ಸೋಲಿಗೂ ಮುನ್ನವೇ ತಾಳ್ಮೆ ಕಳೆದುಕೊಂಡಿದ್ದ ನಾಯಕ ರೋಹಿತ್ ಶರ್ಮ: ಡ್ರೆಸ್ಸಿಂಗ್ ರೂಮ್ ನಲ್ಲಿ ಫುಲ್ ಕ್ಲಾಸ್. ನಾಯಕ ರೋಹಿತ್ ಮಾಡಿದ್ದೇನು ಗೊತ್ತೇ??

ಸೋಲಿಗೂ ಮುನ್ನವೇ ತಾಳ್ಮೆ ಕಳೆದುಕೊಂಡಿದ್ದ ನಾಯಕ ರೋಹಿತ್ ಶರ್ಮ: ಡ್ರೆಸ್ಸಿಂಗ್ ರೂಮ್ ನಲ್ಲಿ ಫುಲ್ ಕ್ಲಾಸ್. ನಾಯಕ ರೋಹಿತ್ ಮಾಡಿದ್ದೇನು ಗೊತ್ತೇ??

ನಿನ್ನೆ ನಡೆದ ಏಷ್ಯಾಕಪ್ 2022 ನ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲನ್ನು ಅನುಭವಿಸಿತು. ಪಂದ್ಯ ರೋಚಕವಾಗಿದ್ದರು, ಭಾರತ ತಂಡ ಪಂದ್ಯವನ್ನು ಗೆಲ್ಲಲಿಲ್ಲ. ನಿನ್ನೆಯ ಪಂದ್ಯ ಭಾರತ ತಂಡದ ಪಾಲಿಗೆ ಬಹಳ ಮುಖ್ಯವಾದ ಪಂದ್ಯವಾಗಿತ್ತು. ವಿರಾಟ್ ಕೋಹ್ಲಿ ಅವರು 60 ರನ್ ಗಳಿಸಿ ಬ್ಯಾಟಿಂಗ್ ಮಾಡಿದರು ಸಹ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಬೇಗ ಔಟ್ ಆದ ಕಾರಣ, ಭಾರತ ತಂಡ 200 ರನ್ ಗಳಿಸಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಉತ್ತಮವಾಗಿಯೇ ಆರಂಭದಲ್ಲಿ ಸ್ಕೋರ್ ಮಾಡಿದರು, 5 ಓವರ್ ಆಗುವಷ್ಟರಲ್ಲೇ 54 ರನ್ ಗಳಿಸಿತ್ತು ಭಾರತ. 10ನೇ ಓವರ್ ಸಮಯಕ್ಕೆ 100 ರನ್ ಗಡಿಯಲ್ಲಿತ್ತು.

ಆದರೆ, ಮಧ್ಯಮ ಕ್ರಮದಲ್ಲಿ ಬಂದ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಮೂವರು ಸಹ ಒಳ್ಳೆಯ ಪ್ರದರ್ಶನ ನೀಡಲಾಗಲಿಲ್ಲ. ಹಾರ್ದಿಕ್ ಪಾಂಡ್ಯ ಸೊನ್ನೆಗೆ ಔಟ್ ಆದರೆ, ರಿಷಬ್ ಪಂತ್ ಬಹಳ ಸುಲಭವಾಗಿ ಕ್ಯಾಚ್ ನೀಡಿ ಔಟ್ ಆದರು. ನಿನ್ನೆಯ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಬಿಟ್ಟು ರಿಷಬ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು, ಅದಕ್ಕೆ ಕಾರಣ ರಿಷಬ್ ಪಂತ್ ಎಡಗೈ ಬ್ಯಾಟ್ಸ್ಮನ್ ಎನ್ನುವುದಾಗಿತ್ತು. ಆದರೆ ರಿಷಬ್ ಪಂತ್ ನಿರೀಕ್ಷೆಯ ಮಟ್ಟದಲ್ಲಿ ರನ್ ಗಳಿಸಲಿಲ್ಲ. ಇದರಿಂದ ತಂಡದ ನಾಯಕ ರೋಹಿತ್ ಶರ್ಮಾ ಬಹಕ ಕೋಪಗೊಂಡು, ರಿಷಬ್ ಪಂತ್ ಗ್ರೀನ್ ರೂಮ್ ಗೆ ಬಂದ ತಕ್ಷಣವೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರೋಹಿತ್ ಶರ್ಮಾ ಅಷ್ಟು ಕೋಪದಿಂದ ಗ್ರೀನ್ ರೂಮ್ ನಲ್ಲಿ ಮಾತನಾಡುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿನ್ನೆಯ ಪಂದ್ಯದಲ್ಲಿ ಆಯ್ಕೆಯೇ ಸರಿ ಇರಲಿಲ್ಲ. ರಿಷಬ್ ಪಂತ್ ಅವರನ್ನು ಆಯ್ಕೆ ಮಾಡುವುದು ತಪ್ಪು ಎನ್ನುತ್ತಿದ್ದಾರೆ ನೆಟ್ಟಿಗರು. ನಿನ್ನೇ ಭಾರತ ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲದ ಕಾರಣ, ಸೋಲು ಕಂಡಿತು. ಪಾಕಿಸ್ತಾನ್ 5 ವಿಕೆಟ್ ನಷ್ಟಕ್ಕೆ, ಕೊನೆಯ ಓವರ್ ನಲ್ಲಿ 1 ಓವರ್ ನಲ್ಲಿ 7 ರನ್ ಗಳ ಟಾರ್ಗೆಟ್ ಇತ್ತು, 1 ಬಾಲ್ ಇನ್ನು ಉಳಿದಿದೆ ಎನ್ನುವಾಗಲೇ ಪಾಕಿಸ್ತಾನ್ ಮ್ಯಾಚ್ ಫಿನಿಷ್ ಮಾಡಿತ್ತು.