ವಿರಾಟ್ ಕೊಹ್ಲಿ ರವರು ಅಭ್ಯಾಸ ಮಾಡುವಾಗ ಧರಿಸಿದ ಮಾಸ್ಕ್ ಆಯಿತು ವೈರಲ್. ಈ ವಿಶೇಷ ಮಾಸ್ಕ್ ಯಾಕೆ ಧರಿಸುತ್ತಾರೆ ಗೊತ್ತೇ??

ವಿರಾಟ್ ಕೊಹ್ಲಿ ರವರು ಅಭ್ಯಾಸ ಮಾಡುವಾಗ ಧರಿಸಿದ ಮಾಸ್ಕ್ ಆಯಿತು ವೈರಲ್. ಈ ವಿಶೇಷ ಮಾಸ್ಕ್ ಯಾಕೆ ಧರಿಸುತ್ತಾರೆ ಗೊತ್ತೇ??

ಏಷ್ಯಾಕಪ್ ಪಂದ್ಯಗಳು ಈಗ ಸೂಪರ್ 4 ಹಂತದಲ್ಲಿದೆ. ಗ್ರೂಪ್ ಎ ಇಂದ ಸೂಪರ್ 4 ಹಂತಕ್ಕೆ ಭಾರತ ಮತ್ತು ಪಾಕಿಸ್ತಾನ್ ತಂಡ, ಗ್ರೂಪ್ ಬಿ ಇಂದ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡ ಸೆಲೆಕ್ಟ್ ಆಗಿದೆ. ಇಂದು ಭಾರತ ಮತ್ತು ಪಾಕಿಸ್ತಾನ್ ನಡುವೆ ಸೂಪರ್ 4 ಪಂದ್ಯ ನಡೆಯಲಿದ್ದು, ಭಾರತ ತಂಡದ ಪ್ಲೇಯರ್ ಗಳು ಪ್ರಾಕ್ಟೀಸ್ ನಡೆಸುತ್ತಿದ್ದಾರೆ. ಶುಕ್ರವಾರ ಭಾರತ ತಂಡದ ಆಟಗಾರರು ದೇಹ ದಂಡಿಸಿ ಅಭ್ಯಾಸ ನಡೆಸಿದ್ದಾರೆ.

ಅದರಲ್ಲೂ ವಿರಾಟ್ ಕೋಹ್ಲಿ ಅವರು ಬಹಳ ವಿಶೇಷವಾಗಿ ಕಾಣಿಸಿಕೊಂಡರು, ವಿರಾಟ್ ಕೋಹ್ಲಿ ಅವರು ಮಾಸ್ಕ್ ಧರಿಸಿ ಅಭ್ಯಾಸ ಮಾಡುತ್ತಿದ್ದು, ಅದು ಹೈಲೈಟ್ ಆಗಿತ್ತು. ವಿರಾಟ್ ಅವರು ಮಾಸ್ಕ್ ಧರಿಸಿದ್ದು ನೋಡಿ ಕೋವಿಡ್ ಎಂದುಕೊಳ್ಳಬೇಡಿ, ವಿರಾಟ್ ಅವರು ಧರಿಸಿದ್ದು ಹೈ ಆಲ್ಟಿಟ್ಯೂಡ್ ಮಾಸ್ಕ್ ಆಗಿದೆ. ಈ ಮಾಸ್ಕ್ ಅನ್ನು ಹೆಚ್ಚಾಗಿ ಓಟಗಾರರು ಹಾಗೂ ಸೈಕ್ಲಿಸ್ಟ್ ಗಳು ಬಳಸುತ್ತಾರೆ. ಎತ್ತರದ ಜಾಗಗಳಲ್ಲಿ ಆಮ್ಲಜನಕದ ಕೊರತೆ ಆಗುತ್ತದೆ. ಅಂತಹ ಕಡೆಗಳಲ್ಲಿ ಈ ಮಾಸ್ಕ್ ಧರಿಸಲಾಗುತ್ತದೆ. ಈ ಮಾಸ್ಕ್ ಎತ್ತರದ ಪ್ರದೇಶದಲ್ಲಿ ಇರುವಂತಹ ಪರಿಸ್ಥಿತಿ ಸೃಷ್ಟಿ ಮಾಡುತ್ತದೆ, ಈ ಮಾಸ್ಕ್ ಇಂದ ಆಕ್ಸಿಜನ್ ಮಾಸ್ಕ್ ಅನ್ನು ಕೃತಕವಾಗಿ ರಚಿಸಬಹುದು. ಈ ಮಾಸ್ಕ್ ಧರಿಸುವುದರಿಂದ ಕಡಿಕೆ ಆಕ್ಸಿಜನ್ ಮಟ್ಟದಲ್ಲಿ ಅಭ್ಯಾಸ ಮಾಡಬಹುದು.

ಇದರಿಂದಾಗಿ ಮನುಷ್ಯರ ದೇಹ ಮತ್ತು ಶ್ವಾಸಕೋಶ ಎರಡು ಸಹ ಪೂರ್ತಿಯಾಗಿ ಕೆಲಸ ಮಾಡಲು ಪೂರ್ತಿ ಶಕ್ತಿ ಉಪಯೋಗಿಸುತ್ತದೆ. ಕಡಿಮೆ ಆಕ್ಸಿಜನ್ ಮಟ್ಟದಲ್ಲಿ ಹೆಚ್ಚು ವ್ಯಾಯಾಮ ಮಾಡಬಹುದು. ಈ ಮಾಸ್ಕ್ ಅನ್ನು ತೆಗೆದ ಬಳಿಕ ನೀವು ಇನ್ನು ಹೆಚ್ಚು ಶಕ್ತಿಶಾಲಿಯಾಗುತ್ತೀರಿ ಎಂದು ವೈದ್ಯರು ಸಹ ಹೇಳುತ್ತಾರೆ. ಈ ಮಾಸ್ಕ್ ಧರಿಸುವುದರಿಂದ ಓಡುವಾಗ, ವ್ಯಾಯಾಮ ಮಾಡುವಾಗ, ಸೈಕ್ಲಿಂಗ್ ಮಾಡುವಾಗ ಬೇಗ ಆಯಾಸ ಆಗುವುದಿಲ್ಲ. ಪ್ರಸ್ತುತ ಕೋಹ್ಲಿ ಅವರು ಸಹ ಇದೇ ಮಾಸ್ಕ್ ಧರಿಸಿ ಉಪಯೋಗಿಸಿ ಅಭ್ಯಾಸ ಮಾಡುತ್ತಿದ್ದು, ಏಷ್ಯಾಕಪ್ ಪಂದ್ಯಗಳಲ್ಲಿ ಕೋಹ್ಲಿ ಅವರು ಸಹ ಉತ್ತಮವಾದ ಫಾರ್ಮ್ ನಲ್ಲಿದ್ದಾರೆ.