ಪಾಕ್ ವಿರುದ್ಧ ಪಂದ್ಯ ಏನೋ ಗೆದ್ದಾಯ್ತು: ಆದರೆ ಪಂದ್ಯದ ಗತಿಯನ್ನು ಬದಲಾಯಿಸಿದ ಎರಡು ಕಠಿಣ ನಿರ್ಧಾರ ಗಳೇನು ಗೊತ್ತೇ? ರೋಹಿತ್ ಗೆದ್ದದ್ದು ಹೇಗೆ??
ಪಾಕ್ ವಿರುದ್ಧ ಪಂದ್ಯ ಏನೋ ಗೆದ್ದಾಯ್ತು: ಆದರೆ ಪಂದ್ಯದ ಗತಿಯನ್ನು ಬದಲಾಯಿಸಿದ ಎರಡು ಕಠಿಣ ನಿರ್ಧಾರ ಗಳೇನು ಗೊತ್ತೇ? ರೋಹಿತ್ ಗೆದ್ದದ್ದು ಹೇಗೆ??
ಆಗಸ್ಟ್ 28, ಭಾನುವಾರದಂದು ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯವನ್ನು ಭಾರತ ತಂಡ ಗೆದ್ದು, ಏಷ್ಯಾಕಪ್ 2022ರಲ್ಲಿ ಮೊದಲ ಗೆಲುವಿನಿಂದ, ಈ ಟೂರ್ನಿಯನ್ನು ಶುಭಾರಂಭ ಮಾಡಿದೆ. ಭಾರತದ ಗೆಲುವಿಗೆ ಮುಖ್ಯ ಕಾರಣ ವಹಿಸಿದ ಹಾರ್ದಿಕ್ ಪಾಂಡ್ಯ ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತ ತಂಡ ಗೆಲ್ಲಲು ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮಾಡಿದ ಆ ಎರಡು ನಿರ್ಧಾರಗಳು ಪ್ರಮುಖ ಪಾತ್ರ ವಹಿಸಿದವು ಎಂದು ತಿಳಿದುಬಂದಿದ್ದು, ಆ ಎರಡು ನಿರ್ಧಾರಗಳು ಏನು ಎಂದು ತಿಳಿಸುತ್ತೇವೆ ನೋಡಿ..
ರೋಹಿತ್ ಶರ್ಮಾ ಅವರು ತೆಗೆದುಕೊಂಡ ಮೊದಲ ನಿರ್ಧಾರ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರ ಬದಲಾಗಿ ರವೀಂದ್ರ ಜಡೇಜಾ ಅವರನ್ನು ಕಳಿಸಿದ್ದು, ಇದು ಹಲವರಿಗೆ ಶಾಕ್ ನೀಡಿತು, ಆದರೆ ಜಡೇಜಾ ಅವರನ್ನು ಕಲಿಸಿದ್ದು ಒಳಿತೇ ಆಯಿತು. ತಂಡಕ್ಕೆ ರನ್ ಗಳನ್ನು ಸಿಡಿಸಿ, ತಂಡದ ಸ್ಕೋರ್ ಜಾಸ್ತಿ ಮಾಡಿ, ಸೋಲಿನ ಭಯದಿಂದ ಭಾರತ ತಂಡವನ್ನು ಹೊರತರಲು ಇವರ ಪ್ರಯತ್ನ ಹೆಚ್ಚಾಗಿತ್ತು. ನಂತರ ಹಾರ್ದಿಕ್ ಪಾಂಡ್ಯ ಬಂದ ಬಳಿಕ ಇಬ್ಬರ ಪಾರ್ಟ್ನರ್ಶಿಪ್ ನಲ್ಲಿ, ಕೇವಲ 29 ಬಾಲ್ ಗಳಲ್ಲಿ 52 ರನ್ ಗಳನ್ನು ಕಲೆಹಾಕಿದರು. ತಂಡಕ್ಕೆ ಒಳ್ಳೆಯ ಕೊಡುಗೆ ಕೊಟ್ಟ ಆಲ್ ರೌಂಡರ್ ರವೀಂದ್ರ ಜಡೇಜಾ, ಕೊನೆಗ ಓವರ್ ನಲ್ಲಿ ಔಟ್ ಆದರು.
ರೋಹಿತ್ ಶರ್ಮಾ ಅವರು ತೆಗೆದುಕೊಂಡ ಎರಡನೇ ನಿರ್ಧಾರ, ವೇಗಿಗಳ ಮೇಲೆ ನಂಬಿಕೆ ಇಟ್ಟರು. ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ವಿಕೆಟ್ಸ್ ಗಳನ್ನು ಪಡೆದರು. ಪವರ್ ಪ್ಲೇ ನಲ್ಲಿ ಭುವಿ ಅವರಿಂದ 2 ಓವರ್ ಗಳು ಮಾತ್ರ ಬೌಲಿಂಗ್ ಮಾಡಿಸಿ, ನಂತರ ಅವರನ್ನು ಡೆತ್ ಓವರ್ ಗಳಿಗೆ ಉಳಿಸಿಕೊಳ್ಳಲಾಯಿತು, ಭುವಿ 4 ವಿಕೆಟ್ಸ್ ಪಡೆದರು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸಹ ಬೌಲಿಂಗ್ ಮಾಡಿ, 3 ವಿಕೆಟ್ಸ್ ಪಡೆದರು. ಆವೇಶ್ ಖಾನ್ ಅವರು ದುಬಾರಿಯಾಗಿದ್ದ ಕಾರಣ, ಅವರಿವೆ 2 ಓವರ್ ಗಳು ಮಾತ್ರ ನೀಡಲಾಯಿತು, ಅವರು 1 ವಿಕೆಟ್ ಪಡೆದರು, ಇನ್ನು ಅರ್ಷದೀಪ್ ಸಿಂಗ್ 2 ವಿಕೆಟ್ಸ್ ಪಡೆದರು.
ರವೀಂದ್ರ ಜಡೇಜಾ 2 ಓವರ್ ಹಾಗೂ ಯುಜವೆಂದ್ರ ಚಾಹಲ್ 4 ಓವರ್ ಬೌಲಿಂಗ್ ಮಾಡಿದರು ಸಹ, ಇವರಿಬ್ಬರು ವಿಕೆಟ್ಸ್ ಪಡೆಯಲಿಲ್ಲ. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಬೌಲರ್ ಗಳು ಎಲ್ಲಾ ವಿಕೆಟ್ಸ್ ಗಳನ್ನು ಪಡೆದಿರುವುದು ಇದೇ ಮೊದಲ ಬಾರಿಗೆ ಆಗಿದೆ. ರೋಹಿತ್ ಶರ್ಮಾ ಅವರು ಮ್ಯಾಚ್ ಸಮಯದಲ್ಲಿ ತೆಗೆದುಕೊಂಡ ಈ ನಿರ್ಧಾರಗಳು ಪಾಕಿಸ್ತಾನದ ವಿರುದ್ಧ ಭಾರತ ತಂಡ ಗೆಲ್ಲಲು ಸಹಾಯ ಮಾಡಿತು ಎನ್ನುವುದು ಅಸಲಿ ವಿಚಾರ.