ವಾರದ ಅಂತ್ಯದಲ್ಲಿಯೂ ಸಿನಿಮಾ ನೋಡಲು ಬಾರದ ಜನ: ಲೈಗರ್ ಸಿನಿಮಾ ಗಳಿಸಿದ ಚಿಲ್ಲರೆ ಎಷ್ಟು ಗೊತ್ತೇ?? ಫುಲ್ ಬಿಲ್ಡ್ ಅಪ್ ಕೊಟ್ಟಿದ್ದ ವಿಜಯ್ ಗೆ ಶಾಕ್.

ವಾರದ ಅಂತ್ಯದಲ್ಲಿಯೂ ಸಿನಿಮಾ ನೋಡಲು ಬಾರದ ಜನ: ಲೈಗರ್ ಸಿನಿಮಾ ಗಳಿಸಿದ ಚಿಲ್ಲರೆ ಎಷ್ಟು ಗೊತ್ತೇ?? ಫುಲ್ ಬಿಲ್ಡ್ ಅಪ್ ಕೊಟ್ಟಿದ್ದ ವಿಜಯ್ ಗೆ ಶಾಕ್.

ಆಗಸ್ಟ್ 25ರಂದು ಅದ್ಧೂರಿಯಾಗಿ ತೆರೆಕಂಡ ಲೈಗರ್ ಸಿನಿಮಾ, ಅಷ್ಟೇ ಬೇಗ ಥಿಯೇಟರ್ ಗಳಿಂದ ಹೊರಬರುತ್ತಿದೆ. ಲೈಗರ್ ಸಿನಿಮಾ ನೋಡಲು ಜನರು ಥಿಯೇಟರ್ ಗ ಬರುತ್ತಿಲ್ಲ. ತೆಲುಗಿನ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಧ್ ನಿರ್ದೇಶಿಸಿ, ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ ಲೈಗರ್ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತು. ವಿಜಯ್ ದೇವರಕೊಂಡ ಅವರು ಸಿನಿಮಾ ಬಗ್ಗೆ ಬಹಳ ಆಸೆ ಇಟ್ಟುಕೊಂಡಿದ್ದರು, ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ, ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ಓಡುತ್ತದೆ, ಸಿನಿಪ್ರಿಯರಿಗೆ ಬಹಳ ಇಷ್ಟವಾಗುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ, ನಡೆದಿರುವುದು ಬೇರೆಯೇ ಆಗಿದೆ.

ಲೈಗರ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಸಿನಿಪ್ರಿಯರಿಂದ ಹಾಗೂ ವಿಮರ್ಶಕರಿಂದ ನೆಗಟಿವ್ ಪ್ರತಿಕಿಯೇ ಪಡೆದುಕೊಂಡು, ಸಿನಿಪ್ರಿಯರು ಲೈಗರ್ ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿಲ್ಲ. ಸಿನಿಪ್ರಿಯರನ್ನು ಸೆಳೆಯುವಂಥ ಅಂಶ ಲೈಗರ್ ಸಿನಿಮಾದಲ್ಲಿ ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಪೂರಿ ಜಗನ್ನಾಧ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ ಇಲ್ಲಿ ವರ್ಕ್ ಆಗಿಲ್ಲ, ದೊಡ್ಡ ತಾರಾ ಬಳಗ ಇದ್ದರು ಸಹ, ಲೈಗರ್ ಸಿನಿಮಾ ಮಕಾಡೆ ಮಲಗಿದೆ. ಹೈಪ್ ಇದ್ದ ಕಾರಣ ಮೊದಲ ದಿನದ ಕಲೆಕ್ಷನ್ ಚೆನ್ನಾಗಿಯೇ ಇತ್ತು, ಆದರೆ ಎರಡು ಮೂರು ಮತ್ತು ನಾಲ್ಕನೆಯ ದಿನ ಕಲೆಕ್ಷನ್ ನಲ್ಲಿ ಭಾರಿ ಕುಸಿತ ಕಂಡುಬಂದಿದೆ. ಲೈಗರ್ ಸಿನಿಮಾದ ಕಲೆಕ್ಷನ್ ಎಲ್ಲೆಲ್ಲಿ ಹೇಗಿದೆ ಎಂದು ತಿಳಿಸುತ್ತೇವೆ ನೋಡಿ.

ತೆಲುಗಿನ ಎರಡು ರಾಜ್ಯಗಳಲ್ಲಿ ಲೈಗರ್ ಸಿನಿಮಾದ ಮೊದಲ ದಿನದ ಕಲೆಕ್ಷನ್ 9.57 ಕೋಟಿ ರೂಪಾಯಿ, ಎರಡನೇ ದಿನ 1.54 ಕೋಟಿ ರೂಪಾಯಿ, ಮೂರನೇ ದಿನ 1.00 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ ರಜೆ ಇದ್ದರು ಸಹ 58 ಲಕ್ಷ ಕಲೆಕ್ಷನ್ ಮಾಡಿದೆ. ನಾಲ್ಕು ದಿನಗಳಲ್ಲಿ ಗ್ರಾಸ್ 21.50 ಕೋಟಿ, ಶೇರ್ 12.69 ಕೋಟಿ ಗಳಿಸಿದೆ ಲೈಗರ್. ಬೇರೆ ರಾಜ್ಯಗಳು ಮತ್ತು ಬೇರೆ ಭಾಷೆಗಳ ಕಲೆಕ್ಷನ್ ಒಟ್ಟಾಗಿ, 50.55 ಕೋಟಿ ಗ್ರಾಸ್, ಹಾಗೂ 24.44 ಕೋಟಿ ಶೇರ್ ಗಳಿಕೆ ಮಾಡಿದೆ. ಬಿಡುಗಡೆಗಿಂತ ಮೊದಲಿನ ಪ್ರೀ ರಿಲೀಸ್ ಬ್ಯುಸಿನೆಸ್ 88 ಕೋಟಿ ರೂಪಾಯಿ ಆಗಿದೆ. 65ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದರೆ, ಲೈಗರ್ ಸಿನಿಮಾ ಹಿಟ್ ಲಿಸ್ಟ್ ಸೇರುತ್ತದೆ. ಆದರೆ ಅದು ಸಾಧ್ಯವಾಗುವುದು ಕಷ್ಟ ಎನ್ನುತ್ತಿವೆ ಮೂಲಗಳು. ಈಗಾಗಲೇ ಹಲವು ಥಿಯೇಟರ್ ಗಳು ಖಾಲಿ ಹೊಡೆಯುತ್ತಿದ್ದು, ಲೈಗರ್ ಸಿನಿಮಾ ಶೋಗಳು ಸಹ ಕ್ಯಾನ್ಸಲ್ ಆಗುತ್ತಿವೆ.