಗಿ ಒನ್ ಡೇ ಕ್ರಿಕೆಟ್ ಹಾಗೂ ಟೆಸ್ಟ್ ಪಂದ್ಯಗಳಿಗೆ ಮಾತ್ರ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅನುಭವಿ ಆಟಗಾರನನ್ನು ಹೊರಗಿಟ್ಟು ಬೇರೆ ಆಯ್ಕೆ ಮಾಡಿಕೊಂಡು, ಸರಿಯಾದ ಪ್ರದರ್ಶನವಿಲ್ಲದೆ ಭಾರತ ತಂಡ ಒಳ್ಳೆಯ ಪಾಠವನ್ನೇ ಕಲಿತಿದೆ. ಶಮಿ ಅವರು ನ್ಯಾಷನಲ್ ಟೀಮ್ ಗೆ ಆಯ್ಕೆಯಾಗದೆ ಇದ್ದರು ಸಹ, ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ, ಅದ್ಭುತವಾದ ಪ್ರದರ್ಶನ ನೀಡಿ, 20 ವಿಕೆಟ್ಸ್ ತೆಗೆದಿದ್ದರು. ಹಾಗಾಗಿ ಶಮಿ ಅವರನ್ನು ಈಗ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡುವುದು ಬಹುತೇಕ ಖಚಿತ ಎನ್ನುವ ಮಾಹಿತಿಯನ್ನು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಸೆಪ್ಟೆಂಬರ್ 20, 23 ಹಾಗೂ 25ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ನಡೆಯಲಿದೆ.

ಆದರೆ ಟಿ20 ವಿಶ್ವಕಪ್ ಪಂದ್ಯಗಳಿಗೂ ಶಮಿ ಅವರು ಆಯ್ಕೆಯಾಗುತ್ತಾರ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಏಕೆಂದರೆ, ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಅವರು ಸಹ, ಆಸ್ಟ್ರೇಲಿಯಾ ವಿರುದ್ಧದ ಸರಣಿ ಪಂದ್ಯಗಳಲ್ಲಿ ಕಂಬ್ಯಾಕ್ ಮಾಡುವ ಲಕ್ಷಣಗಳಿವೆ, ಹಾಗಾಗಿ ಒಂದು ವೇಳೆ ಅವರು ತಂಡದಲ್ಲಿದ್ದರೆ, ಶಮಿ ಅವರನ್ನು ಟಿ20 ವಿಶ್ವಕಪ್ ಪಂದ್ಯಗಳಿಗೆ ಆಯ್ಕೆ ಮಾಡುವುದು ಸುಲಭವಿರುವುದಿಲ್ಲ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಆಟದ ಪ್ರದರ್ಶನ ಹೇಗಿರುತ್ತದೆ ಎನ್ನುವುದರ ಮೇಲೆ, ಟಿ20 ವಿಶ್ವಕಪ್ ಗೆ ಅವರು ಆಯ್ಕೆಯಾಗುತ್ತಾರಾ ಎನ್ನುವುದು ಗೊತ್ತಾಗಲಿದೆ.

Get real time updates directly on you device, subscribe now.