ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶುರುವಾಯಿತು ಸೂರ್ಯ ದೇವನ ಕೃಪೆ: ಮುಂದಿನ ಎರಡು ವಾರ ನಿಮಗಿದೆ ರಾಜಯೋಗ. ಯಾವ್ಯಾವ ರಾಶಿಗಳಿಗೆ ಗೊತ್ತೇ?? ಅದೃಷ್ಟದಿಂದ ಹಣ ಹುಡುಕಿಕೊಂಡು ಬರುತ್ತದೆ.

1,615

Get real time updates directly on you device, subscribe now.

ಪ್ರಸ್ತುತ ಸೂರ್ಯನು ತನ್ನದೇ ಆದ ಸಿಂಹರಾಶಿಯಲ್ಲಿದ್ದಾನೆ, ಈ ಸಮಯದಲ್ಲಿ ಸೂರ್ಯನ ಕೃಪೆ ಯಾರ ರಾಶಿಯಲ್ಲಿ ಇರುತ್ತದೋ, ಆ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ಸೂರ್ಯನ ಹಾಗೆ ಬೆಳಗುತ್ತಾರೆ, ಅವರಿಗೆ ಯಾವ ಕೊರತೆ ಸಹ ಆಗುವುದಿಲ್ಲ. ಐಶ್ವರ್ಯ, ಸಂತೋಷ, ಸಮೃದ್ಧಿ, ಎಲ್ಲವೂ ಸೂರ್ಯನ ಕೃಪೆಯಿಂದ ಪ್ರಾಪ್ತಿಯಾಗುತ್ತದೆ. ಇವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಂದಿನ 13 ದಿನಗಳು ಈ ಕೆಳಗಿನ ರಾಶಿಗಳ ಮೇಲೆ ಸೂರ್ಯನ ಕೃಪೆ ಹೇರಳವಾಗಿ ಇರಲಿದೆ. ಈ ರಾಶಿಗಳಿಗೆ ಎಲ್ಲವೂ ಒಳ್ಳೆಯದಾಗಲಿದೆ.

ಮಿಥುನ ರಾಶಿ :- ಮುಂಬರುವ 13 ದಿನಗಳು ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ, ವೃತ್ತಿಜೀವನ ಚೆನ್ನಾಗಿರುತ್ತದೆ. ವ್ಯಾಪಾರ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಹಣದ ವಿಚಾರದಲ್ಲಿ ಸಮಸ್ಯೆ ಇರುವವರಿಗೆ ಸ್ನೇಹಿತರ ಸಹಾಯ ಸಿಗುತ್ತದೆ. ನಿಮ್ಮ ಮಾತುಗಳ ಮೂಲಕ ಜನರನ್ನು ಮೆಚ್ಚಿಸುತ್ತೀರಿ, ನಿಮಗೆ ಲಾಭ ಆಗುವ ಸಂಭವ ಹೆಚ್ಚಾಗಿದೆ.

ಸಿಂಹ ರಾಶಿ :- ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಹೆಚ್ಚಾಗುತ್ತದೆ. ಅಧ್ಯಯನ ಹಾಗೂ ಬರೆಯುವುದರ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳಿಂದ ಒಳ್ಳೆಯ ವಿಚಾರಗಳನ್ನು ಕೇಳುತ್ತೀರಿ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಡಹುಟ್ಟಿದವರ ಸಹಾಯ ಸಿಗುತ್ತದೆ. ನಿಮ್ಮ ಮಾತಿಗೆ ಜನರು ಮರುಳಾಗುತ್ತಾರೆ.

ವೃಶ್ಚಿಕ ರಾಶಿ :- ಈ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಪೋಷಕರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಸ್ನೇಹಿತರು ಉತ್ತಮವಾಗಿ ಸಪೋರ್ಟ್ ಮಾಡುತ್ತಾರೆ, ಒಳ್ಳೆಯ ಸುದ್ದಿ ನಿಮ್ಮನ್ನು ತಲುಪಿ, ಸಂತೋಷ ತರುತ್ತದೆ. ಕೆಲಸ ಬದಲಾಯಿಸುವ ಯೋಚನೆಯಲ್ಲಿ ಇರುವವರಿಗೆ ಹೊಸ ಕೆಲಸ ಸಿಗಬಹುದು.

ಧನು ರಾಶಿ :- ಮಾನಸಿಕ ಒತ್ತಡದಿಂದ ನಿಮಗೇ ಮುಕ್ತಿ ಸಿಗುತ್ತದೆ. ಜೀವನದಲ್ಲಿ ಸಂತೋಷ ಸಿಗುತ್ತದೆ, ಗಂಡ ಹೆಂಡತಿಯರ ಸಂಬಂಧ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಆಗಿರುತ್ತದೆ, ಓದಿನ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಡಹುಟ್ಟಿದವರ ಸಹಕಾರ ಸಿಗುತ್ತದೆ.

Get real time updates directly on you device, subscribe now.