ಫುಲ್ ಧಿಮಾಕು ತೋರಿಸಿ ಮೆರೆದಿದ್ದ ವಿಜಯ್ ದೇವರಕೊಂಡಾಗೆ ಮತ್ತೊಂದು ಶಾಕ್: ಖಡಕ್ ನಿರ್ಧಾರ ತೆಗೆದುಕೊಂಡ ನಿರ್ದೇಶಕ ಪೂರಿ. ಏನು ಗೊತ್ತೇ??

ಫುಲ್ ಧಿಮಾಕು ತೋರಿಸಿ ಮೆರೆದಿದ್ದ ವಿಜಯ್ ದೇವರಕೊಂಡಾಗೆ ಮತ್ತೊಂದು ಶಾಕ್: ಖಡಕ್ ನಿರ್ಧಾರ ತೆಗೆದುಕೊಂಡ ನಿರ್ದೇಶಕ ಪೂರಿ. ಏನು ಗೊತ್ತೇ??

ವಿಜಯ್ ದೇವರಕೊಂಡ ನಾಯಕನಾಗಿ ಪೂರಿ ಜಗನ್ನಾಧ್ ಅವರು ನಿರ್ದೇಶನ ಮಾಡಿದ ಬಹುನಿರೀಕ್ಷಿತ ಸಿನಿಮಾ ಲೈಗರ್ ಆಗಸ್ಟ್ 25ರಂದು ಬಿಡುಗಡೆ ಆಯಿತು. ಚಿತ್ರತಂಡ ಹಾಗೂ ವಿಜಯ್ ದೇವರಕೊಂಡ ಈ ಸಿನಿಮಾ ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ದಿಸಾಸ್ಟರ್ ಟಾಕ್ ಪಡೆದುಕೊಂಡು, ಸೋಲನ್ನು ಕಂಡಿದೆ. ಸಿನಿಮಾ ನಿರ್ಮಾಪಕರಿಗೆ ಸುಮಾರು 50 ಕೋಟಿ ಲಾಸ್ ಆಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇದೀಗ ಸಿನಿಮಾ ನಾಯಕ ವಿಜಯ್ ದೇವರಕೊಂಡ ಅವರಿಗೆ ನಿರ್ದೇಶಕ ಪೂರಿ ಜಗನ್ನಾಧ್ ಅವರ ಕಡೆಯಿಂದ ಮತ್ತೊಂದು ಶಾಕ್ ಸಿಕ್ಕಿದೆ.

ಲೈಗರ್ ಸಿನಿಮಾ ಇನ್ನು ಬಿಡುಗಡೆ ಆಗುವ ಮೊದಲೇ ಪೂರಿ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಜನ ಗಣ ಮನ ಸಿನಿಮಾ ಸೆಟ್ಟೇರಿ, ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಸಹ ಮುಗಿಸಿದೆ, ಆದರೆ ಲೈಗರ್ ಸೋಲಿನ ಬಳಿಕ ಪೂರಿ ಜಗನ್ನಾಧ್ ಅವರು ಜನ ಗಣ ಮನ ಸಿನಿಮಾವನ್ಮು ಮುಂದಕ್ಕೆ ಹಾಕಿದ್ದಾರೆ ಎನ್ನುವ ಈಗ ಸಿಕ್ಕಿದೆ. ಜನ ಗಣ ಮನ ಸಿನಿಮಾವನ್ನು ಮೈ ಹೋಮ್ ಗ್ರೂಪ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಲೈಗರ್ ಸಿನಿಮಾದ ಎಫೆಕ್ಟ್ ಇಂದಾಗಿ ಸಮಸ್ಯೆ ಆಗಿರುವ ಆಗಿರುವ ಕಾರಣ ಜನ ಗಣ ಮನ ಸಧ್ಯಕ್ಕೆ ಟೇಕ್ ಆಫ್ ಆಗುವುದಿಲ್ಲ ಎನ್ನಲಾಗಿದೆ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಆಗಿದ್ದು, ಅದಕ್ಕೆ ಸುಮಾರು 20 ಕೋಟಿ ರೂಪಾಯಿ ಖರ್ಚಾಗಿದೆ.

ಲೈಗರ್ ಬಳಿಕ ವಿಜಯ್ ದೇವರಕೊಂಡ ಅವರು ಸಮಂತಾ ಅವರೊಡನೆ ನಟಿಸುತ್ತಿರುವ ಖುಷಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ, ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇತ್ತ ಜನ ಗಣ ಮನ ಸಿನಿಮಾ ನಿಂತಿರುವುದಕ್ಕೆ ವಿಜಯ್ ದೇವರಕೊಂಡ ಅವರು ತೋರಿದ ಅಹಂಕಾರ ದರ್ಪವೆ ಕಾರಣ ಎಂದು ಒಂದು ವರ್ಗ ಮಾತನಾಡಿಕೊಳ್ಳುತ್ತಿದೆ. ಲೈಗರ್ ಸಿನಿಮಾ ಸೋಲಿಗೂ ಸಹ, ಪ್ರೊಮೋಷನ್ ಟೈಮ್ ನಲ್ಲಿ ವಿಜಯ್ ದೇವರಕೊಂಡ ನೀಡಿದ ಕೆಲವು ಹೇಳಿಕೆಗಳೇ ಮುಖ್ಯ ಕಾರಣ ಎಂದು ಕೆಲವರು ಹೇಳುತ್ತಿದ್ದು, ಸಿನಿಮಾ ಕಥೆಯಲ್ಲಿ ಗಟ್ಸ್ ಇಲ್ಲದ ಕಾರಣ ಸೋತಿದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.