ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಏಷ್ಯಾ ಕಪ್ ಹೋಯ್ತು: ಆದರೆ ಮುಂದಿನ ಟೂರ್ನಿಗಳು ಗೆಲ್ಲಬೇಕು ಎಂದರೆ, ಭಾರತ ತಂಡದಲ್ಲಿ ಈ ಮೂರು ಕಠಿಣ ನಿರ್ಧಾರಗಳು ತೆಗೆದುಕೊಳ್ಳಬೇಕು. ಏನೇನು ಗೊತ್ತೇ??

1,378

Get real time updates directly on you device, subscribe now.

ಈ ಬಾರಿ 2022ರ ಏಷ್ಯಾಕಪ್ ನಲ್ಲಿ ಭಾರತ ತಂಡವು ಸರಿಯಾಗಿ ಆಯ್ಕೆಗಾರರ ಆಯ್ಕೆಯನ್ನು ಮಾಡದ ಕಾರಣ, ಕಳೆದ ಎರಡು ಪಂದ್ಯಗಳಲ್ಲೂ ಸೋತ ಭಾರತ ತಂಡ, ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಈ ಸಮಯದಲ್ಲಿ ತಂಡದ ಮುಂದಿರುವುದು, ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್. ವಿಶ್ವಕಪ್ ನಲ್ಲಿ ಭಾರತದ ಮೊದಲ ಪಂದ್ಯ, ಅಕ್ಟೋಬರ್ 23ರಂದು ಪಾಕಿಸ್ತಾನ್ ವಿರುದ್ಧ ನಡೆಯುತ್ತದೆ. ವಿಶ್ವಕಪ್ ನಲ್ಲಿ ಗೆಲ್ಲಲೇಬೇಕು ಎನ್ನುವುದಾದರೆ, ಭಾರತ ತಂಡದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಆ ಬದಲಾವಣೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕೆ.ಎಲ್.ರಾಹುಲ್ ಅವರನ್ನು ತಂಡದಿಂದ ಕೈಬಿಡಬೇಕು :- ಕೆ.ಎಲ್.ರಾಹುಲ್ ಅವರು ಏಷ್ಯಾಕಪ್ ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ಒಳ್ಳೆಯ ಪ್ರದರ್ಶನ ನೀಡದೇ, ವೈಫಲ್ಯ ಅನುಭವಿಸಿದ್ದಾರೆ. ಇದು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳ ಮೇಲೆ ಪ್ರಭಾವ ಬೀರುತ್ತದೆ. ಅದರಿಂದ ರಾಹುಲ್ ಅವರನ್ನು ತಂಡದಿಂದ ಹೊರಗಿಡುವುದೇ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಅವರ ಬದಲಾಗಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಕೊಟ್ಟರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸಂಜು ಸ್ಯಾಮ್ಸನ್ ಯಾವುದೇ ಕ್ರಮಾಂಕದಲ್ಲೂ ಉತ್ತಮ ಪ್ರದರ್ಶನ ನೀಡುವ ಆಟಗಾರ ಆಗಿದ್ದಾರೆ. ಹಾಗಾಗಿ ಅವರಿಗೆ ಅವಕಾಶ ಕೊಟ್ಟರೆ ಒಳ್ಳೆಯದು ಎನ್ನಲಾಗುತ್ತಿದೆ.

ರಿಷಬ್ ಪಂತ್ ಅವರನ್ನು ತಂಡದಿಂದ ಹೊರಗಿಡಬೇಕು :- ರಿಷಬ್ ಪಂತ್ ಅವರು ಸಹ ಏಷ್ಯಾಕಪ್ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿಲ್ಲ. ಅವರು ಟೆಸ್ಟ್ ಕ್ರಿಕೆಟ್ ಹಾಗೂ ಒನ್ ಡೇ ಕ್ರಿಕೆಟ್ ನಲ್ಲಿ ಅದ್ಭುತವಾಗಿ ಆಡುತ್ತಾರೆ. ಆದರೆ ಟಿ20 ಪಂದ್ಯಗಳಿಗೆ ಉತ್ತಮವಾದ ಪ್ಲೇಯರ್ ಅಲ್ಲ. ಹಾಗಾಗಿ ರಿಷಬ್ ಪಂತ್ ಅವರನ್ನು ಹೊರಗಿಟ್ಟು, ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಕೊಡಬೇಕು. ಟಿ20 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರಷ್ಟು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ, ದಿನೇಶ್ ಕಾರ್ತಿಕ್ ಅವರು ಮ್ಯಾಚ್ ಫಿನಿಷರ್ ಸ್ಥಾನವನ್ನು ಅದ್ಭುತವಾಗಿ ನಿರ್ವಹಿಸುತ್ತಾರೆ. ಈಗಾಗಲೇ ಹಲವಾರು ಮ್ಯಾಚ್ ಫಿನಿಶಿಂಗ್ ಇನ್ನಿಂಗ್ಸ್ ನೀಡಿದ್ದಾರೆ. ಹಾಗಾಗಿ ಅವರನ್ನೇ ಆಯ್ಕೆಮಾಡಿಕೊಳ್ಳುವುದು ಒಳ್ಳೆಯದು.

ಭುವನೇಶ್ವರ್ ಕುಮಾರ್ :- ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲು ಭುವನೇಶ್ವರ್ ಕುಮಾರ್ ಅವರು ಯೋಗ್ಯವಾಗಿ ಕಾಣುತ್ತಿಲ್ಲ. ಏಷ್ಯಾಕಪ್ 2022ರ, ಸೂಪರ್ 4 ಹಂತದ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಕಳಪೆ ಪ್ರದರ್ಶನದಿಂದ ಭಾರತ ತಂಡ ಸೋಲು ಕಂಡಿತು. 19ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಸರಿಯಾಗಿ ಬೌಲಿಂಗ್ ಮಾಡದೆ, ಸೋಲಿನ ಪ್ರಮುಖ ಕಾರಣವಾದರು. ಹಾಗಾಗಿ ಭಾರತ ತಂಡವು ಟಿ20 ವಿಶ್ವಕಪ್ ಅನ್ನು ಗೆಲ್ಲಬೇಕಾದರೆ ಭುವನೇಶ್ವರ್ ಕುಮಾರ್ ಅವರನ್ನು ಪ್ಲೇಯಿಂಗ್ 11 ಇಂದ ಹೊರಗಿಡುವುದೇ ಒಳ್ಳೆಯದು ಎನ್ನಲಾಗುತ್ತಿದೆ. ಅವರ ಬದಲಾಗಿ ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರಿಗೆ ಅವಕಾಶ ಕೊಡುವುದು ಒಳ್ಳೆಯದು ಎನ್ನಲಾಗುತ್ತಿದೆ.

Get real time updates directly on you device, subscribe now.