ಸಿಂಗಲ್ ನಿರಾಕರಿಸಿ ಪಂದ್ಯ ಗೆಲ್ಲಿಸಿಕೊಟ್ಟ ಹಾರ್ಧಿಕ್ ಗೆ ದಿನೇಶ್ ಕಾರ್ತಿಕ್ ಕೊನೆಯಲ್ಲಿ ಮಾಡಿದ್ದೇನು ಗೊತ್ತೇ?? ವೈರಲ್ ಆಯಿತು ವಿಡಿಯೋ.

ಸಿಂಗಲ್ ನಿರಾಕರಿಸಿ ಪಂದ್ಯ ಗೆಲ್ಲಿಸಿಕೊಟ್ಟ ಹಾರ್ಧಿಕ್ ಗೆ ದಿನೇಶ್ ಕಾರ್ತಿಕ್ ಕೊನೆಯಲ್ಲಿ ಮಾಡಿದ್ದೇನು ಗೊತ್ತೇ?? ವೈರಲ್ ಆಯಿತು ವಿಡಿಯೋ.

ನಿನ್ನೆ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಮ್ಯಾಚ್ ಅತ್ಯಂತ ರೋಚಕವಾದ ಮ್ಯಾಚ್ ಗಳಲ್ಲಿ ಒಂದು. ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲೇಬೇಕು ಎಂದು ಪಣ ತೊಟ್ಟಿತ್ತು. ಅದೇ ರೀತಿ ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತು. ನಿನ್ನೆಯ ಪಂದ್ಯದಲ್ಲಿ ಸ್ಟಾರ್ ಆಟಗಾರ ಎನ್ನಿಸಿಕೊಂಡವರು ಹಾರ್ದಿಕ್ ಪಾಂಡ್ಯ. ಕೇವಲ 17 ಬಾಲ್ ಗಳಲ್ಲಿ 33 ರನ್ ಭಾರಿಸಿ, ಕೊನೆಯ ಓವರ್ ನಲ್ಲಿ 6 ಭಾರಿಸಿ ಪಂದ್ಯದ ಗೆಲುವಿನಲ್ಲಿ ಮುಖ್ಯಪಾಲು ವಹಿಸಿದರು ಹಾರ್ದಿಕ್ ಪಾಂಡ್ಯ. ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ಪ್ರಶಂಸೆ ಕೇಳಿ ಬರುತ್ತಿದೆ.

ನಿನ್ನೆಯ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 20 ಓವರ್ ಗಳಲ್ಲಿ ಎಲ್ಲಾ ವಿಕೆಟ್ಸ್ ಗಳನ್ನು ಕಳೆದುಕೊಂಡ ಪಾಕಿಸ್ತಾನ್ ತಂಡ 147 ರನ್ ಗಳನ್ನು ಕಲೆಹಾಕಿತು. ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ 19.4 ಓವರ್ ಗಳಲ್ಲಿ, 5 ವಿಕೆಟ್ ನಷ್ಟಕ್ಕೆ, 148 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು. ಕೊನೆಯ ಇನ್ನಿಂಗ್ಸ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಸಿಕ್ಸರ್ ಗೆ ಭಾರಿ ಮೆಚ್ಚುಗೆ ಪಡೆದಿದೆ. ಕೊನೆಯ ಓವರ್ ನಲ್ಲಿ ರವೀಂದ್ರ ಜಡೇಜಾ ಅವರು ಔಟ್ ಆದ ಬಳಿಕ ದಿನೇಶ್ ಕಾರ್ತಿಕ್ ಅವರು ಬಂದರು. ಆದರೆ ದಿನೇಶ್ ಕಾರ್ತಿಕ್ ಅವರು ಸಿಂಗಲ್ ತೆಗೆದುಕೊಂಡು ಪಾಂಡ್ಯ ಅವರಿಗೆ ಸ್ಟ್ರೈಕ್ ನೀಡಿದರು.

ಸ್ಟ್ರೈಕ್ ಗೆ ಬಂದ ಪಾಂಡ್ಯ ಸಿಂಗಲ್ ತೆಗೆದುಕೊಳ್ಳದೆ ಸ್ಟ್ರೈಕ್ ಉಳಿಸಿಕೊಂಡು, 19ನೇ ಓವರ್ ನ ನಾಲ್ಕನೇ ಬಾಲ್ ನಲ್ಲಿ ಸಿಕ್ಸರ್ ಭಾರಿಸಿ ಪಂದ್ಯ ಗೆದ್ದರು. ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್ ಅವರು ಹಾರ್ದಿಕ್ ಪಾಂಡ್ಯ ಅವರನ್ನು ನೋಡಿ ತಲೆಬಾಗಿ ನಮಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರು ಹಾರ್ದಿಕ್ ಪಾಂಡ್ಯ ಅವರಿಗೆ ಗೌರವ ಸೂಚಿಸಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆದ ಬಳಿಕ #dineshkarthik ಹ್ಯಾಶ್ ಟ್ಯಾಗ್ ಸಹ ಟ್ರೆಂಡ್ ಆಗಿದೆ. ಎಲ್ಲರು ದಿನೇಶ್ ಕಾರ್ತಿಕ್ ಅವರನ್ನು ಮೆಚ್ಚಿಕೊಂಡಿದ್ದಾರೆ. ನೀವು ಸಹ ದಿನೇಶ್ ಕಾರ್ತಿಕ್ ಅವರನ್ನು ನೋಡಿ..