ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದಿನೇಶ್ ಕಾರ್ತಿಕ್ ರವರನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ಗವಾಸ್ಕರ್ ಹೇಳಿದ್ದೇನು ಗೊತ್ತೇ??

260

Get real time updates directly on you device, subscribe now.

ದಿನೇಶ್ ಕಾರ್ತಿಕ್ ಅವರು ಹಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂದಕ್ಕಾಗಿ ಹಲವು ಮ್ಯಾಚ್ ಗಳಲ್ಲಿ ಪಾಲ್ಗೊಂಡು, ತಂಡಕ್ಕೆ ಸಾಥ್ ನೀಡಿದ್ದಾರೆ. ಆದರೆ ಒಂದೆರಡು ವರ್ಷಗಳಿಂದ ದಿನೇಶ್ ಕಾರ್ತಿಕ್ ಅವರು ನ್ಯಾಷನಲ್ ಟೀಮ್ ಇಂಡಿಯಾ ಹೊರಗುಳಿದಿದ್ದರು, ಆದರೆ ಈ ವರ್ಷ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದ ಪರವಾಗಿ ಫಿನಿಷರ್ ಆಗಿ ದಿನೇಶ್ ಕಾರ್ತಿಕ್ ಅವರು ನೀಡಿದ ಅದ್ಭುತವಾದ ಪ್ರದರ್ಶನದಿಂದ ದಿನೇಶ್ ಕಾರ್ತಿಕ್ ಅವರು ಮತ್ತೊಮ್ಮೆ ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ. ಪ್ರಸ್ತುತ ಏಷ್ಯಾಕಪ್ 2022 ಪಂದ್ಯಗಳಿಗೂ ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದಾರೆ..

ಏಷ್ಯಾಕಪ್ 2022 ಪಂದ್ಯಗಳಿಗೆ ದಿನೇಶ್ ಕಾರ್ತಿಕ್ ಅವರನ್ನು ಫಿನಿಷರ್ ಮತ್ತು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿ, ಈಗ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಕೊಡದೆ, ಬೆಂಚ್ ಕಾಯುವ ಹಾಗೆ ಮಾಡುತ್ತಿರುವುದಕ್ಕೆ ಹಿರಿಯ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಅವರು ಮೇನೇಜ್ಮೆಂಟ್ ಮೇಲೆ ಕಿಡಿಕಾರಿದ್ದಾರೆ. ಪಾಕಿಸ್ತಾನ್ ವಿರುದ್ಧ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಶುರು ಮಾಡಿದ ಭಾರತ ತಂಡಕ್ಕೆ, ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಇಬ್ಬರು 28 ರನ್ ಗಳಿಸಿ ಉತ್ತಮವಾದ ಆರಂಭ ನೀಡಿದರು ಸಹ, ಸೂರ್ಯಕುಮಾರ್ ಅವರು ಒಳ್ಳೆಯ ಪ್ರದರ್ಶನ ನೀಡಲಿಲ್ಲ, ಜೊತೆಗೆ ರಿಷಬ್ ಪಂತ್ ಅವರು ಸಹ ಒಳ್ಳೆಯ ಆರಂಭ ಮಾಡಿ, ಬೇಡದ ಶಾಟ್ ಹೊಡೆಯಲು ಹೋಗಿ ಔಟ್ ಆದರು.

ಅಂದಿನ ಪಂದ್ಯದಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದು, ವಿರಾಟ್ ಕೋಹ್ಲಿ ಅವರು. ಹಾಗಾಗಿ ಸುನೀಲ್ ಗವಾಸ್ಕರ್ ಅವರು ವಿರಾಟ್ ಕೋಹ್ಲಿ ಅವರನ್ನು ಹೊಗಳಿ, ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಹೊರಗೆ ಇಟ್ಟಿದ್ದಕ್ಕೆ ಸಿಟ್ಟು ವ್ಯಕ್ತಪಡಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರನ್ನು ಫಿನಿಷರ್ ಆಗಿ ತಂಡಕ್ಕೆ ಆಯ್ಕೆ ಮಾಡಿ, ಈಗ ಕೈಬಿಟ್ಟಿರುವುದಕ್ಕೆ ಕಿಡಿಕಾರಿದ್ದಾರೆ. “ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಯಾಕೆ ಕೈಬಿಟ್ಟಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ನನ್ನಿಂದ ಆಗುತ್ತಿಲ್ಲ. ಅವರನ್ನು ಮ್ಯಾಚ್ ಫಿನಿಷರ್ ಎಂದು ಆಯ್ಕೆ ಮಾಡಿ, ಈಗ ತಂಡದಿಂದಲೇ ಹೊರಗೆ ಇಟ್ಟಿರುವುದು ಆಶ್ಚರ್ಯ ಮೂಡಿಸಿದೆ..” ಎಂದು ಹೇಳಿದ್ದಾರೆ ಸುನೀಲ್ ಗವಾಸ್ಕರ್.

Get real time updates directly on you device, subscribe now.