ಕೊನೆಗೂ ಸಿಕ್ತು ಕಾರಣ: ರೋಹಿತ್ ಶರ್ಮ ಫಾರ್ಮ್ ನಲ್ಲಿ ಇರುವ ದಿನೇಶ್ ರವರನ್ನು ಕೈ ಬಿಟ್ಟಿದ್ದು ಯಾಕಂತೆ ಗೊತ್ತೇ??

ಕೊನೆಗೂ ಸಿಕ್ತು ಕಾರಣ: ರೋಹಿತ್ ಶರ್ಮ ಫಾರ್ಮ್ ನಲ್ಲಿ ಇರುವ ದಿನೇಶ್ ರವರನ್ನು ಕೈ ಬಿಟ್ಟಿದ್ದು ಯಾಕಂತೆ ಗೊತ್ತೇ??

ನಿನ್ನೆ ನಡೆದ ಏಷ್ಯಾಕಪ್ 2022, ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ತಂಡ ಪ್ರಮುಖವಾದ ಮೂರು ಬದಲಾವಣೆಗಳ ಜೊತೆಗೆ ಕಣಕ್ಕೆ ಇಳಿಯಿತು. ನಿನ್ನೆಯ ಪಂದ್ಯದಲ್ಲಿ ಭಾರತ ತಂಡದ ಸ್ಕೋರ್ ಚೆನ್ನಾಗಿದ್ದರೂ ಸಹ ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಲಿಲ್ಲ. ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಸೋಲು ಕಂಡಿತು. ಒಳ್ಳೆಯ ಫಾರ್ಮ್ ನಲ್ಲಿರುವ ದಿನೇಶ್ ಕಾರ್ತಿಕ್ ಅವರನ್ನು ನಿನ್ನೆಯ ಪಂದ್ಯದಲ್ಲಿ ಪ್ಲೇಯಿಂಗ್ 11 ಇಂದ ಹೋರಾಗಿಡಲಾಗಿತ್ತು. ಅದಕ್ಕೆ ಕಾರಣ ಏನು ಎಂದು ಈಗ ತಿಳಿದುಬಂದಿದೆ.

ನಿನ್ನೆ ಪಾಕಿಸ್ತಾನ್ ವಿರುದ್ಧದ ಪಂದ್ಯ ಶುರುವಾಗುವ ಮೊದಲೇ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ತಂಡದಲ್ಲಿ ಮಾಡಿರುವ ಮೂರು ಬದಲಾವಣೆ ಬಗ್ಗೆ ತಿಳಿಸಿದರು. ಆವೇಶ್ ಖಾನ್ ಅವರ ಬದಲಾಗಿ ರವಿ ಬಿಶ್ನೋಯ್ ಅವರನ್ನು ಕಣಕ್ಕೆ ಇಳಿಸಲಾಯಿತು, ಗಾಯಗೊಂಡು ತಂಡದಿಂದ ಹೊರಹೋಗಿರುವ ರವೀಂದ್ರ ಜಡೇಜಾ ಅವರ ಬದಲಾಗಿ ದೀಪಕ್ ಹೂಡಾ ಅವರನ್ನು ಆಯ್ಕೆಮಾಡಿಕೊಳ್ಳಲಾಯಿತು. ಹಾಗೆಯೇ ದಿನೇಶ್ ಕಾರ್ತಿಕ್ ಅವರ ಬದಲಾಗಿ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಹಾಂಗ್ ಕಾಂಗ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವಿಶ್ರಾಂತಿ ಪಡೆದ ಕಾರಣ, ಅವರ ಬದಲಾಗಿ ರಿಷಬ್ ಆಯ್ಕೆಯಾಗಿದ್ದರು.

ನಿನ್ನೆಯ ಪಂದ್ಯದಲ್ಲಿ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲು ಒಂದು ಮುಖ್ಯವಾದ ಕಾರಣ ಏನೆಂದರೆ ತಂಡದಿಂದ ಹೊರಗುಳಿದಿರುವ ರವೀಂದ್ರ ಜಡೇಜಾ ಅವರು ಎಡಗೈ ಬ್ಯಾಟ್ಸ್ಮನ್, ಹಾಗಾಗಿ ರಿಷಬ್ ಪಂತ್ ಸಹ ಎಡಗೈ ಬ್ಯಾಟ್ಸ್ಮನ್ ಆಗಿರುವ ಕಾರಣ ಅವರನ್ನು ಆಯ್ಕೆ ಮಾಡಲಾಗಿದೆ. ಭಾರತ ತಂಡದಲ್ಲಿ ಇನ್ಯಾರು ಎಡಗೈ ಬ್ಯಾಟ್ಸ್ಮನ್ ಇಲ್ಲದ ಕಾರಣ, ದಿನೇಶ್ ಕಾರ್ತಿಕ್ ಅವರನ್ನು ಹೊರಗಿಟ್ಟು ರಿಷಬ್ ಪಂತ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ರಿಷಬ್ ಪಂತ್ ಅವರು ನಿರೀಕ್ಷೆಯ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ.