ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜಡೇಜಾ ಬದಲು ಅಕ್ಷರ್ ಆಯ್ಕೆಯಾದರೂ, ಅಕ್ಷರ್ ಪಟೇಲ್ ಗೆ ಇಲ್ಲ ತಂಡದಲ್ಲಿ ಸ್ಥಾನ: ಜಡೇಜಾ ಬದಲು ಯಾರು ಕಣಕ್ಕೆ ಇಳಿಯುತ್ತಾರೆ ಗೊತ್ತೇ??

174

Get real time updates directly on you device, subscribe now.

ಭಾರತ ತಂಡ ಏಷ್ಯಾಕಪ್ 2022 ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿ ಗೆಲುವು ಕಂಡಿದೆ, ಇದೀಗ ಭಾರತ ತಂಡ ಸೂಪರ್ 4 ಹಂತಕ್ಕೆ ಸೆಲೆಕ್ಟ್ ಆಗಿದ್ದು, ನಾಳೆ ನಡೆಯಲಿರುವ ಸೂಪರ್ 4 ಮ್ಯಾಚ್ ನಲ್ಲಿ ಭಾರತ ಯಾವ ತಂಡವನ್ನು ಎದುರಿಸಲಿದೆ ಎಂದು ನೋಡಬೇಕಿದೆ. ಇಂತಹ ಮುಖ್ಯವಾದ ಸಮಯದಲ್ಲಿ ಭಾರತ ತಂಡದ ಆಲ್ ರೌಂಡರ್ ಜಡೇಜಾ ಅವರು ತಂಡದಿಂದ ಹೊರಹೋಗುವ ಹಾಗೆ ಆಗಿದೆ. ರವೀಂದ್ರ ಜಡೇಜಾ ಅವರಿಗೆ ಮೊಣಕಾಲು ಗಾಯ ಆಗಿರುವ ಕಾರಣ ಅವರು ಪಂದ್ಯದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಇದೀಗ ಜಡೇಜಾ ಅವರು ಭಾರತ ತಂಡದಿಂದ ಹೊರಗಿರುವ ಕಾರಣ, ಅವರ ಬದಲಾಗಿ ಮತ್ತೊಬ್ಬ ಆಲ್ ರೌಂಡರ್ ಪ್ಲೇಯಿಂಗ್ 11 ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ರವೀಂದ್ರ ಜಡೇಜಾ ಅವರ ಬದಲಾಗಿ ಬಂದಿರುವುದು ಮತ್ಯಾರು ಅಲ್ಲ, ಅಕ್ಷರ ಪಟೇಲ್ ಅವರು. ಇವರು ವೈಟ್ ಬಾಲ್ ಕ್ರಿಕೆಟ್ ಪಂದ್ಯಗಳಲ್ಲಿ ತಮಗೆ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಕ್ಷರ್ ಪಟೇಲ್ ಅವರು ಸಹ ಆಲ್ ರೌಂಡರ್, ಬ್ಯಾಟಿಂಗ್ ಪ್ರದರ್ಶನ ಚೆನ್ನಾಗಿ ನೀಡುವುದರ ಜೊತೆಗೆ, ಇವರು ಒಳ್ಳೆಯ ಸ್ಪಿನ್ನರ್ ಸಹ ಹೌದು, ಹಾಗಾಗಿ ಮ್ಯಾನೇಜ್ಮೆಂಟ್ ಅಕ್ಷರ್ ಪಟೇಲ್ ಅವರನ್ನು ಪ್ಲೇಯಿಂಗ್ 11 ಗೆ ಆಯ್ಕೆ ಮಾಡಿಕೊಂಡಿದೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಅಕ್ಷರ್ ಪಟೇಲ್ ಅವರ ಬದಲಾಗಿ ಆಟಗಾರ ಆಯ್ಕೆಯಾಗುವ ಸಾಧ್ಯತೆ ಸಹ ಇದೆ. ಆ ಆಟಗಾರ ರಿಷಬ್ ಪಂತ್.

ಪಂತ್ ಅವರು ಸಹ ಒಳ್ಳೆಯ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಗಿದ್ದಾರೆ. ಆದರೆ ಇವರಿಗೆ ಹೆಚ್ಚಾಗಿ ಮೈದಾನದಲ್ಲಿ ಬ್ಯಾಟ್ ಬೀಸುವ ಅವಕಾಶ ಸಿಗುತ್ತಿಲ್ಲ. ಪಂತ್ ಅವರಿಗಿಂತ ದಿನೇಶ್ ಕಾರ್ತಿಕ್ ಅವರಿತೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿರುವ ಕಾರಣ, ರಿಷಬ್ ಪಂತ್ ಅವರು ಬೆಂಚ್ ಕಾಯುವ ಹಾಗೆ ಆಗಿದೆ. ಇದೀಗ ರವೀಂದ್ರ ಜಡೇಜಾ ಅವರು ತಂಡದಿಂದ ಹೊರಹೋಗಿರುವ ಕಾರಣ ಪಂತ್ ಅವರಿಗೆ ಅವಕಾಶ ಸಿಕ್ಕರು ಸಿಗಬಹುದು, ಆದರೆ ಕಳೆದ ಪಂದ್ಯದಲ್ಲಿ ಆವೇಶ್ ಖಾನ್ ಅವರ ಬೌಲಿಂಗ್ ಪ್ರದರ್ಶನ ನೋಡಿದ ಬಳಿಕ, ಟೀಮ್ ಇಂಡಿಯಾಗೆ ಬೌಲರ್ ಅವಶ್ಯಕತೆ ಎನ್ನುವುದು ಗೊತ್ತಾಗುತ್ತದೆ. ಹಾಗಾಗಿ ರಿಷಬ್ ಪಂತ್ ಅವರ ಆಯ್ಕೆ ಮಾಡುವ ಸಲುವಾಗಿ, ಬೌಲರ್ ಆಲ್ ರೌಂಡರ್ ಆಗಿರುವ ಅಕ್ಷರ್ ಪಟೇಲ್ ಅವರನ್ನು ಬಿಡುವುದು ಕೂಡ ಕಷ್ಟವೇ., ಈ ವಿಚಾರವಾಗಿ ಮ್ಯಾನೇಜ್ಮೆಂಟ್ ಆಯ್ಕೆ ಯಾವ ರೀತಿ ಇರುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.