ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಟಿ 20 ಕ್ರಿಕೆಟ್ ವಿಶ್ವದ ಶ್ರೇಷ್ಠ ಟಾಪ್ ೫ ಆಟಗಾರರನ್ನು ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್: ಆಯ್ಕೆಯಾದವರಲ್ಲಿ ಭಾರತೀಯರು ಎಷ್ಟು ಜನ ಗೊತ್ತೇ??

113

Get real time updates directly on you device, subscribe now.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ಸ್ ಅವರು ಆಗಾಗ ನಮ್ಮ ಭಾರತದ ಆಟಗಾರರನ್ನು ಸಹ ಸಪೋರ್ಟ್ ಮಾಡುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ರಿಕ್ಕಿ ಪಾಂಟಿಂಗ್ಸ್ ಅವರು ತಮಗೆ ಇಷ್ಟವಾಗುವ ವಿಶ್ವದ ಶ್ರೇಷ್ಠ 5 ಟಿ20 ಪ್ಲೇಯರ್ ಗಳ ತಂಡವನ್ನು ಹೆಸರಿಸಿದ್ದಾರೆ. ಇದರಲ್ಲಿ ನಮ್ಮ ಭಾರತದ ತಂಡದ ಇಬ್ನರು ಆಟಗಾರರನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ. ರಿಕ್ಕಿ ಪಾಂಟಿಂಗ್ಸ್ ಅವರು ಆಯ್ಕೆ ಮಾಡಿರುವ ತಂಡದಲ್ಲಿ ಯಾರೆಲ್ಲಾ ಇದ್ದಾರೆ, ನಮ್ಮ ಭಾರತದ ಆ ಇಬ್ಬರು ಪ್ಲೇಯರ್ ಗಳು ಯಾರು ಎಂದು ತಿಳಿಸುತ್ತೇವೆ ನೋಡಿ..

ರಿಕ್ಕಿ ಪಾಂಟಿಂಗ್ ಅವರು ಮೊದಲ ಸ್ಥಾನಕ್ಕೆ ಅಫ್ಗಾನಿಸ್ತಾನ್ ನ ಶ್ರೇಷ್ಠ ಆಟಗಾರ ಆಗಿರುವ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿದ್ದಾರೆ, “ನಂಬರ್ 1 ಸ್ಥಾನವನ್ನು ರಶೀದ್ ಖಾನ್ ಅವರಿಗೆ ಕೊಡುತ್ತೇನೆ, ಒಂದು ವೇಳೆ ಹಣದ ನಿರ್ಬಂಧನೆ ಇಲ್ಲದೆ ರಶೀದ್ ಖಾನ್ ಅವರನ್ನು ಐಪಿಎಲ್ ನಲ್ಲಿ ಹರಾಜಿಗೆ ಇಟ್ಟರೆ, ಅವರು ದಾಖಲೆಯ ಮೊತ್ತಕ್ಕೆ ಮಾರಾಟ ಆಗುವುದು ಖಂಡಿತ..” ಎಂದು ಹೇಳಿದ್ದಾರೆ. “ಬಾಬರ್ ಅಜಂ ಅವರಿಗೆ ಎರಡನೇ ಸ್ಥಾನ ನೀಡುತ್ತೇನೆ. ಟಿ20 ಯ ನಂಬರ್ 1 ಬ್ಯಾಟ್ಸ್ಮನ್ ಇವರು..” ಎಂದು ಹೇಳುವ ಮೂಲಕ ಪಾಕಿಸ್ತಾನ್ ಆಟಗಾರ ಬಾಬರ್ ಅಜಂ ಅವರಿಗೆ ಎರಡನೇ ಸ್ಥಾನ ನೀಡಿದ್ದಾರೆ.

“ಮೂರನೇ ಸ್ಥಾನವನ್ನು ವಿಶ್ವಶ್ರೇಷ್ಠ ಆಲ್ ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಕೊಡುತ್ತೇನೆ. ಅವರು ಗೇಮ್ ಅನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಟಿ20 ನಲ್ಲಿ ವಿಶ್ವಶ್ರೇಷ್ಠ ಆಲ್ ರೌಂಡರ್ ಇವರೇ. ಒನ್ ಡೇ ಕ್ರಿಕೆಟ್ ನಲ್ಲೂ ಮೇಲುಗೈ ಸಾಧಿಸುತ್ತಾರೆ..” ಎಂದಿದ್ದಾರೆ ರಿಕ್ಕಿ. ನಾಲ್ಕನೇ ಸ್ಥಾನಕ್ಕೆ ಜೋಸ್ ಬಟ್ಲರ್ ಅವರನ್ನು ಆಯ್ಕೆಮಾಡಿದ್ದಾರೆ, “ಇವರು ಖಂಡಿತವಾಗಿ ಮ್ಯಾಚ್ ವಿನ್ನರ್. ಕಳೆದ ಐಪಿಎಲ್ ಸೀಸನ್ ನಲ್ಲಿ ಇವರ ಆಟದ ಪ್ರದರ್ಶನ ಹೇಗಿತ್ತು ಎಂದು ನೋಡಿದ್ದೇವೆ, ಒಂದೇ ಸೀಸನ್ ನಲ್ಲಿ 3, 4 ಶತಕ ಸಿಡಿಸುವುದು ಸುಲಭ ಅಲ್ಲ..” ಎಂದು ಹೇಳಿ ನಾಲ್ಕನೇ ಆಟಗಾರನ ಆಯ್ಕೆ ಮಾಡಿದ್ದಾರೆ.

ರಿಕ್ಕಿ ಪಾಂಟಿಂಗ್ ಆಯ್ಕೆ ಮಾಡಿರುವ ಐದನೇ ಪ್ಲೇಯರ್ ಭಾರತ ತಂಡದ ಜಸ್ಪ್ರೀತ್ ಬುಮ್ರ ಅವರು, “ಟೆಸ್ಟ್ ಕ್ರಿಕೆಟ್, ಏಕದಿನ ಕ್ರಿಕೆಟ್ ಹಾಗೂ ಒನ್ ಡೇ ಕ್ರಿಕೆಟ್ ಈ ಎಲ್ಲದರಲ್ಲಿ ವಿಶ್ವದ ಅತ್ಯಂತ ಪರಿಪೂರ್ಣವಾರ ಬೌಲರ್ ಜಸ್ಪ್ರೀತ್ ಬುಮ್ರ. ಹೊಸ ಚೆಂಡು ಮತ್ತು ಹಳೆ ಚೆಂಡು ಎರಡರಲ್ಲಿ ಅಪಾಯಕಾರಿ ದಾಳಿ ಮಾಡುತ್ತಾರೆ, ಹಾಗೆಯೇ ಪರಿಣಾಮಕಾರಿ ಬೌಲಿಂಗ್ ಮಾಡುತ್ತಾರೆ..” ಎಂದಿದ್ದಾರೆ. ಹೀಗೆ ರಿಕ್ಕಿ ಪಾಂಟಿಂಗ್ ಅವರು ತಾವು ಮೆಚ್ಚಿದ ಐವರು ಆಟಗಾರರ ತಂಡ ರಚಿಸಿದ್ದಾರೆ.

Get real time updates directly on you device, subscribe now.