ಹೆಚ್ಚಿನ ರಿಸ್ಕ್ ಇಲ್ಲದೆ, ಮನೆಯಿಂದಲೇ ಶುರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ?? ಸುಲಭವಾಗಿ ಹಣ ಕೂಡ ಮಾಡಬಹುದು.
ಹೆಚ್ಚಿನ ರಿಸ್ಕ್ ಇಲ್ಲದೆ, ಮನೆಯಿಂದಲೇ ಶುರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ?? ಸುಲಭವಾಗಿ ಹಣ ಕೂಡ ಮಾಡಬಹುದು.
ದೇಶದಲ್ಲಿ ಕರೋನಾ ಇಂದಾಗಿ ಆರ್ಥಿಕ ಸಮಸ್ಯೆ ಆಗಿ, ಹಲವರು ಕೆಲಸ ಕಳೆದುಕೊಂಡ ಕಾರಣ, ಹೆಚ್ಚಿನ ಜನರು ಮತ್ತೊಂದು ಕಡೆ ಕೆಲಸಕ್ಕೆ ಹೋಗುವ ಬದಲು, ಬ್ಯುಸಿನೆಸ್ ಮಾಡಬೇಕು ಎಂದುಕೊಳ್ಳುತ್ತಿದ್ದಾರೆ. ಹಲವರಿಗೆ ಬ್ಯುಸಿನೆಸ್ ಮಾಡುವ ಐಡಿಯಾ ಇದ್ದರು, ಯಾವ ಬ್ಯುಸಿನೆಸ್ ಮಾಡಬೇಕು, ಯಾವುದರಲ್ಲಿ ಬಂಡವಾಳ ಹಾಕಬೇಕು ಎನ್ನುವುದು ಸರಿಯಾಗಿ ಗೊತ್ತಾಗುವುದಿಲ್ಲ. ಹಾಗಾಗಿ ಇಂದು ನಾವು ನಿಮಗೆ ಮನೆಯಲ್ಲೇ ಶುರು ಮಾಡಬಹುದಾದಂತಹ ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ. ಕಡಿಮೆ ಬಂಡವಾಳದಲ್ಲಿ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು.
ನೀವು ಗಮನಿಸಿದ್ದರೆ ಆಗಾಗ ಈರುಳ್ಳಿ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ, ಆದರೆ ಪ್ರತಿದಿನದ ಅಡುಗೆಗೆ ಈರುಳ್ಳಿ ಬೇಕೇ ಬೇಕು. ಅದರಿಂದ ಈಗ ಈರುಳ್ಳಿ ಪೇಸ್ಟ್ ಗೆ ಬೇಡಿಕೆ ಹೆಚ್ಚಿದೆ. ನೀವು ಕೂಡ ಈರುಳ್ಳಿ ಪೇಸ್ಟ್ ವ್ಯಾಪಾರ ಶುರು ಮಾಡಬಹುದು. ಖಾದಿ ಗ್ರಾಮೋದ್ಯೋಗ ಆಯೋಗವು ಈರುಳ್ಳಿ ಪೇಸ್ಟ್ ತಯಾರಿಸುವ ವ್ಯವಹಾರರ ಬಗ್ಗೆ ಯೋಜನೆಯ ವರದಿಯನ್ನು ಸಿದ್ಧ ಪಡಿಸಿದೆ, ಅದರ ಪ್ರಕಾರ ಈ ವ್ಯವಹಾರ ಶುರು ಮಾಡಲು, ₹4.19 ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಹಣ ಇಲ್ಲದೆ ಹೋದರೆ, ಸರ್ಕಾರದಿಂದ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದು.
ಬರುವ ಹಣದಲ್ಲಿ ನಿಮ್ಮ ಜಾಗದಲ್ಲಿ ಈರುಳ್ಳಿ ತಯಾರಿಕಾ ಘಟಕ ಸ್ಥಾಪಿಸಲು ಶೆಡ್ ನಿರ್ಮಾಣ ಮಾಡಲು, 1 ಲಕ್ಷ ರೂಪಾಯಿ ಬೇಕಾಗುತ್ತದೆ. ಅದಕ್ಕೆ ಬೇಕಾಗುವ ಉಪಕರಣಗಳು, ಫ್ರೈಯಿಂಗ್ ಪ್ಯಾನ್, ಆಟೋಕ್ಲೇವ್ ಸ್ಟೀಮ್ ಕುಕ್ಕರ್, ಡೀಸೆಲ್ ಫರ್ನೆಸ್, ಪೆಸ್ಟಿಸೈಡ್ ಟ್ಯಾಂಕ್, ಸಣ್ಣ ಮಡಕೆಗಳು, ಮಗ್ ಗಳು, ಕಪ್ ಗಳು ಹಾಗು ಇನ್ನಿತರ ವಸ್ತುಗಳಿಗೆ ₹1.75 ಲಕ್ಷ ರೂಪಾಯಿ ಬೇಕಾಗುತ್ತದೆ. ಇದರಲ್ಲಿ ನೀವು 1 ವರ್ಷಕ್ಕೆ 193 ಕೆಜಿ ಈರುಳ್ಳಿ ಪೇಸ್ಟ್ ತಯಾರಿಸಬಹುದು, 1ಕ್ವಿನ್ಟಾಲ್ ಪೇಸ್ಟ್ ಗೆ, ₹3000 ರೂಪಾಯಿ ಎಂದುಕೊಂಡರೆ, ಒಂದು ವರ್ಷದಲ್ಲಿ ₹5.79 ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು. ಈರುಳ್ಳಿ ಪೇಸ್ಟ್ ತಯಾರಿಸಿದ ಬಳಿಕ, ಅವುಗಳನ್ನು ಪ್ಯಾಕ್ ಮಾಡಬೇಕು, ಹಾಗೆಯೇ ಮಾರಾಟಕ್ಕಾಗಿ ನೀವು ಮಾರ್ಕೆಟಿಂಗ್ ವ್ಯಕ್ತಿಗಳ ಸಹಾಯ ಪಡೆಯಬಹುದು, ಅಥವಾ ಸೋಷಿಯಲ್ ಬಳಸಿಕೊಳ್ಳಬಹುದು.