ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸೋತರೂ ಬುದ್ದಿ ಕಲಿಯದ ನಾಯಕ: ಏಷ್ಯಾ ಕಪ್ ಸೋಲಿನ ನಂತರ ವಿಶ್ವಕಪ್ ತಂಡದ ಕುರಿತು ರೋಹಿತ್ ಹೇಳಿದ್ದೇನು ಗೊತ್ತೇ?? ಈ ತಪ್ಪು ನಿರ್ಧಾರಗಳಿಗೆ ಕೊನೆಯೇ ಇಲ್ಲವೇ??

699

Get real time updates directly on you device, subscribe now.

2022ರ ಏಷ್ಯಾಕಪ್ ಪಂದ್ಯಗಳಲ್ಲಿ ಭಾರತ ತಂಡ ಮಾಡಿದ ಕೆಲವೊಂದು ತಪ್ಪುಗಳಿಂದ ಇಂದು ಟೂರ್ನಿ ಇಂದಲೇ ಬಹುತೇಕ ಹೊರಬರುವ ಹಾಗೆ ಆಗಿದೆ. ಇನ್ನು ಭಾರತ ಮುಂದಿರುವುದು ಟಿ20 ವಿಶ್ವಕಪ್ ಪಂದ್ಯಗಳು. ಇದೀಗ ಎಲ್ಲರ ಕಣ್ಣು ವಿಶ್ವಕಪ್ ಪಂದ್ಯಗಳಿಗೆ ಆಯ್ಕೆಯಾಗುಗ ಆಟಗಾರರ ಮೇಲಿದೆ, ಹಾಗಾಗಿ ಭಾರತ ತಂಡ ಹೇಗೆ ತಯಾರಾಗುತ್ತಿದೆ, ಹಾಗೂ ಆಟಗಾರರ ಆಯ್ಕೆ ಹೇಗೆ ನಡೆದಿದೆ ಎನ್ನುವುದದ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತನಾಡಿದ್ದು, ವಿಶ್ವಕಪ್ ಪಂದ್ಯಗಳಿಗೆ ಈಗಾಗಲೇ ತಂಡ ಬಹುತೇಕ ಸಿದ್ಧವಾಗಿದೆ ಎಂದು ಹೇಳಿದ್ದಾರೆ..

“ಕೆಲವು ವಿಷಯಗಳನ್ನು ಪ್ರಯೋಗ ಮಾಡಿ, ಹೇಗೆ ವರ್ಕ್ ಆಗುತ್ತದೆ ಎಂದು ತಿಳಿದುಕೊಳ್ಳಲು ಈ ಪ್ರಯೋಗಗಳನ್ನು ಮಾಡಬೇಕಾಯಿತು. ಮೂರು ಸೀಮರ್, ಇಬ್ಬರು ಸ್ಪಿನ್ನರ್ ಹಾಗೂ ಒಬ್ಬ ಆಲ್ ರೌಂಡರ್ ಜೊತೆಗೆ ಆಡಿದರೆ ಏನಾಗಲಿದೆ ಎಂದು ಪ್ರಯತ್ನಿಸಿ ಉತ್ತರ ತಿಳಿದುಕೊಳ್ಳಲು ಬಯಸಿದೆವು. ಇನ್ನು ಉತ್ತರ ಹುಡುಕುತ್ತಿದ್ದೇವೆ. ವಿಶ್ವಕಪ್ ಗೆ ಆಡಲು ಇನ್ನು ಸಿದ್ಧತೆ ನಡೆಸಬೇಕು. ವಿಶ್ವಕಪ್ ನ ಎಲ್ಲಾ ರೀತಿಯಲ್ಲು ಸಮತೋಲನ ಹೊಂದಿರಬೇಕು, ಹಾರ್ದಿಕ್ ಪಾಂಡ್ಯ ಬಂದಿರುವುದರಿಂದ ಮೂರು ವೇಗಿಗಳು ಇರಲಿದ್ದಾರೆ. ಮೂರು ಫಾಸ್ಟ್ ಬೌಲರ್, ಇಬ್ಬರು ಸ್ಪಿನ್ನರ್ ಗಳು ಇದ್ದಾಗ ಏನಾಗುತ್ತದೆ ಎಂದು ತಿಳಿದುಕೊಳ್ಳಬೇಕಿತ್ತು. ಈ ಸೋಲು ಬಹಳಷ್ಟು ಪಾಠ ಕಲಿಸಿದೆ..” ಎಂದಿದ್ದಾರೆ ರೋಹಿತ್ ಶರ್ಮಾ.

ಇನ್ನು ವಿಶ್ವಕಪ್ ತಂಡದ ಬಗ್ಗೆ ಮಾತನಾಡಿ, ಈಗ ಕೆಲವು ಪ್ರಶ್ನೆಗಳಿಗೆ ನಮಗೆ ಉತ್ತರ ಸಿಕ್ಕಿದೆ. ವಿಶ್ವಕಪ್ ತಂಡದ ಬಹುತೇಕ ಮುಗಿದಿದೆ, ಇನ್ನು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇನ್ನೆರಡು ಸರಣಿ ಬಳಿಕ ವಿಶ್ವಕಪ್ ಗೆ ಹೋಗುತ್ತೇವೆ, ಅದಕ್ಕಿಂತ ಮೊದಲು ಕೆಲವು ಆಟಗಾರರನ್ನು ಪರೀಕ್ಷೆ ಮಾಡಿಬೇಕು..ಎಂದಿದ್ದಾರೆ ರೋಹಿತ್. ದಿನೇಶ್ ಕಾರ್ತಿಕ್ ಅವರ ಬದಲಾಗಿ ದೀಪಕ್ ಅವರನ್ನು ಆಯ್ಕೆ ಮಾಡಿ, ದೀಪಕ್ ಹೂಡಾ ಅವರಿಗೆ ಬೌಲಿಂಗ್ ಯಾಕೆ ಕೊಡಲಿಲ್ಲ ಎನ್ನುವ ಬಗ್ಗೆ ಸಹ ರೋಹಿತ್ ಶರ್ಮಾ ಮಾತನಾಡಿದ್ದಾರೆ. “ದೀಪಕ್ ಹೂಡಾ ಅವರಿಗೆ ಬೌಲಿಂಗ್ ಕೊಡುವ ಪ್ಲಾನ್ ಇತ್ತು. 6ನೇ ಬೌಲರ್ ಇದ್ದರು ಸಹ, ಐವರನ್ನು ಬಳಸಿಕೊಳ್ಳುವ ನಿರ್ಧಾರ ಮಾಡಿದೆವು.

ಆರಂಭದಲ್ಲೇ ವಿಕೆಟ್ಸ್ ತೆಗೆಯಬೇಕು ಎನ್ನುವ ಪ್ರಯತ್ನದಲ್ಲಿ ಚಾಹಲ್ ಮತ್ತು ಅಶ್ವಿನ್ ಅವರ ಮೂಲಕ ಅದಾಗಲೇ ಸೆಟ್ ಆಗಿದ್ದ ಬ್ಯಾಟ್ಸ್ಮನ್ ಗಳ ವಿಕೆಟ್ ತೆಗೆಯುವ ಪ್ರಯತ್ನ ಮಾಡಿದೆವು. ಅದರಿಂದಾಗಿ ಹೂಡಾ ಅವರಿಗೆ ಬೌಲಿಂಗ್ ನೀಡಲಿಲ್ಲ. ಆರಂಭದಲ್ಲಿ ವಿಕೆಟ್ ಪಡೆದಿದ್ದರೆ ಹೂಡಾ ಅವರಿಗೆ ಬೌಲಿಂಗ್ ನೀಡುವ ಪ್ಲಾನ್ ಇತ್ತು.” ಎಂದು ಸಮರ್ಥನೆ ಸಹ ನೀಡಿದ್ದಾರೆ. ರೋಹಿತ್ ಶರ್ಮಾ ಅವರು ಹೇಳಿರುವ ಹಾಗೆ, ಏಷ್ಯಾಕಪ್ ನಲ್ಲಿ ಆಡಿರುವ ಬಹುತೇಕ ತಂಡ ವಿಶ್ವಕಪ್ ನಲ್ಲೂ ಆಡಲಿದೆ, ಆದರೆ ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಬಾರಿ ಮೊಹಮ್ಮದ್ ಶಮಿ ಅವರಂತಹ ಆಕ್ರಮಣಕಾರಿ ಬೌಲರ್ ಅನ್ನು ಆಯ್ಕೆಮಾಡದೆ ಇದ್ದಿದ್ದಕ್ಕೆ ಭಾರತ ತಂಡ ಟೀಕೆಗೆ ಗುರಿಯಾಯಿತು. ವಿಶ್ವಕಪ್ ನಲ್ಲಿ ಬೌಲರ್ ಗಳ ಆಯ್ಕೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.