ಸೋಲಿಗೆ ಬೇರೆ ಯಾರು ಕಾರಣ ಅಲ್ಲವೇ ಅಲ್ಲ, ರೋಹಿತ್ ಮಾಡಿದ ಆ 4 ತಪ್ಪುಗಳೇ ಭಾರತದ ಸೋಲಿಗೆ ಕಾರಣ. ಯಾವ್ಯಾವು ಗೊತ್ತೇ?? ನಾಯಕನಾದ ಕೂಡಲೇ ಏನಾಯಿತು??

ಸೋಲಿಗೆ ಬೇರೆ ಯಾರು ಕಾರಣ ಅಲ್ಲವೇ ಅಲ್ಲ, ರೋಹಿತ್ ಮಾಡಿದ ಆ 4 ತಪ್ಪುಗಳೇ ಭಾರತದ ಸೋಲಿಗೆ ಕಾರಣ. ಯಾವ್ಯಾವು ಗೊತ್ತೇ?? ನಾಯಕನಾದ ಕೂಡಲೇ ಏನಾಯಿತು??

ಏಷ್ಯಾಕಪ್ ಪಂದ್ಯಾವಳಿ ಶುರು ಆಗುವುದಕ್ಕಿಂತ ಮೊದಲು ವಿನ್ನರ್ ಯಾರಾಗಬಹುದು ಎನ್ನುವ ಪ್ರಶ್ನೆಗೆ ಬಹುತೇಕ ಎಲ್ಲರೂ ನೀಡಿದ ಉತ್ತರ ಭಾರತ. ಏಷ್ಯಾಕಪ್ 2022 ನಲ್ಲಿ ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ಪಾಕಿಸ್ತಾನ್ ಮತ್ತು ಹಾಂಗ್ ಕಾಂಗ್ ವಿರುದ್ಧ ಗೆಲುವು ಸಾಧಿಸಿತು. ಆದರೆ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ್ ವಿರದ್ಧ ಸೋಲು ಅನುಭವಿಸಿತು. ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನದಿಂದ ತಂಡ ಸೋತಿತು ಎನ್ನುವುದೇ ಎಲ್ಲರ ಅಭಿಪ್ರಾಯ. ಸೂಪರ್ 4 ಹಂತದ ಪಂದ್ಯದಲ್ಲಿ ಮಾಡಿಕೊಂಡ ಬದಲಾವಣೆಗಳು ಸಹ ಇದಕ್ಕೆ ಕಾರಣ ಎಂದರೆ ತಪ್ಪಾಗುವುದಿಲ್ಲ.

ಇನ್ನು ಶ್ರೀಲಂಕಾ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಸಹ ಭಾರತ ಹೀನಾಯವಾದ ಸೋಲಿನಿಂದ, ಈಗ ಬಹುತೇಕ ಏಷ್ಯಾಕಪ್ ಟೂರ್ನಿ ಇಂದಲೇ ಬಹುತೇಕ ಹೊರಬಿದ್ದಿದೆ. ಬಲಿಷ್ಠವಾಗಿದ್ದ ಭಾರತ ತಂಡ ಇಷ್ಟರ ಮಟ್ಟಿಗೆ ಸೋಲು ಅನುಭವಿಸಲು ಕಾರಣ ಮತ್ಯಾರು ಅಲ್ಲ, ನಾಯಕ ರೋಹಿತ್ ಶರ್ಮಾ ಅವರೇ ಎನ್ನಲಾಗುತ್ತಿದೆ. ಪಂದ್ಯ ನಡೆಯುವಾಗ ರೋಹಿತ್ ಶರ್ಮಾ ಅವರು ಮೈದಾನದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳೇ ಇದಕ್ಕೆ ಕಾರಣ ಎನ್ನುವ ಮಾತುಗಳು ಈಗ ಕೇಳಿಬರುತ್ತಿದ್ದು, ರೋಹಿತ್ ಶರ್ಮಾ ಅವರು ತೆಗೆದುಕೊಂಡ ಆ ತಪ್ಪು ನಿರ್ಧಾರಗಳು ಯಾವುವು ಎಂದು ಈಗ ತಿಳಿಸುತ್ತೇವೆ ನೋಡಿ..

*ಸೂಪರ್ 4 ಹಂತದ ಪಂದ್ಯದಲ್ಲಿ ರೋಹಿತ್ ಶರ್ಮಾ ಮಾಡಿದ ಪ್ಲೇಯಿಂಗ್ 11 ಆಯ್ಕೆ ತಪ್ಪಾಗಿತ್ತು. ನಾಲ್ಕು ಬೌಲರ್ ಗಳ ತಂಡದೊಂದಿದೆ ರೋಹಿತ್ ಕಣಕ್ಕೆ ಇಳಿದರು. ಐದನೇ ಬೌಲರ್ ಆಗಿದ್ದವರು ಹಾರ್ದಿಕ್ ಪಾಂಡ್ಯ. ಕ್ರಿಕೆಟ್ ಪಂದ್ಯದಲ್ಲಿ ಒಂದು ತಂಡ ಗೆಲ್ಲಬೇಕು ಎಂದರೆ ಬೌಲರ್ ಗಳು ಬಹುಮುಖ್ಯ ಪಾತ್ರ ವಹಿಸುತ್ತಾರೆ, ಐದು ಬೌಲರ್ ಗಳು ಇರಬೇಕಾದ ಕಡೆ ರೋಹಿತ್ ಶರ್ಮಾ, ನಾಲ್ಕು ಬೌಲರ್ ಗಳನ್ನು ಆಯ್ಕೆ ಮಾಡಿ, ತಂಡಕ್ಕೆ ಅದಾಗಲೇ ಇದ್ದ ಭಾರವನ್ನು ಹೆಚ್ಚಿಸಿದರು. ಜೊತೆಗೆ ದಿನೇಶ್ ಕಾರ್ತಿಕ್ ಅವರು ಉತ್ತಮವಾದ ಆಟಗಾರ ಆಗಿ ಒಳ್ಳೆಯ ಪ್ರದರ್ಶನ ನೀಡಿದ್ದರು ಸಹ, ಅವರನ್ನು ಪ್ಲೇಯಿಂಗ್ 11 ಇಂದ ಕೈಬಿಡಲಾಗಿತ್ತು.

*ಪ್ಲೇಯರ್ ಗಳನ್ನು ಸರಿಯದ ಕ್ರಮದಲ್ಲಿ ಬಳಸಿಕೊಳ್ಳಲಿಲ್ಲ. ದೀಪಕ್ ಹೂಡಾ ಅವರನ್ನು ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಿದಕೊಂಡರು ಸಹ ರೋಹಿತ್ ಅವರು ದೀಪಕ್ ಹೂಡಾ ಅವರಿಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ನೀಡಿದರು. ಇದು ಒಳ್ಳೆಯ ನಿರ್ಧಾರ ಆಗಿರಲಿಲ್ಲ, ದೀಪಕ್ ಹೂಡಾ ಅವರಿಗೆ ಕೆಳ ಕ್ರಮಾಂಕದ ಬ್ಯಾಟಿಂಗ್ ಗೆ ಇಳಿಸಿದ್ದು, ತಪ್ಪಿನ ಆಯ್ಕೆ ಆಗಿತ್ತು, ಜೊತೆಗೆ ದೀಪಕ್ ಹೂಡಾ ಅವರಿಗೆ ಎರಡು ಪಂದ್ಯಗಳಲ್ಲೂ ಬೌಲಿಂಗ್ ಮಾಡಲು ಅವಕಾಶ ನೀಡಲಿಲ್ಲ.

*ರೋಹಿತ್ ಶರ್ಮಾ ಅವರು ತಂಡದ ಬೌಲರ್ ಗಳನ್ನು ಸರಿಯಾದ ಕ್ರಮದಲ್ಲಿ, ಸಮಯದಲ್ಲಿ ಬಲಸಿಕೊಳ್ಳುವುದಕ್ಕೆ ಹೆಸರುವಾಸಿ ಆಗಿದ್ದಾರೆ. ಆದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರ ಆಯ್ಕೆಗಳು ತಪ್ಪಾಗಿದ್ದವು. ಪಿಚ್ ಸ್ವಿಂಗ್ ಇದ್ದರು ಸಹ, ಅರ್ಷದೀಪ್ ಸಿಂಗ್ ಅವರನ್ನು ಮೊದಲ ಓವರ್ ಗೆ ಮಾತ್ರ ಸೀಮಿತಗೊಳಿಸಿದರು. ಬಳಿಕ ಯಾರ್ಕರ್ ಎಸೆತಗಳಲ್ಲಿ ಪರ್ಫೆಕ್ಟ್ ಆಗಿರುವ ಅರ್ಷದೀಪ್ ಅವರನ್ನು 19ನೇ ಓವರ್ ನಲ್ಲಿ ಕಳಿಸದೆ, 20ನೇ ಓವರ್ ನಲ್ಲಿ ಕಳಿಸಿ, ಅಲ್ಲಿಯು ತಪ್ಪು ಮಾಡಿದರು. 19ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಕಳಿಸಿದರು. ಆದರೆ ಅದು ತಂಡಕ್ಕೆ ಪ್ರಯೋಜನ ನೀಡಲಿಲ್ಲ, ಎರಡು ಪಂದ್ಯಗಳಲ್ಲೂ ವಿಫಲರಾದರು.

*ರೋಹಿತ್ ಶರ್ಮಾ ಅವರು ಟಿ20 ಪಂದ್ಯಗಳಲ್ಲಿ ಆಕ್ರಮಣಕಾರಿ ತಂತ್ರಗಳ ಉಪಾಯೋಗ ಮಾಡುತ್ತಿದ್ದಾರೆ, ಇದರಿಂದಾಗಿ ತಂಡದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಭಾರತ ಬ್ಯಾಟ್ಸ್ಮನ್ ಗಳ ವಿಕೆಟ್ ಬೇಗ ಕಳೆದುಕೊಳ್ಳುವ ಹಾಗೆ ಆಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಡೆದದ್ದು ಸಹ ಇದೇ. ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೋಹ್ಲಿ ಇಬ್ಬರು ಒಳ್ಳೆಯ ಇನ್ನಿಂಗ್ಸ್ ನೀಡುವ ನಿರೀಕ್ಷೆ ಇತ್ತು, ಆದರೆ ಇಬ್ಬರು ಕೂಡ ರನ್ ಗಳಿಸುವ ಪರಿಯಲ್ಲಿ, ಬೇಗ ವಿಕೆಟ್ ಒಪ್ಪಿಸಿ ಔಟ್ ಆದರು. ಇದು ಭಾರತ ತಂಡಕ್ಕೆ ದೊಡ್ಡ ನಷ್ಟವಾಯಿತು. ರೋಹಿತ್ ಅವರು ತೆಗೆದುಕೊಂಡ ಈ ನಾಲ್ಕು ಪ್ರಮುಖ ನಿರ್ಧಾರಗಳು ಭಾರತ ತಂಡದ ಸೋಲಿಗೆ ಕಾರಣವಾಯಿತು.