ಎಲ್ಲವನ್ನು ಆತ್ಮವಿಶ್ವಾಸದಿಂದ ಎದುರಿಸಿದ ಹಾರ್ಧಿಕ್ ಪಾಂಡ್ಯ ಕುರಿತು ವಿರಾಟ್ ಕೊಟ್ಟರು ದೊಡ್ಡ ಹೇಳಿಕೆ. ಏನಂದ್ರು ಗೊತ್ತೇ??
ಎಲ್ಲವನ್ನು ಆತ್ಮವಿಶ್ವಾಸದಿಂದ ಎದುರಿಸಿದ ಹಾರ್ಧಿಕ್ ಪಾಂಡ್ಯ ಕುರಿತು ವಿರಾಟ್ ಕೊಟ್ಟರು ದೊಡ್ಡ ಹೇಳಿಕೆ. ಏನಂದ್ರು ಗೊತ್ತೇ??
ಆಗಸ್ಟ್ 28 ಭಾನುವಾರದಂದು ನಡೆದ ಏಷ್ಯಾಕಪ್ 2022, ಭಾರತದ ಮೊದಲ ಪಂದ್ಯ, ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಭರ್ಜರಿಯಾದ ಯಶಸ್ಸು ಕಂಡಿತು. ಈ ಯಶಸ್ಸಿನಲ್ಲಿ ಪ್ರಮುಖವಾದ ಪಾತ್ರ ವಹಿಸಿದವರು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಎಂದರೆ ತಪ್ಪಾಗುವುದಿಲ್ಲ. ಭಾನುವಾರದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ 33 ರನ್ ಗಳನ್ನು ಸಿಡಿಸಿ ಭಾರತ ತಂಡಕ್ಕೆ ಅದ್ಭುತವಾದ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ ಹಾರ್ದಿಕ್ ಪಾಂಡ್ಯ. ಇಂಜೂರಿ ಬಳಿಕ ನ್ಯಾಷನಲ್ ಟೀಮ್ ಇಂದ ದೂರ ಉಳಿದಿದ್ದ ಪಾಂಡ್ಯ, ಈ ವರ್ಷ ಐಪಿಎಲ್ ನಲ್ಲಿ ಪ್ಲೇಯರ್ ಆಗಿ ಮತ್ತು ಕ್ಯಾಪ್ಟನ್ ಆಗಿ ಅದ್ಭುತವಾದ ಪ್ರದರ್ಶನ ನೀಡಿ ನ್ಯಾಷನಲ್ ಟೀಮ್ ಗೆ ಮರಳಿ ಬಂದರು..
ಇದೀಗ ಭಾರತ ತಂಡದಲ್ಲೂ ಅತ್ಯುತ್ತಮವಾದ ಪ್ರದರ್ಶನ ನೀಡುತ್ತಾ, ಒಳ್ಳೆಯ ಹೆಸರು ಪಡೆಯುತ್ತಿದ್ದಾರೆ ಪಾಂಡ್ಯ. ಭಾನುವಾರದ ಪಂದ್ಯದಲ್ಲಿ 19.4 ಓವರ್ ಗಳಲ್ಲಿ ಪಾಕಿಸ್ತಾನ್ ತಂಡವನ್ನು 147 ರನ್ ಗಳಿಗೆ ಭಾರತ ತಂಡ ಆಲ್ ಔಟ್ ಮಾಡಿತು, ಭುವನೇಶ್ವರ್ ಕುಮಾರ್ 4 ವಿಕೆಟ್ ಗಳು, ಹಾರ್ದಿಕ್ ಪಾಂಡ್ಯ 3 ವಿಕೆಟ್ ಗಳು, ಅರ್ಷದೀಪ್ ಸಿಂಗ್ 2 ವಿಕೆಟ್ ಗಳು ಹಾಗೂ ಆವೇಶ್ ಖಾನ್ 1 ವಿಕೆಟ್ ಪಡೆದರು. ಇನ್ನು ಈ ನಾರ್ಮಲ್ ರನ್ಸ್ ಚೇಸಿಂಗ್ ಶುರು ಮಾಡಿದ ಭಾರತ ತಂಡ, ಆರಂಭದಲ್ಲಿ ಘಟಾನುಘಟಿಗಳ ವಿಕೆಟ್ಸ್ ಗಳನ್ನು ಕಳೆದುಕೊಂಡಿತು, ನಂತರ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಜೊತೆಯಾಟದಲ್ಲಿ 52 ರನ್ ಗಳನ್ನು ಸಿಡಿಸಿ, ಭಾರತವನ್ನು ಕಷ್ಟದ ಅಂಚಿನಿಂದ ಪಾರು ಮಾಡಿದರು.
ರವೀಂದ್ರ ಜಡೇಜಾ ಔಟ್ ಆದ ನಂತರ, ಕೊನೆಯ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಕ್ರೀಸ್ ಗೆ ಬಂದರು, 19ನೇ ಓವರ್ ನಲ್ಲಿ 5 ಬಾಲ್ ಗಳಿಗೆ 7 ರನ್ ಉಳಿದಿತ್ತು, ಸಿಂಗಲ್ ತೆಗೆದುಕೊಂಡ ಬಳಿಕ, 4ನೇ ಬಾಲ್ ನಲ್ಲಿ ಲಾಂಗ್ ಆನ್ ನಲ್ಲಿ ಸಿಕ್ಸರ್ ಭಾರಿಸಿ, ಭಾರತ ತಂಡಕ್ಕೆ ಗೆಲುವು ತಂದುಕೊಟ್ಟರು. ಅದ್ಭುತವಾಗಿ ಪರ್ಫಾರ್ಮ್ ಮಾಡಿದ, ಹಾರ್ದಿಕ್ ಪಾಂಡ್ಯ ಅವರನ್ನು ಹೊಗಳಿರುವ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು, ಹಾರ್ದಿಕ್ ಪಾಂಡ್ಯ ಅವರನ್ನು “ಚಾಂಪಿಯನ್” ಎಂದು ಕರೆದಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮ್ಯಾಚ್ ಫೋಟೋ ಅಪ್ಡೇಟ್ ಮಾಡಿ, ಚಾಂಪಿಯನ್ ಎಂದು ಬರೆದು, ಪಾಂಡ್ಯ ಅವರನ್ನು ಹೊಗಳಿದ್ದಾರೆ. ಹೊರಗಡೆ ಸಹ ಹಾರ್ದಿಕ್ ಪಾಂಡ್ಯ ಅವರಿಗೆ ಭರ್ಜರಿಯಾಗಿ ಪ್ರಶಂಸೆಗಳು ಕೇಳಿ ಬರುತ್ತಿದೆ