ಕೊಹ್ಲಿ, ರಾಹುಲ್ ಅಲ್ಲ, ಭಾರತ ವಿಶ್ವಕಪ್ ಗೆಲ್ಲಬೇಕು ಎಂದರೆ ಈತನೇ ಬ್ಯಾಟಿಂಗ್ ಮಾಡಬೇಕು ಎಂದ ಗವಾಸ್ಕರ್: ಯಾರಂತೆ ಗೊತ್ತೇ ಆ ದಾಂಡಿಗ??

ಕೊಹ್ಲಿ, ರಾಹುಲ್ ಅಲ್ಲ, ಭಾರತ ವಿಶ್ವಕಪ್ ಗೆಲ್ಲಬೇಕು ಎಂದರೆ ಈತನೇ ಬ್ಯಾಟಿಂಗ್ ಮಾಡಬೇಕು ಎಂದ ಗವಾಸ್ಕರ್: ಯಾರಂತೆ ಗೊತ್ತೇ ಆ ದಾಂಡಿಗ??

ರೋಹಿತ್ ಶರ್ಮಾ ನಾಯಕನಾಗಿರುವ ಭಾರತ ತಂಡವು ಪ್ರಸ್ತುತ ಏಷ್ಯಾಕಪ್ 2022 ಪಂದ್ಯಗಳನ್ನು ಆಡುತ್ತಿದ್ದು, ಮುಂದಿನ ತಿಂಗಳು ಶುರುವಾಗಲಿರುವ ಟಿ20 ವಿಶ್ವಕಪ್ ಪಂದ್ಯದ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಏಷ್ಯಾಕಪ್ 2022 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರು ಟಿ20 ವಿಶ್ವಕಪ್ ಪಂದ್ಯಗಳಿಗೆ ಆಯ್ಕೆಯಾಗುತ್ತಾರೆ, ಅಥವಾ ಯಾವ ಆಟಗಾರ ಟಿ20 ವಿಶ್ವಕಪ್ ಪಂದ್ಯಗಳಿಗೆ ಸೂಕ್ತವಾಗಿರುತ್ತಾರೆ ಎನ್ನುವ ಚರ್ಚೆ ಶುರುವಾಗಿದ್ದು, ಭಾರತದ ಮಾಜಿ ಆಟಗಾರ ರೋಹನ್ ಗವಾಸ್ಕರ್ ಮಾತನಾಡಿದ್ದಾರೆ..

Follow us on Google News

ಏಷ್ಯಾಕಪ್ 2022 ನಲ್ಲಿ ಭಾರತ ತಂಡ ಅಡಿರುವ ಎರಡು ಪಂದ್ಯಗಳಲ್ಲಿ ಭಾರತ ತಂಡದ ಬ್ಯಾಟಿಂಗ್ ಲೈನಪ್ ನೋಡಿದರೆ, ಸೂರ್ಯಕುಮಾರ್ ಯಾದವ್ ಅವರು ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಅದರಲ್ಲು ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ 26 ಬಾಲ್ ಗಳಲ್ಲಿ 68 ರನ್ ಗಳಿಸಿ, ಭಾರತ ತಂಡದ ಗೆಲುವಿಗೆ ಮಖ್ಯ ಪಾತ್ರ ವಹಿಸಿದರು. ಇದೀಗ ಭಾರತದ ಮಾಜಿ ಆಟಗಾರ ರೋಹನ್ ಗವಾಸ್ಕರ್ ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡಿದ್ದಾರೆ, “ಸೂರ್ಯಕುಮಾರ್ ಯಾದವ್ ಅವರು 3ನೇ ಕ್ರಮಾಂಕದಲ್ಲಿ ಆಡಿದ್ದಾರೆ, ಆರಂಭಿಕ ಬ್ಯಾಟ್ಸ್ಮನ್ ಆಗಿ ಆಡಿದ್ದಾರೆ, 4ನೇ ಕ್ರಮಾಂಕದಲ್ಲೂ ಆಡಿದ್ದಾರೆ, ಇದನ್ನು ನಾವು ನೋಡಿದ್ದೇವೆ. 3ನೇ ಮತ್ತು 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರು ಅದ್ಭುತವಾದ ಪ್ರದರ್ಶನ ನೀಡುತ್ತಾರೆ..

ಕಳೆದ ಪಂದ್ಯದಲ್ಲಿ ಪಿಚ್ ಕಷ್ಟವಿದೆ ಎನ್ನುವ ಅಭಿಪ್ರಾಯ ಎಲ್ಲರಿಗೂ ಇತ್ತು, ಆದರೆ ಸೂರ್ಯಕುಮಾರ್ ಯಾದವ್ ಅವರು 200ರ ಸ್ಟ್ರೈಕ್ ರೇಟ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದರು. ಹಾಂಗ್ ಕಾಂಗ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಅಪಾಯಕಾರಿಯಾದ ಆಟವಾಡಿದರು..” ಎಂದು ರೋಹನ್ ಗವಾಸ್ಕರ್ ಹೇಳಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಎಲ್ಲರೂ ಇಂತಹ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದು, ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಸ್ಥಾನ ಗಳಿಸಿಕೊಳ್ಳುವುದು ಪಕ್ಕಾ ಎನ್ನುವ ಮಾತುಗಳು ಕೇಳಿಬರುತ್ತಿದೆ.