ಈ ರೀತಿಯ ಪಿಚ್ ನಲ್ಲಿ ಕ್ರಿಕೆಟ್ ಆಡಿದ್ದಿರಾ?? ಆಡಿದರೆ ಏನಾಗುತ್ತದೆ ಗೊತ್ತೇ?? ವೈರಲ್ ಆಗಿರುವ ಹುಡುಗರಿಗೆ ಏನಾಗಿದೆ ಗೊತ್ತೇ??

ಈ ರೀತಿಯ ಪಿಚ್ ನಲ್ಲಿ ಕ್ರಿಕೆಟ್ ಆಡಿದ್ದಿರಾ?? ಆಡಿದರೆ ಏನಾಗುತ್ತದೆ ಗೊತ್ತೇ?? ವೈರಲ್ ಆಗಿರುವ ಹುಡುಗರಿಗೆ ಏನಾಗಿದೆ ಗೊತ್ತೇ??

ಸಾಮಾನ್ಯವಾಗಿ ಕ್ರಿಕೆಟ್ ಆಟವನ್ನು ಎಲ್ಲಿ ಆಡುತ್ತಾರೆ? ಮೈದಾನದಲ್ಲಿ ಕ್ರಿಕೆಟ್ ಆಡುತ್ತಾರೆ. ಈಗಿನ ಜೇನೇರೇಷನ್ ಮಾತ್ರವಲ್ಲ ನಮ್ಮ ಹಿಂದಿನ ಜೇನೇರೇಷನ್ ನವರಿಗೂ ಕ್ರಿಕೆಟ್ ಕ್ರೇಜ್ ಎಷ್ಟಿದೆ ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ನಮ್ಮ ದೇಶದಲ್ಲಿ ಕ್ರಿಕೆಟ್‌ಗೆ ಇರುವ ಕ್ರೇಜ್ ಬೇರೆ ಯಾವ ಆಟಕ್ಕೂ ಇಲ್ಲ ಎನ್ನುವುದಂತೂ ಸತ್ಯ.. ಗಲ್ಲಿಯಿಂದ ಡೆಲ್ಲಿವರೆಗೂ ಕ್ರಿಕೆಟ್ ಆಡುತ್ತಾರೆ. ಸ್ವಲ್ಪ ಸಮಯ ಸಿಕ್ಕರೆ ಗಲ್ಲಿಗಳಲ್ಲಿ, ಮೈದಾನಗಳಲ್ಲಿ ನಮ್ಮ ಹುಡುಗರು ಬ್ಯಾಟ್, ಬಾಲ್ ಹಿಡಿದು ಕ್ರಿಕೆಟ್ ಆಡಲು ಶುರು ಮಾಡಿಕೊಳ್ಳುತ್ತಾರೆ. ಕ್ರಿಕೆಟ್‌ ಗೆ ಇರುವ ಜನಪ್ರಿಯತೆಅಂಥದ್ದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗು, ಹಲವರು ಸಮಯ ಕಳೆಯಲು ಅಥವಾ ಬಾಜಿ ಕಟ್ಟಲು ಕ್ರಿಕೆಟ್ ಆಡುತ್ತಾರೆ.

ಆದರೆ, ಕ್ರಿಕೆಟ್ ಆಡಲು ಉತ್ತಮ ಮೈದಾನ ಬಹಳ ಮುಖ್ಯ. ನಂತರ ಉತ್ತಮವಾದ ಪಿಚ್ ಕೂಡ ಮುಖ್ಯವಾಗುತ್ತದೆ. ಪಿಚ್ ಸರಿ ಇಲ್ಲದೆ ಹೋದರೆ, ಕ್ರಿಕೆಟ್ ಆಡುವುದು ತುಂಬಾ ಕಷ್ಟವಾಗುತ್ತದೆ. ಆದರೆ ಇಂದು ನೀವು ನೋಡಲಿರುವ ವಿಡಿಯೋ ಬೇರೆ ರೀತಿಯೇ ಇದ್ದು, ನಿಮಗೆ ಅದು ವಿಚಿತ್ರ ಎನ್ನಿಸಬಹುದು. ಈ ವಿಡಿಯೋದಲ್ಲಿ ಇರುವವರು ಕ್ರಿಕೆಟ್ ಆಡುತ್ತಿರುವ ಪಿಚ್ ನಿಮ್ಮನ್ನು ಮೂಕರನ್ನಾಗಿ ಮಾಡುತ್ತದೆ. ಯಾಕೆಂದರೆ, ಈ ರೀತಿ ಕ್ರಿಕೆಟ್ ಆಡುವುದನ್ನು ನೀವು ನೋಡಿರುವುದಕ್ಕೆ ಸಾಧ್ಯವಿಲ್ಲ. ಸಧ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಪಿಚ್‌ನಲ್ಲಿ ನೀವು ಕ್ರಿಕೆಟ್ ಆಡಿದರೆ, ನೀವು ಶ್ರೇಷ್ಠರು ಎನ್ನುತ್ತಿದ್ದಾರೆ ನೆಟ್ಟಿಗರು.

ಸಾಮಾನ್ಯವಾಗಿ ಕ್ರಿಕೆಟ್ ಗ್ರೌಂಡ್ ನಲ್ಲಿ ಪಿಚ್ ಬಿಗಿಯಾಗಿರುತ್ತದೆ. ಏಕೆಂದರೆ, ಪಿಚ್‌ ನಲ್ಲಿ ಚೆಂಡನ್ನು ಹೊಡೆದ ನಂತರ ಬ್ಯಾಟ್ಸ್‌ಮನ್‌ ಗಳು ಚೆಂಡು ಹಿಡಿಯಲು ಓಡಬೇಕು. ಹಾಗಾಗಿ, ಪಿಚ್ ಗಟ್ಟಿಯಾಗಿ ಇರುತ್ತದೆ. ಆದರೆ, ಈ ವಿಡಿಯೋದಲ್ಲಿ ನೋಡಿದರೆ, ಪಿಚ್ ಕೆಸರಿನಿಂದ ಕೂಡಿದೆ. ಆಕಡೆ ಈಕಡೆ ಕಾಲು ಸರಿಸಿದರೆ ಸಾಕು, ನೀವು ಜಾರುವುದು ಖಚಿತ. ಅಂತಹ ಪ್ರದೇಶದಲ್ಲಿ ಈ ಹುಡುಗರು ಕ್ರಿಕೆಟ್ ಆಡುಟ್ಟಿದ್ದಾರೆ. ಇದೀಗ, ಇವರು ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪಿಚ್‌ನಲ್ಲಿ ಆಡಲು, ಕ್ರಿಕೆಟ್ ಆಡುವುದು ಗೊತ್ತಿರುವುದು ಮಾತ್ರವಲ್ಲ, ಇಲ್ಲಿ ಜಾರದಂತೆ ಇರುವುದನ್ನು ಕಲಿಯಬೇಕು. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವು ಕೂಡ ಒಮ್ಮೆ ನೋಡಿ..