ಭಾರತದ ವಿರುದ್ಧ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನವೇ ಪಾಕ್ ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಔಟ್
ಭಾರತದ ವಿರುದ್ಧ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನವೇ ಪಾಕ್ ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಔಟ್
ನಮಸ್ಕಾರ ಸ್ನೇಹಿತರೇ ಈ ಬಾರಿ ಕೆಲವೇ ದಿನಗಳ ಬಳಿಕ ಮತ್ತೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರಾಗುತ್ತಿವೆ. ಈಗಾಗಲೇ ಮೊದಲನೇ ಪಂದ್ಯದಲ್ಲಿ ಗೆದ್ದು ಬೀಗಿರುವ ಭಾರತ ಮತ್ತೆ ಎರಡನೇ ಪಂದ್ಯದಲ್ಲಿ ಕೂಡ ಪಾಕಿಸ್ತಾನಕ್ಕೆ ದೇಶಕ್ಕೆ ಮಣ್ಣು ಮುಕ್ಕಿಸಿ, ಜಯದ ಪತಾಕೆ ಹಾರಿಸಲು ಸಿದ್ದವಾಗಿ ನಿಂತಿದೆ. ಇನ್ನು ಈಗಾಗಲೇ ಮೊದಲ ಪಂದ್ಯದಲ್ಲಿ ಸೋತು ಮುಜುಗರಕ್ಕೆ ಒಳಗಾಗಿರುವ ಪಾಕಿಸ್ತಾನದ ತಂಡ ಎರಡನೇ ಪಂದ್ಯದಲ್ಲಿ ಗೆಲ್ಲುವ ಆಸೆಯೊಂದಿಗೆ ಕಣಕ್ಕೆ ಇಳಿಯಲು ಸಿದ್ದವಾಗಿತ್ತು. ಆದರೆ ಈ ಸಮಯದಲ್ಲಿ ಪಾಕಿಸ್ತಾನ ತಂಡಕ್ಕೆ ಶಾಕ್ ಒಂದು ಎದುರಾಗಿದೆ.
ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸೂಪರ್ 4 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ನಲ್ಲಿ ಎರಡನೇ ಬಾರಿಗೆ ಇಡೀ ಭಾನುವಾರ ಸಂಜೆ 7:30 ಕ್ಕೆ ದುಬೈ ನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪರಸ್ಪರ ಕಾದಾಡಲಿವೆ. ಈ ಪಂದ್ಯವನ್ನು ನೀವು ಉಚಿತವಾಗಿ ನೋಡಬೇಕು ಎಂದರೆ ಈ ಲೇಖನ ಓದಿ ನೀವು ಒಂದು ವೇಳೆ ಉಚಿತವಾಗಿ ಏಷ್ಯಾಕಪ್ ವೀಕ್ಷಿಸಬೇಕು ಎಂದರೆ ಇರುವ ಸುಲಭ ದಾರಿ ಯಾವುದು ಗೊತ್ತೇ??. ಈ ಪಂದ್ಯಕ್ಕೆ ಎರಡು ತಂಡಗಳು ತಮ್ಮದೇ ಆದ ಭರ್ಜರಿ ಸಿದ್ಧತೆ ಮಾಡಿಕೊಂಡು ತಯಾರಾಗುತ್ತಿವೆ. ಇಂತಹ ಸಮಯದಲ್ಲಿ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಇಂಜುರಿಗೆ ಒಳಗಾಗಿದ್ದ ಖ್ಯಾತ ಬೌಲರ್ ಇದೀಗ ಭಾರತದ ವಿರುದ್ಧ ಪಂದ್ಯದಿಂದ ಹೊರಹೋಗುವುದು ಖಚಿತವಾಗಿದೆ.
ಮೂಲಗಳ ಪ್ರಕಾರ, 24 ವರ್ಷದ ವೇಗದ ಬೌಲರ್ ಶಹನವಾಜ್ ದಹಾನಿ ರವರು ಇದೀಗ ಭಾರತ ಪಂದ್ಯದಿಂದ ವೈದ್ಯರ ಸಲಹೆಯಂತೆ ಹೊರಹೋಗುತ್ತಿದ್ದಾರೆ. ಇವರು ತಂಡಕ್ಕೆ ಹೊಸಬರಾದರೂ ಕೂಡ, ಒಬ್ಬ ಉತ್ತಮ ಬೌಲರ್ ಆಗಿದ್ದರು. 140 KM ಗಿಂತ ಹೆಚ್ಚಿನ ವೇಗವಾಗಿ ಬೌಲ್ ಮಾಡುವ ಇವರು, ಕಳೆದ ಭಾರತ ವಿರುದ್ದದ ಪಂದ್ಯದಲ್ಲಿ 6 ಬಾಲ್ ಗಳಿಗೆ 16 ರನ್ ಗಳಿಸಿ ಕೊನೆಯಲ್ಲಿ ಪಾಕಿಸ್ತಾನ ತಂಡಕ್ಕೆ ನೆರವಾಗಿದ್ದರು. ಹಾಗೂ ಬೌಲಿಂಗ್ ನಲ್ಲಿ ಯಾವುದೇ ವಿಕೆಟ್ ಪಡೆಯದೇ ಹೋದರೂ ಕೂಡ 4 ಓವರ್ ಗಳಲ್ಲಿ ಕೇವಲ 29 ರನ್ ನೀಡಿ, ರನ್ ಗಳಿಗೆ ಕಡಿವಾಣ ಹಾಕುವುದರಲ್ಲಿ ಯಶಸ್ವಿಯಾಗಿದ್ದರು. ಇವರು ಮುಂದಿನ ಭಾರತದ ವಿರುದ್ದದ ಪಂದ್ಯದಿಂದ ಹೊರಗುಳಿಯಲಿದ್ದಾರೆ.