ಐಪಿಎಲ್ ನಲ್ಲಿ ಭಾರಿ ಮಿಂಚಿದ್ದ ಮೂವರು ಏಷ್ಯಾ ಕಪ್ ನಲ್ಲಿ ಅಟ್ಟರ್ ಪ್ಲಾಪ್: ಕ್ರಿಕೆಟ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡದ್ದು ಯಾರ್ಯಾರಿಗೆ ಗೊತ್ತೇ??
ಐಪಿಎಲ್ ನಲ್ಲಿ ಭಾರಿ ಮಿಂಚಿದ್ದ ಮೂವರು ಏಷ್ಯಾ ಕಪ್ ನಲ್ಲಿ ಅಟ್ಟರ್ ಪ್ಲಾಪ್: ಕ್ರಿಕೆಟ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡದ್ದು ಯಾರ್ಯಾರಿಗೆ ಗೊತ್ತೇ??
ಮೊದಲೆಲ್ಲಾ ನ್ಯಾಷನಲ್ ಕ್ರಿಕೆಟ್ ಟೀಮ್ ಗೆ ಸೆಲೆಕ್ಟ್ ಆಗಬೇಕಾದರೆ ರಣಜಿ ಟ್ರೋಫಿ, ಸೈಯದ್ ಮುಸ್ಥಾಕ್ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಿತ್ತು. ಅದರಲ್ಲಿ ಒಳ್ಳೆಯ ಪ್ರದರ್ಶನ ನೀಡಿದವರನ್ನು ಟೀಮ್ ಇಂಡಿಯಾಗೆ ಸೆಲೆಕ್ಟ್ ಮಾಡಲಾಗುತ್ತಿತ್ತು, ಆದರೆ ಐಪಿಎಲ್ ಶುರುವಾದ ಬಳಿಕ, ದೇಶಿ ಟೂರ್ನಮೆಂಟ್ ಗಳಿಗೆ ಮಹತ್ವ ಕಡಿಮೆ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಈಗೆಲ್ಲಾ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಟೀಮ್ ಇಂಡಿಯಾಗೆ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ಈ ವರ್ಷ ಐಪಿಎಲ್ ನಲ್ಲಿ ಉತ್ತಮವಾದ ಪ್ರದರ್ಶನ ನೀಡಿದ ಕಾರಣಕ್ಕೆ ಕೆಲವು ಆಟಗಾರರನ್ನು ಭಾರತ ತಂಡಕ್ಕೆ ಸೆಲೆಕ್ಟ್ ಮಾಡಿಕೊಳ್ಳಲಾಯಿತು. ಆದರೆ ಅವರೆಲ್ಲರೂ, ಏಷ್ಯಾಕಪ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆ ಮೂವರು ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..
ಯುಜವೇಂದ್ರ ಚಾಹಲ್ :- ಈ ವರ್ಷ ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಆಡಿದ ಯುಜವೇಂದ್ರ ಚಾಹಲ್, 27 ವಿಕೆಟ್ಸ್ ಪಡೆದು ಪರ್ಪಲ್ ಕ್ಯಾಪ್ ವಿನ್ನರ್ ಆದರು. ಕಳೆದ ವರ್ಷ 18 ವಿಕೆಟ್ಸ್ ಪಡೆದಿದ್ದರು, 2020ರಲ್ಲಿ 21 ವಿಕೆಟ್ಸ್ ಪಡೆದು, ಪಂದ್ಯಕ್ಕೆ ಚೇಂಜ್ ಓವರ್ ತರುವ ಬೌಲರ್ ಆಗಿ ಗುರುತಿಸಿಕೊಂಡಿದ್ದ ಚಾಹಲ್ ಅವರನ್ನು ಈ ವರ್ಷ ಏಷ್ಯಾಕಪ್ ಪಂದ್ಯಗಳಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ಆದರೆ ಏಷ್ಯಾಕಪ್ ಪಂದ್ಯಗಳಲ್ಲಿ ಚಾಹಲ್ ಅವರು ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ.
ಆವೇಶ್ ಖಾನ್ :- ಇವರು ಬೌಲಿಂಗ್ ಮಾಡುವ ವಿಧಾನದಲ್ಲಿ ಏನು ಬದಲಾವಣೆ ಇಲ್ಲದೆ ಹೋದರು ಸಹ, ಆವೇಶ್ ಖಾನ್ ಅವರು ಐಪಿಎಲ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ ಎಂದು ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಿಕೊಳ್ಳಲಾಯಿತು. ಆವೇಶ್ ಖಮ್ ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದು 2021ರಲ್ಲಿ, ಆ ವರ್ಷ ಅವರು 21 ವಿಕೆಟ್ಸ್ ಪಡೆದರು, 2022ರಲ್ಲಿ 18 ವಿಕೆಟ್ಸ್ ಪಡೆದರು. ಹಾಗಾಗಿ ಇವರನ್ನು ಏಷ್ಯಾಕಪ್ ಪಂದ್ಯಗಳಿಗೆ ಆಯ್ಕೆ ಮಾಡಲಾಯಿತು, ಆದರೆ ಏಷ್ಯಾಕಪ್ ಪಂದ್ಯಗಳಲ್ಲಿ ದುಬಾರಿಯಾಗಿದ್ದಾರೆ, ಬೌಲಿಂಗ್ ಮಾಡಿದ 6 ಓವರ್ ಗಳಲ್ಲಿ 72 ರನ್ ಬಿಟ್ಟುಕೊಟ್ಟಿದ್ದಾರೆ..
ಕೆ.ಎಲ್.ರಾಹುಲ್ :- ಐಪಿಎಲ್ ನಲ್ಲಿ ರಾಹುಲ್ ಅದ್ಭುತವಾದ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದಾರೆ. 2018ರ ನಂತರ ಐಪಿಎಲ್ ನ ಪ್ರತಿ ಸೀಸನ್ ನಲ್ಲೂ 500ಕ್ಕಿಂತ ಹೆಚ್ಚು ರನ್ಸ್ ಗಳಿಸಿದ್ದಾರೆ. ಈ ವರ್ಷ 616 ರನ್ ಗಳಿಸಿದರು. ಆದರೆ ಏಷ್ಯಾಕಪ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಈವರೆಗೂ ನಡೆದಿರುವ 3 ಏಷ್ಯಾಕಪ್ ಪಂದ್ಯಗಳಲ್ಲಿ 0, 36, 28 ರನ್ ಗಳನ್ನು ಕ್ರಮವಾಗಿ ಸ್ಕೋರ್ ಮಾಡಿದ್ದಾರೆ.