ಮುಂದಿನ ಪಂದ್ಯಗಳಲ್ಲಿ ಆವೇಶ್ ಖಾನ್ ರವರ ಸ್ಥಾನವನ್ನು ತುಂಬಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ?? ಇವರಲ್ಲಿ ಯಾರು ಬೆಸ್ಟ್??
ಮುಂದಿನ ಪಂದ್ಯಗಳಲ್ಲಿ ಆವೇಶ್ ಖಾನ್ ರವರ ಸ್ಥಾನವನ್ನು ತುಂಬಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ?? ಇವರಲ್ಲಿ ಯಾರು ಬೆಸ್ಟ್??
ಭಾರತ ಕ್ರಿಕೆಟ್ ತಂಡವು ಈ ವರ್ಷದ ಏಷ್ಯಾಕಪ್ 2022ನಲ್ಲಿ ಆಡಿರುವ 2 ಪಂದ್ಯಗಳಲ್ಲೂ ಗೆದ್ದು ವಿಜಯ ಸಾಧಿಸಿದೆ. ಎರಡು ಪಂದ್ಯ ಗೆದ್ದು, ಬ್ಯಾಟಿಂಗ್ ಲೈನ್ ಅಪ್ ಚೆನ್ನಾಗಿದ್ದರೂ, ತಂಡದಲ್ಲಿ ಒಳ್ಳೆಯ ಪ್ರದರ್ಶನ ನೀಡದ ಬೌಲರ್ ಆವೇಶ್ ಖಾನ್, ಎರಡು ಪಂದ್ಯಗಳಲ್ಲಿ ಸಹ ಇವರು ದುಬಾರಿಯಾಗಿದ್ದರು. ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದುಕೊಂಡರು, ಹಾಂಗ್ ಕಾಂಗ್ ಪಂದ್ಯದಲ್ಲಿ ಬೌಲಿಂಗ್ ಮಾಡಿದ 4 ಓವರ್ ಗಳಲ್ಲಿ 53 ರನ್ ನೀಡುವ ಮೂಲಕ ದುಬಾರಿಯಾದರು. ಜಸ್ಪ್ರೀತ್ ಬುಮ್ರ ಹಾಗೂ ಅರ್ಷದೀಪ್ ಸಿಂಗ್ ಅವರು ಇಂಜುರಿ ಇಂದಾಗಿ ತಂಡದಿಂದ ದೂರ ಇರುವ ಕಾರಣ, ಆವೇಶ್ ಖಾನ್ ಅವರಿಗೆ ಟೀಮ್ ಇಂಡಿಯಾ ಪರವಾಗಿ ಆಡುವ ಅವಕಾಶ ಸಿಕ್ಕಿತು. ಇದೀಗ ಇವರನ್ನು ಪ್ಲೇಯಿಂಗ್ 11 ಇಂದ ಹೊರಾಗಿಡುವುದೇ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆವೇಶ್ ಖಾನ್ ಅವರ ಬದಲಾಗಿ ಆಡಲು ಈಗಾಗಲೇ ಪ್ಲೇಯರ್ ಗಳು ಭಾರತ ತಂಡದಲ್ಲಿದ್ದಾರೆ. ಆ ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..
ರವಿಚಂದ್ರನ್ ಅಶ್ವಿನ್ :- ಆವೇಶ್ ಖಾನ್ ಅವರ ಬದಲಾಗಿ ಅನುಭವಿ ಆಟಗಾರ ರವಿಚಂದ್ರನ್ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ಪಿನ್ ಗೆ ಸೂಕ್ತವಾಗಿರುವ ಮೈದಾನದಲ್ಲಿ ಅಶ್ವಿನ್ ಅವರು ಅದ್ಭುತವಾಗಿ ಪ್ರದರ್ಶನ ನೀಡುತ್ತಾರೆ. ಆವೇಶ್ ಖಾನ್ ಹೆಚ್ಚಿನ ರನ್ಸ್ ನೀಡುತ್ತಿದ್ದಾರೆ, ಅವರ ಬದಲಾಗಿ ಯುಜವೆಂದ್ರ ಚಾಹಲ್ ಅವರೊಡನೆ ಅಶ್ವಿನ್ ಒಳ್ಳೆಯ ಆಯ್ಕೆ ಆಗುತ್ತಾರೆ. ಬೌಲಿಂಗ್ ಜೊತೆಗೆ ಅಶ್ವಿನ್ ಅವರು ಬ್ಯಾಟಿಂಗ್ ಗು ಸಹ ಸಹಾಯಕರಾಗಿ ನಿಲ್ಲುತ್ತಾರೆ.
ರವಿ ಬಿಶ್ನೋಯ್ :- ರವಿಚಂದ್ರನ್ ಅಶ್ವಿನ್ ಅವರನ್ನು ಬಿಟ್ಟರೆ ಮತ್ತೊಂದು ಆಯ್ಕೆ ರವಿ ಬಿಶ್ನೋಯ್, ಈ ಯುವ ಸ್ಪಿನ್ನರ್ ತಮಗೆ ಸಿಕ್ಕಿರುವ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಇವರಿಗೆ ಬೌಲಿಂಗ್ ವಿಚಾರದಲ್ಲಿ ರವಿಚಂದ್ರನ್ ಅಶ್ವಿನ್ ಅವರಷ್ಟು ಅನುಭವ ಇಲ್ಲದೆ ಹೋದರು, ಫೀಲ್ಡಿಂಗ್ ನಲ್ಲಿ ಉತ್ತಮವಾಗಿದ್ದಾರೆ, ಇದರಿಂದ ತಂಡಕ್ಕೆ ರನ್ಸ್ ಗಳನ್ನು ಉಳಿಸಬಹುದು. ಹಾಗೂ ಭಾರತ ತಂಡದ ಭವಿಷ್ಯಕ್ಕೆ ಉಪಯುಕ್ತ ಆಟಗಾರ ಆಗಲಿದ್ದಾರೆ.
ಹಾರ್ದಿಕ್ ಪಾಂಡ್ಯ :- ಭಾರತ ತಂಡಕ್ಕೆ ಒಬ್ಬ ಉತ್ತಮವಾದ ವೇಗಿಯ ಅಗತ್ಯ ಇದೆ. ಆವೇಶ್ ಖಾನ್ ಅವರ ಬದಲಾಗಿ ಹಾರ್ದಿಕ್ ಪಾಂಡ್ಯ ಸಹ ಉತ್ತಮವಾದ ಆಯ್ಕೆ ಆಗಿದ್ದಾರೆ. ಪಾಂಡ್ಯ ಅವರು ಈಗಾಗಲೇ ಬೌಲಿಂಗ್ ನಲ್ಲಿ ಪ್ರೂವ್ ಮಾಡಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಆಲ್ ರೌಂಡರ್ ಪ್ರದರ್ಶನವನ್ನು ಟೀಮ್ ಹಾಗೂ ಜನರು ಸಹ ಮೆಚ್ಚಿಕೊಂಡಿದ್ದಾರೆ. ಇವರು ಸಹ ಬೌಲಿಂಗ್ ನಲ್ಲಿ ಆವೇಶ್ ಖಾನ್ ಅವರಿಗಿಂತ ಉತ್ತಮವಾದ ಪ್ರದರ್ಶನ ನೀಡುವುದು ಖಚಿತ ಆಗಿದೆ.