ಇನ್ನೇನು ಪಂದ್ಯ ಗೆಲ್ಲಿಸಿಕೊಟ್ಟಿದ್ದ ಅರ್ಶದೀಪ್ ರವರಿಗೆ ರೋಹಿತ್ ಮಾಡಿದ್ದೇನು ಗೊತ್ತೇ, ನೀವೇ ವಿಡಿಯೋ ನೋಡಿ?? ಸೋಲಿಗೆ ಕಾರಣವೇನು ಗೊತ್ತೇ??

ಇನ್ನೇನು ಪಂದ್ಯ ಗೆಲ್ಲಿಸಿಕೊಟ್ಟಿದ್ದ ಅರ್ಶದೀಪ್ ರವರಿಗೆ ರೋಹಿತ್ ಮಾಡಿದ್ದೇನು ಗೊತ್ತೇ, ನೀವೇ ವಿಡಿಯೋ ನೋಡಿ?? ಸೋಲಿಗೆ ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ನೆನ್ನೆಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತು ಏಷ್ಯಾ ಕಪ್ ಟೂರ್ನಿಯಿಂದ ಬಹುತೇಕ ಹೊರ ಬಿದ್ದಿದೆ. ಇನ್ನು ಯಾವುದೇ ಮ್ಯಾಜಿಕ್ ನಡೆಯದ ಹೊರೆತು ಭಾರತ ಕ್ರಿಕೆಟ್ ತಂಡ ಫೈನಲ್ ಗೆ ಹೋಗುವುದು ಅಸಾಧ್ಯವಾದ ಮಾತು. ಒಂದು ವೇಳೆ ಭಾರತ ಕ್ರಿಕೆಟ್ ತಂಡ ಫೈನಲ್ ಗೆ ಹೋಗಬೇಕು ಎಂದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾ ಸೋಲಬೇಕು.

ಹಾಗೂ ಭಾರತ ತಂಡ ಉಳಿದಿರುವ ಒಂದು ಪಂದ್ಯವನ್ನು ಬಾರಿ ಅಂತರದಿಂದ ಗೆಲುವು ಸಾಧಿಸಿ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು ಹಾಗೂ ಆಫ್ಘಾನಿಸ್ತಾನ ಅಥವಾ ಪಾಕಿಸ್ತಾನ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಇನ್ನು ಅಸಾಧ್ಯವಾದ ಲೆಕ್ಕಾಚಾರವೇ ಸರಿ. ಇನ್ನು ಹೀಗೆ ಬಹು ನಿರೀಕ್ಷಿತ ಟೂರ್ನಿಯಲ್ಲಿ ಬಹುತೇಕ ಹೊರಬಿದ್ದಿರುವ ಭಾರತ ಬಲಿಷ್ಠ ತಂಡವನ್ನು ಕಟ್ಟಿಕೊಂಡಿದ್ದ ಕಾರಣ ಸುಲಭವಾಗಿ ಏಷ್ಯಾ ಕಪ್ ಅನ್ನು ಗೆಲ್ಲುತ್ತದೆ ಎಂದು ಭಾವಿಸಲಾಗಿತ್ತು.

ಆದರೆ ಯಾವೊಬ್ಬ ಆಟಗಾರರು ಕೂಡ ತಾನು ಪಂದ್ಯ ಗೆಲ್ಲಿಸಬಲ್ಲೆ ಎಂಬುದನ್ನು ಒಮ್ಮೆಯೂ ಕೂಡ ತೋರಿಸಿದಂತೆ ನೆನ್ನೆಯ ಪಂದ್ಯದಲ್ಲಿ ಕಾಣಲೇ ಇಲ್ಲ. ಐಪಿಎಲ್ ಟೂರ್ನಿಗಳಲ್ಲಿ ಒಬ್ಬರೇ ನಿಂತು ಪಂದ್ಯಗಳನ್ನು ಗೆಲ್ಲಿಸಿ ಕೊಡುತ್ತಿದ್ದ ತಮ್ಮನ್ನು ತಾವು ಶ್ರೇಷ್ಠ ಎಂದುಕೊಳ್ಳುವ ಕ್ರಿಕೆಟ್ ಆಟಗಾರರು ಅಂತರಾಷ್ಟ್ರೀಯ ಮಟ್ಟಕ್ಕೆ ಹೋದ ತಕ್ಷಣ ಬಾಲಮುದ್ರಿಕೊಂಡು ಸುಮ್ಮನಾಗಿಬಿಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದೀಪಕ್ ಹೋದ ಹೀಗೆ ವಿವಿಧ ಆಟಗಾರರು ತಮ್ಮನ್ನು ತಾವು ಶ್ರೇಷ್ಠ ಎಂದುಕೊಂಡಂತೆ ಈಗಾಗಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಯಾಕೆಂದರೆ ಯಾವ ಯಾವೊಬ್ಬ ಆಟಗಾರರು ಕೂಡ ತಂಡ ಸಂಕಷ್ಟದಲ್ಲಿದೆ ಎಂದು ಗಟ್ಟಿಯಾಗಿ ಮೈದಾನದಲ್ಲಿ ನಿಂತು ಬ್ಯಾಟಿಂಗ್ ಮಾಡಲಿಲ್ಲ ಬದಲಾಗಿ ತಮಗೆ ಮನಬಂದಂತೆ ಬ್ಯಾಟಿಂಗ್ ಮಾಡಿ ಅನಗತ್ಯ ಹೊಡೆತಗಳಿಗೆ ಕೈಹಾಕಿ ಔಟಾದರು.

ಇನ್ನು ಬೌಲರ್ ಗಳು ಮೊದಮೊದಲು ಉತ್ತಮ ಪ್ರದರ್ಶನ ನೀಡದೆ ಹೋದರು ಕೂಡ ಪಂದ್ಯದ ಗತಿಯನ್ನು ಚಾಹಲ್ ರವರು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ಕಾರಣಕ್ಕಾಗಿ ನಿನ್ನೆಯ ಪಂದ್ಯ ಕೊನೆಯ ಓವರ್ ವರೆಗೂ ತಲುಪಿದ್ದು, ಇಂತಹ ಸಮಯದಲ್ಲಿ ಅರ್ಶದೀಪ್ ರವರು ಕೊನೆಯ ಓವರ್ ನಲ್ಲಿ ನಿಜಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಇನ್ನೇನು ಗೆಲ್ಲಿಸಿ ಕೊಡುವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ಕನಿಷ್ಠ ಗೆಲ್ಲಿಸಿಕೊಡದೆ ಹೋದರು ಕೂಡ ಸೂಪರ್ ಓವರ್ ಹಂತಕ್ಕೆ ತೆಗೆದುಕೊಂಡು ಹೋಗುವ ಎಲ್ಲಾ ಸಾಧ್ಯತೆಗಳು ಇತ್ತು.

ಆದರೆ ಕೊನೆಗೆ ಓವರ್ನಲ್ಲಿ ತನಗೆ ಫೀಲ್ಡ್ ಬದಲಾವಣೆ ಮಾಡಬೇಕು ಎಂದಾಗ ಕ್ಯಾಪ್ಟನ್ ಬಳಿ ಹೋಗಿ ಅರ್ಶದೀಪ್ ಸಿಂಗ್ ರವರು ಮನವಿ ಮಾಡಿದ್ದರು. ಆದರೆ ಅದ್ಯಾಕೋ ತಿಳಿದಿಲ್ಲ ರೋಹಿತ್ ಶರ್ಮಾ ರವರು ಅರ್ಶದೀಪ್ ರವರ ಮನವಿಗೆ ಕ್ಯಾರೇನಲಿಲ್ಲ ಬದಲಾಗಿ ಅವರ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ಕೂಡ ಅವರಲ್ಲಿ ಉಳಿದಿರಲಿಲ್ಲ. ಮೊನ್ನೆ ರಿಷಬ್ ಪಂತ್ ಅವರ ವಿರುದ್ಧ ತಾಳ್ಮೆ ಕಳೆದುಕೊಂಡಿದ್ದ ರೋಹಿತ್ ಶರ್ಮ ರವರು ನಿನ್ನೆ ಅರ್ಶದೀಪ್ ರವರ ವಿರುದ್ಧ ತಾಳ್ಮೆ ಕಳೆದು ಕೊಂಡಿದ್ದರು. ಒಬ್ಬ ಬೌಲರ್ ಗೆ ತಾನು ಯಾವ ರೀತಿ ಬೋಲಿಂಗ್ ಮಾಡಿದರೆ ಹಾಗೂ ಯಾವ ರೀತಿ ಫೀಲಿಂಗ್ ನಿಲ್ಲಿಸಿದರೆ ರನ್ ಗಳಿಗೆ ಕಡಿವಾಣ ಹಾಕಬಹುದು ಎಂದು ಎಲ್ಲಾ ತಿಳಿದಿರುತ್ತದೆ. ಆದರೆ ಅವರ ಮಾತನ್ನು ಕೇಳುವ ಗೋಜಿಗೂ ಕೂಡ ರೋಹಿತ್ ಶರ್ಮ ರವರು ಹೋಗದೆ ಇದ್ದದ್ದು ನಿಜಕ್ಕೂ ವಿಷಾದನೀಯ ಸಂಗತಿ.