ವಿರಾಟ್ ಕೊಹ್ಲಿ ರವರ ವಿರುದ್ಧ ನಾಲಿಗೆ ಹರಿಬಿಟ್ಟ ರಶೀದ್ ಲತೀಫ್: ಆರ್ಸಿಬಿ ಅಭಿಮಾನಿಗಳು ಮಾತ್ರ ಫುಲ್ ಗರಂ: ವಿರಾಟ್ ಕೊಹ್ಲಿ ಆ ತಪ್ಪು ಮಾಡಿದ್ದೆ ಆರ್ಸಿಬಿ ಗೆ ಕಪ್ ಬಂದಿಲ್ಲ.

ವಿರಾಟ್ ಕೊಹ್ಲಿ ರವರ ವಿರುದ್ಧ ನಾಲಿಗೆ ಹರಿಬಿಟ್ಟ ರಶೀದ್ ಲತೀಫ್: ಆರ್ಸಿಬಿ ಅಭಿಮಾನಿಗಳು ಮಾತ್ರ ಫುಲ್ ಗರಂ: ವಿರಾಟ್ ಕೊಹ್ಲಿ ಆ ತಪ್ಪು ಮಾಡಿದ್ದೆ ಆರ್ಸಿಬಿ ಗೆ ಕಪ್ ಬಂದಿಲ್ಲ.

ಭಾರತ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರಃ ಫಾರ್ಮ್ ಕಳೆದುಕೊಂಡು ಕಳೆದ ಕೆಲ ಸಮಯದಿಂದ ಬಹಳ ಟೀಕೆಗೆ ಗುರಿಯಾಗಿದ್ದಾರೆ ಎನ್ನುವ ವಿಷಯ ಗೊತ್ತಿರುವುದೆ. ಇಂಗ್ಲೆಂಡ್ ಪ್ರವಾಸ ಹಜ್ಯ್ ಇಂಗ್ಲೆಂಡ್ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರು ಕಳಪೆ ಪ್ರದರ್ಶನ ನೀಡಿ, ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿದು, ವಿಶ್ರಾಂತಿ ಪಡೆದು ಈಗ ಏಷ್ಯಾಕಪ್ ಪಂದ್ಯಗಳ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಏಷ್ಯಾಕಪ್ ನಲ್ಲಿ ಈವರೆಗೂ ನಡೆದ ಮೂರು ಪಂದ್ಯಗಳಲ್ಲೂ ಕೋಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 35 ರನ್ ಗಳು, ಹಾಂಗ್ ಕಾಂಗ್ ವಿರುದ್ಧ ಅರ್ಧ ಶತಕ ಪಡೆದರು.

ನಿನ್ನೆ ನಡೆದ ಪಾಕಿಸ್ತಾನ್ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಸಹ ವಿರಾಟ್ ಅವರು ಅರ್ಧಶತಕ ಗಳಿಸಿದರು. ಆದರೆ ಈಗ ಕೋಹ್ಲಿ ಅವರ ಬಗ್ಗೆ ಪಾಕಿಸ್ತಾನ್ ಮಾಜಿ ಆಟಗಾರ ರಶೀದ್ ಲತೀಫ್ ಮಾತನಾಡಿ ಟೀಕೆ ಮಾಡಿದ್ದಾರೆ, ವಿರಾಟ್ ಕೋಹ್ಲಿ ಅವರು ಒಳ್ಳೆಯ ಟಿ20 ಪ್ಲೇಯರ್ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿ, ವಿರಾಟ್ ಕೋಹ್ಲಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. “ಸೂರ್ಯಕುಮಾರ್ ಯಾದವ್ ಅಥವಾ ರೋಹಿತ್ ಶರ್ಮಾ ಅವರ ಹಾಗೆ ವಿರಾಟ್ ಕೋಹ್ಲಿ ಎಂದಿಗೂ ಒಳ್ಳೆಯ ಟಿ20 ಪ್ಲೇಯರ್ ಆಗಲು ಸಾಧ್ಯವಿಲ್ಲ. ಆರ್.ಸಿ.ಬಿ ಇಷ್ಟು ವರ್ಷಗಳ ಕಾಲ ಕಪ್ ಗೆಲ್ಲದೆ ಇರಲು ವಿರಾಟ್ ಕೋಹ್ಲಿ ಮುಖ್ಯ ಕಾರಣ..” ಎಂದು ರಶೀದ್ ಲತೀಫ್ ಹೇಳಿದ್ದಾರೆ.

“ವಿರಾಟ್ ಕೋಹ್ಲಿ ಅದ್ಭುತ ಒನ್ ಡೇ ಕ್ರಿಕೆಟ್ ಪ್ಲೇಯರ್, ಆದರೆ ವಿರಾಟ್ ಎಂದಿಗೂ ರೋಹಿತ್ ಹಾಗೂ ಸೂರ್ಯಕುಮಾರ್ ಆಗಲು ಸಾಧ್ಯವಿಲ್ಲ. ಉದಾಹರಣೆಗೆ ಎಂ.ಎಸ್.ಧೋನಿ ಅವರನ್ನು ತೆಗೆದುಕೊಂಡರೆ, ಡಾಟ್ ಬಾಲ್ ಗಳನ್ನು ಆಡಿದರು ಸಹ, ಸಿಕ್ಸಸ್ ಗಳನ್ನು ಭಾರಿಸುವ ಮೂಲಕ ಉತ್ತಮ ಸ್ಟ್ರೈಕ್ ರೇಟ್ ಜೊತೆಗೆ ತಂಡಕ್ಕೆ ಸಹಾಯವಾಗಿದ್ದರು. ಆದರೆ ಕೋಹ್ಲಿ ಇಂದ ಇದು ಸಾಧ್ಯವಿಲ್ಲ. ಹಾಂಗ್ ಕಾಂಗ್ ಪಂದ್ಯದಲ್ಲಿ ಅವರು ವೇಗವಾಗಿ ಆಡಿದ್ರಾ ಅಥವಾ ನಿಧಾನವಾಗಿ ಆಡಿದ್ರಾ ಎನ್ನುವ ಚರ್ಚೆ ಶುರುವಾಗಿದೆ. ಕೋಹ್ಲಿ ಆಡುವುದೇ ಹೀಗೆ, 30 ಅಥವಾ 35 ರನ್ ಗಳಿಸಿ, ಹೊಡೆತಕ್ಕೆ ಒಳಗಾಗುತ್ತಾರೆ. ಕೋಹ್ಲಿ ಅವರನ್ನು ಭಾರತದ ಪಂದ್ಯಗಳು ಐಪಿಎಲ್ ನಲ್ಲೂ ನೋಡಿದ್ದೇನೆ. ರೋಹಿತ್ ಶರ್ಮಾ ಅವರು ಪವರ್ ಪ್ಲೇ ನಲ್ಲಿ ಬಿಗ್ ಹಿಟ್ಸ್ ಹೊಡೆದು, ಕೊನೆಯ ಓವರ್ ವರೆಗೂ ತಂಡವನ್ನು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಾರೆ..” ಎಂದು ಹೇಳಿದ್ದಾರೆ ರಶೀದ್ ಲತೀಫ್.