ಕೊನೆಗೂ ಎಚ್ಚೆತ್ತುಕೊಳ್ಳುತ್ತಿದೆ ಭಾರತ, ಪಾಕ್ ವಿರುದ್ಧ ಸೋಲಿನ ಬಳಿಕ ಮಹತ್ವದ ಬದಲಾವಣೆ ಫಿಕ್ಸ್: ಹೊರಹೋಗುವುದು ಯಾರು ಗೊತ್ತೇ?? ಖಡಕ್ ಆಟಗಾರ ಎಂಟ್ರಿ ಖಚಿತ.
ಕೊನೆಗೂ ಎಚ್ಚೆತ್ತುಕೊಳ್ಳುತ್ತಿದೆ ಭಾರತ, ಪಾಕ್ ವಿರುದ್ಧ ಸೋಲಿನ ಬಳಿಕ ಮಹತ್ವದ ಬದಲಾವಣೆ ಫಿಕ್ಸ್: ಹೊರಹೋಗುವುದು ಯಾರು ಗೊತ್ತೇ?? ಖಡಕ್ ಆಟಗಾರ ಎಂಟ್ರಿ ಖಚಿತ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮೊದಲ ಎರಡು ಲೀಗ್ ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿದ್ದ ಭಾರತ ನೆನ್ನೆ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಸೂಪರ್ 4 ಹಂತದಲ್ಲಿ ಆರಂಭಿಕ ಹಿನ್ನಡೆಯನ್ನು ಅನುಭವಿಸಿದೆ. ಭಾರತ ಕ್ರಿಕೆಟ್ ತಂಡ ಫೈನಲ್ ತಲುಪುವುದು ಬಹುತೇಕ ಖಚಿತವಾಗಿದ್ದರೂ ಕೂಡ ಖಂಡಿತ ಫೈನಲ್ ನಲ್ಲಿ ಮತ್ತೊಮ್ಮೆ ಪಾಕಿಸ್ತಾನ ತಂಡ ಎದುರಾಳಿಯಾಗುವ ಕಾರಣ ಭಾರತ ತಂಡ ಇನ್ನುಳಿದ ಎರಡು ಪಂದ್ಯಗಳಲ್ಲಿ ಕೇವಲ ಗೆಲುವನ್ನು ದಾಖಲಿಸುವ ಕಡೆ ಗಮನ ಕೊಡದೆ ಬದಲಾಗಿ ತಂಡದ ಸಂಯೋಜನೆ ಕುರಿತು ಕೂಡ ಗಮನ ಕೊಡಬೇಕಾದ ಪರಿಸ್ಥಿತಿ ಎದುರಾಗಿದೆ.
ಮೊದಲ ಪಾಕ್ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿದ್ದ ಹಾರ್ದಿಕ್ ಪಾಂಡ್ಯ ರವರನ್ನು ಕೇವಲ ವಿಶ್ರಾಂತಿಯ ಕಾರಣ ಹೇಳಿ ಎರಡನೇ ಪಂದ್ಯದಿಂದ ಹೊರಗಿಟ್ಟದ್ದು ನಿಜಕ್ಕೂ ಆಶ್ಚರ್ಯಕರ. ಯಾಕೆಂದರೆ ಒಬ್ಬ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರನಿಗೆ ಎರಡು-ಮೂರು ದಿನಗಳ ಬಿಡುವಿನ ನಡುವೆ ನೇರವಾಗಿ ಆರು ಪಂದ್ಯಗಳನ್ನು ಹೊಂದಿರುವ ಏಷ್ಯಾಕಪ್ ಟೂರ್ನಿ ಆಡುವುದು ಕಷ್ಟ ಎನಿಸುವುದಿಲ್ಲ ಒಂದು ವೇಳೆ ಕಷ್ಟ ಅನಿಸಿದರೆ ಖಂಡಿತ ಆತ ಅಂತರಾಷ್ಟ್ರೀಯ ಮಟ್ಟಕ್ಕೆ ಸೂಕ್ತ ಆಟಗಾರನಲ್ಲ.
ಹೌದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಟವಾಡ ಬೇಕು ಎಂದರೆ ಖಂಡಿತ ಆತ ಫಿಟ್ನೆಸ್ ನಲ್ಲಿ ಮುಂದಿರುತ್ತಾನೆ, ಆದರೆ ಕೇವಲ ವಿಶ್ರಾಂತಿಯ ಕಾರಣ ನೀಡಿ ಎರಡನೇ ಪಂದ್ಯದಿಂದ ಹೊರಗೆಟ್ಟಿದ್ದರು ಹಾಗೂ ಮೂರನೇ ಪಂದ್ಯದಲ್ಲಿ ಬಂದ ಪಾಂಡ್ಯ ಬೌಲಿಂಗ್ ನಲ್ಲಿ ನೀರಸ ಪ್ರದರ್ಶನ ನೀಡಿದರೆ ಬ್ಯಾಟಿಂಗ್ ನಲ್ಲಿ ಸೊನ್ನೆ ಸುತ್ತಿದ್ದರು.
ಇನ್ನು ಇಷ್ಟೇ ಅಲ್ಲದೆ ಲೀಗ್ ಹಂತದಲ್ಲಿ ಎರಡು ಪಂದ್ಯಗಳನ್ನು ಗೆದ್ದರೂ ಕೂಡ ಮೊದಲ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವಕಾಶ ನೀಡಿ ಎರಡನೇ ಪಂದ್ಯದಲ್ಲಿ ರಿಷಬ್ ಪಂತ್ ರವರನ್ನು ಆಡಿಸಲಾಗಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಜಡೇಜಾ ರವರು ಹೊರಗುಳಿದಿದ್ದರೂ ಕೂಡ ದಿನೇಶ್ ಕಾರ್ತಿಕ್ ರವರನ್ನು ತಂಡಕ್ಕೆ ಸೇರಿಸಿಕೊಳ್ಳದೆ ರಿಷಬ್ ಪಂತ್ ಹಾಗೂ ದೀಪಕ್ ಹೂಡಾ ರವರಿಗೆ ಅವಕಾಶ ನೀಡಿದ್ದು, ಎಲ್ಲರಿಗೂ ಇಂದಿಗೂ ಕೂಡ ಆಶ್ಚರ್ಯ ನಿರ್ಧಾರವಾಗಿಯೇ ಉಳಿದಿದೆ.
ಕೇವಲ ಎಡಗೈ ಆಟಗಾರ ಎಂದು ರಿಷಬ್ ಪಂತ್ ರವರಿಗೆ ಅವಕಾಶ ನೀಡುವುದು ಸಮಂಜಸವಲ್ಲ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಬ್ಯಾಟ್ಸ್ಮನ್ ಎಲ್ಲಾ ರೀತಿಯ ಬೌಲರ್ ಗಳಿಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇರಬೇಕು, ಅದರಲ್ಲಿಯೂ ದಿನೇಶ್ ಕಾರ್ತಿಕ್ ರವರಿಗೆ ಖಚಿತವಾಗಿ ಲೆಗ್ಸ್ ಸ್ಪಿನ್ನರ್ ಆಗಿರಲಿ ಅಥವಾ ಇನ್ಯಾವುದೋ ರೀತಿಯ ಸ್ಪಿನ್ ಮಾಡಲಿ ಅವರಿಗೆ ಇರುವ ಅನುಭವ ಹಾಗೂ ಭಾರತದಲ್ಲಿ ಹೆಚ್ಚು ಸ್ಪಿನ್ನರ್ ಗಳಿಗೆ ಆಟವಾಡಿರುವ ಕಾರಣ ಖಂಡಿತ ದಿನೇಶ್ ಕಾರ್ತಿಕ್ ರವರು ಉತ್ತಮ ಪ್ರದರ್ಶನ ನೀಡುತ್ತಿದ್ದರು ಎಂಬುದು ಕ್ರಿಕೆಟ್ ಪಂಡಿತರ ವಾದ.
ಆದರೂ ಕೂಡ ಇದನ್ನು ಆಲೋಚಿಸದೆ ನಾಯಕ ರೋಹಿತ್ ಶರ್ಮ ರವರು ರಿಷಬ್ ಪಂತ್ ಅವರಿಗೆ ಅವಕಾಶ ನೀಡಿದರು. ಇನ್ನು ಇಷ್ಟು ಸಾಲದು ಎಂಬಂತೆ ರೋಹಿತ ಶರ್ಮಾ ರವರು ಆಶ್ಚರ್ಯ ಎಂಬಂತೆ ದೀಪಕ್ ಹೂಡಾ ರವರನ್ನು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಿದ್ದರು, ಹೀಗೆ ಭಾರತ ತಂಡ ಪಂದ್ಯಕೊಂದು ಅಥವಾ ಎರಡು ಬದಲಾವಣೆಗಳನ್ನು ಮಾಡುತ್ತಾ 11 ರ ಬಳಗವನ್ನು ಸಂಯೋಜನೆ ಮಾಡುತ್ತಾ ಕುಳಿತರೆ ಖಂಡಿತ ಮುಂದಿನ ಪಂದ್ಯಗಳಲ್ಲಿ ಭಾರತಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ಇಷ್ಟೇ ಅಲ್ಲದೆ ಈ ಸಮಯದಲ್ಲಿ ಭಾರತ ತಂಡ ಇನ್ನುಳಿದ ಎರಡು ಪಂದ್ಯಗಳಲ್ಲಿ ಸುಲಭದ ಜಯ ದಾಖಲಿಸುವ ಬಹುತೇಕ ಅವಕಾಶ ಇರುವ ಕಾರಣ ಮತ್ತೊಮ್ಮೆ ಪಾಕಿಸ್ತಾನ ತಂಡವನ್ನು ಫೈನಲ್ ನಲ್ಲಿ ಸೋಲಿಸಲು ಬಲಿಷ್ಠ 11ರ ಬಳಗವನ್ನು ಕಟ್ಟಬೇಕಾಗಿದೆ. ಆದಕಾರಣ ಮುಂದಿನ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡಗಳಲ್ಲಿ ಬದಲಾವಣೆ ಖಚಿತ.
ಈಗಾಗಲೇ ಉತ್ತಮ ಲಯದಲ್ಲಿರುವ ಆರಂಭಿಕ ಆಟಗಾರರು ಹಾಗೂ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ರವರು ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಭಾರತ ಕ್ರಿಕೆಟ್ ತಂಡ ಈ ನಾಲ್ಕು ಆಟಗಾರರನ್ನು ಬದಲಾಯಿಸುವ ಯಾವುದೇ ಆಲೋಚನೆ ಮಾಡುವುದಿಲ್ಲ. ಇನ್ನುಳಿದಂತೆ ಐದನೇ ಕ್ರಮಾಂಕಕ್ಕೆ ಬಹುತೇಕ ಬದಲಾವಣೆ ಫಿಕ್ಸ್ ಆಗಿದ್ದು ದೀಪಕ್ ಕೂಡ ರವರಿಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು 6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ 7ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ರವರು ತಂಡದ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿ ಫಿನಿಶರ್ ಸ್ಥಾನವನ್ನು ತುಂಬಲಿದ್ದಾರೆ. ಇನ್ನುಳಿದಂತೆ ಅವಿಶ್ ಖಾನ್ ರವರಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗುವುದು ಬಹುತೇಕ ಅನುಮಾನವಾಗಿದ್ದು, ವೇಗದ ಬೋಲಿಂಗ್ ವಿಭಾಗವನ್ನು ಭುವನೇಶ್ವರ್, ಹರ್ಷದೀಪ್ ಸಿಂಗ್ ನೋಡಿಕೊಳ್ಳಲಿದ್ದಾರೆ. ಇನ್ನುಳಿದ ಎರಡು ಸ್ಥಾನಗಳಲ್ಲಿ ರವಿ ಬಿಶ್ನೋಯ್ ಹಾಗೂ ಯುಜ್ವೇಂದ್ರ ಚಾಹಲ್ ಆಟವಾಡುವುದು ಬಹುತೇಕ ಖಚಿತವಾಗಿದ್ದು ಇಬ್ಬರು ಸ್ಪಿನ್ನರ್ ಗಳನ್ನು ಹೊಂದಿದ್ದರೆ ಖಂಡಿತ ಯು ಎ ಇ ಪಿಚ್ ಗಳಲ್ಲಿ ಭಾರತ ತಂಡಕ್ಕೆ ಸಾಕಷ್ಟು ಸಹಕಾರಿಯಾಗಲಿದೆ. ಒಟ್ಟಾರೆಯಾಗಿ ತಂಡ ಹೀಗೆ ಇದ್ದು ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ