ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊಹ್ಲಿ ಫಾರ್ಮ್ ಗೆ ಮರಳಿದರೂ ಕೆಲವರಿಗೆ ನಿದ್ದೆ ಬರುತ್ತಿಲ್ಲ, ಕೊಹ್ಲಿ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ವಾಸ್ಸಿಮ್: ಹೇಳಿದ್ದೇನು ಗೊತ್ತೇ??

146

Get real time updates directly on you device, subscribe now.

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಕಳೆದ ಮೂರು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದರು, ಆದರೆ ಈಗ ವಿರಾಟ್ ಕೋಹ್ಲಿ ಅವರು ಏಷ್ಯಾಕಪ್ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡುವ ಮೂಲಕ ಎಲ್ಲರಿಗೂ ಖಡಕ್ ಉತ್ತರ ನೀಡಿದ್ದಾರೆ. ಏಷ್ಯಾಕಪ್ ಪಂದ್ಯಗಳಿಗಿಂತ ಮೊದಲು ವಿರಾಟ್ ಕೋಹ್ಲಿ ಅವರ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಲೇ ಬಂದಿದ್ದಾರೆ. ಶತಕ ಸಿಡಿಸಿ ಮೂರು ವರ್ಷ ಆಗಿದೆ, ಆಗಿನಿಂದಲೂ ಕೋಹ್ಲಿ ಅವರು ಒಳ್ಳೆಯ ಇನ್ನಿಂಗ್ಸ್ ನೀಡಿಲ್ಲ ಎನ್ನುವುದು ಹಲವರ ಅಭಿಪ್ರಾಯ.

ಆದರೆ ಏಷ್ಯಾಕಪ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಸಾರಿ ವಿರಾಟ್ ಕೋಹ್ಲಿ ಅವರು ಅರ್ಧ ಶತಕ ಭಾರಿಸಿದ್ದಾರೆ, ಇದು ಅವರ 32ನೇ ಅರ್ಧಶತಕ ಆಗಿದೆ. ಈ ಮೂಲಕ ವಿರಾಟ್ ಅವರು, ರೋಹಿತ್ ಶರ್ಮಾ ಅವರನ್ನು ಸಹ ಹಿಂದಕ್ಕೆ ಹಾಕಿದ್ದಾರೆ. ವಿಶ್ವದಲ್ಲಿ ಅತಿಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿದ್ದಾರೆ ವಿರಾಟ್ ಕೋಹ್ಲಿ. ಈವರೆಗೂ ವಿರಾಟ್ ಕೋಹ್ಲಿ ಅವರು 70 ಶತಕಗಳನ್ನು ಸಿಡಿಸಿದ್ದು, 71ನೇ ಶತಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಕೋಹ್ಲಿ ಅವರು ಈಗ ಉತ್ತಮವಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು ಸಹ, ಭಾರತದ ಮಾಜಿ ಬ್ಯಾಟ್ಸಮನ್ ವಾಸಿಂ ಜಾಫರ್ ಅವರು ವಿರಾಟ್ ಕೋಹ್ಲಿ ಅವರನ್ನು ಟೀಕೆ ಮಾಡಿ, ವಿರಾಟ್ ಅವರಿಗೆ ಖಡಕ್ ಸಂದೇಶ ನೀಡಿದ್ದಾರೆ..

ವಿರಾಟ್ ಅವರ ಬಗ್ಗೆ ಮಾತನಾಡಿರುವ ವಾಸಿಂ ಜಾಫರ್, ವಿರಾಟ್ ಕೋಹ್ಲಿ ಉತ್ತಮ ಪ್ರದರ್ಶನ ನೀಡಿದ್ದರು ಸಹ, ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ, ಇಲ್ಲವಾದರೆ ವಿರಾಟ್ ಕೋಹ್ಲಿ ಅವರ ಸ್ಥಾನಕ್ಕೆ ಕುತ್ತು ಬರುತ್ತದೆ. ಕೋಹ್ಲಿ ಅವರು ರನ್ ಗಳಿಸುತ್ತಿದ್ದಾರೆ ಆದರೆ ನಿಧಾನವಾಗಿ ರನ್ ಗಳಿಸುತ್ತಿದ್ದಾರೆ ಎಂದಿದ್ದಾರೆ ವಾಸಿಂ ಜಾಫರ್. ಸೂರ್ಯಕುಮಾರ್ ಯಾದವ್ ಅವರಷ್ಟು ವೇಗವಾಗಿ ವಿರಾಟ್ ಕೋಹ್ಲಿ ಅವರ ಬ್ಯಾಟ್ ಇಂದ ರನ್ ಗಳು ಬರುತ್ತಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು. ಈಗ ಲಯ ಕಂಡುಕೊಳ್ಳುತ್ತಿದ್ದರು ಸಹ, ಕೋಹ್ಲಿ ಅವರ ಮೇಲೆ ಟೀಕೆಯ ಪ್ರಯೋಗಗಳೇ ಹೆಚ್ಚಾಗುತ್ತಿದೆ.

Get real time updates directly on you device, subscribe now.