ಕರುನಾಡ ವಾಣಿ
ಇದು ನಿಮ್ಮ ಧ್ವನಿ

ರೋಹಿತ್ ಶರ್ಮ, ದ್ರಾವಿಡ್ ರವರ ಮೇಲೆ ಮತ್ತೊಂದು ಅನುಮಾನ; ದಿನೇಶ್ ಕಾರ್ತಿಕ್ ವಿಚಾರದಲ್ಲಿ ನಡೆಯುತ್ತಿದೆಯೇ ಲಾಭಿ: ಬೇಕು ಅಂತಲೇ.

2,247

Get real time updates directly on you device, subscribe now.

ಏಷ್ಯಾಕಪ್ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಸರಿಯಾಗಿ ಬಳಸಿಕೊಳ್ಳದೆ ಬೇರೆ ಆಟಗಾರರನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರ ಬಗ್ಗೆ ಈಗ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ದ್ರಾವಿಡ್ ಅವರ ಮೇಲೆ ಅನುಮಾನ ಶುರುವಾಗುತ್ತಿದೆ. ಏಷ್ಯಾಕಪ್ 2022ರ ಮೊದಲ ಎರಡು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರು ಪ್ಲೇಯಿಂಗ್ 11 ನಲ್ಲಿದ್ದರು, ಆದರೆ ಅವರಿಗೆ ಆಡುವ ಅವಕಾಶ ಸಿಕ್ಕಿದ್ದು, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಮಾತ್ರ, ಅದು ಒಂದು ಬಾಲ್ ಎದುರಿಸಿ, 1 ರನ್ ಪಡೆದು ಅಜೇಯರಾಗಿ ಉಳಿದರು.

ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಪ್ಲೇಯಿಂಗ್ 11 ಇಂದ ಕೈಬಿಡಲಾಗಿದೆ, ಅವರ ಬದಲಾಗಿ, ರಿಷಬ್ ಪಂತ್ ಅವರಿಗೆ ಸ್ಥಾನ ನೀಡಲಾಯಿತು, ರವೀಂದ್ರ ಜಡೇಜಾ ಅವರು ತಂಡದಿಂದ ಹೊರಹೋದ ಕಾರಣ, ಅವರು ಎಡಗೈ ಬ್ಯಾಟ್ಸನ್ ಆಗಿದ್ದರಿಂದ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಲಾಗಿದೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದರು. ರಿಷಬ್ ಪಂತ್ ಅವರನ್ನು ಎಡಗೈ ಬ್ಯಾಟ್ಸ್ಮನ್ ಆಗಿ ಮತ್ತು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿಕೊಳ್ಳಲಾಯಿತು. ಆದರೆ ದಿನೇಶ್ ಕಾರ್ತಿಕ್ ಅವರಿಲ್ಲದೆ, ರಿಷಬ್ ಪಂತ್ ಗೆ ಸ್ಥಾನ ನೀಡಿದ ಆ ಎರಡು ಪಂದ್ಯಗಳಲ್ಲೂ ಭಾರತ ತಂಡ ಸೋತಿದೆ. ಏಷ್ಯಾಕಪ್ ನಲ್ಲಿ ಭಾರತ ತಂಡ ಲೀಗ್ ಇಂದಲೇ ಬಹುತೇಕ ಹೊರಬಿದ್ದ ಪರಿಸ್ಥಿತಿ ಈಗ ಎದುರಾಗಿದೆ.

ರವೀಂದ್ರ ಜಡೇಜಾ ಅವರು ಇಂಜುರಿ ಇಂದ ತಂಡದಿಂದ ಹೊರಹೋದ ಬಳಿಕ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಯಿತು. ರಿಷಬ್ ಪಂತ್ ಅವರನ್ನು ಮಾತ್ರವಲ್ಲದೆ ಆಲ್ ರೌಂಡರ್ ಎನ್ನುವ ಕಾರಣಕ್ಕೆ ದೀಪಕ್ ಹೂಡಾ ಅವರನ್ನು ಪ್ಲೇಯಿಂಗ್ 11ಗೆ ಆಯ್ಕೆ ಮಾಡಿಕೊಳ್ಳಲಾಯಿತು, ಆದರೆ ದೀಪಕ್ ಹೂಡಾ ಅವರನ್ನು ಒಬ್ಬ ಸ್ಪಿನ್ ಬೌಲರ್ ಆಗಿ, 6ನೇ ಬೌಲರ್ ಆಗಿ ಎಲ್ಲಿಯೂ ಬಳಸಿಕೊಳ್ಳಲಿಲ್ಲ. ಈಗಿರುವ 5 ಬೌಲರ್ ಗಳು ಸಹ ದುಬಾರಿಯಾಗುತ್ತಿದ್ದಾರೆ ಎಂದು ಗೊತ್ತಿದ್ದರೂ ಸಹ, ದೀಪಕ್ ಹೂಡಾ ಅವರನ್ನು 6ನೇ ಬೌಲರ್ ಆಗಿ ಬಳಸದೆ, 5 ಬೌಲರ್ ಗಳನ್ನೇ ಪಂದ್ಯಗಳಲ್ಲಿ ಬೌಲಿಂಗ್ ಮಾಡಲು ಬಿಡಲಾಯಿತು. ದೀಪಕ್ ಅವರು ಸ್ಪಿನ್ ಆಲ್ ರೌಂಡರ್ ಆಗಿದ್ದರೂ ಸಹ ಅವರನ್ನು ಬ್ಯಾಟಿಂಗ್ ಗಾಗಿ ಮಾತ್ರ ಬಳಸಿಕೊಳ್ಳಲಾಯಿತು.

ದೀಪಕ್ ಹೂಡಾ ಅವರನ್ನು ಬ್ಯಾಟಿಂಗ್ ಗಾಗಿ ಮಾತ್ರ ಆಯ್ಕೆ ಮಾಡಿಕೊಂಡಿದ್ದೆ ಆದಲ್ಲಿ, ಅವರ ಬದಲಾಗಿ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಕೊಡಬಹುದಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಈ ವಿಚಾರದಲ್ಲಿ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಮೇಲೆ ಅನುಮಾನ ವ್ಯಕ್ತವಾಗಿದೆ, ದಿನೇಶ್ ಕಾರ್ತಿಕ್ ಅವರ ವಿಚಾರದಲ್ಲಿ ಬೇಕೆಂದೇ ಹೀಗೆಲ್ಲಾ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಈಗ ಶುರುವಾಗಿದೆ. ಇದಕ್ಕೆ ಉತ್ತರ ಸಿಗದ ಹಾಗೆ ಆಗಿದೆ.

Get real time updates directly on you device, subscribe now.