ವಿರೋಧಿಗಳಿಗೆ ಒಮ್ಮೆಲೇ ಖಡಕ್ ಸಂದೇಶ ಕೊಟ್ಟ ಡಿ ಬಾಸ್: ಆನೆ ನಡೆದಿದ್ದೇ ದಾರಿ ವಿಡಿಯೋ ಹಾಕಿ ಹೇಳಿದ್ದೇನು ಗೊತ್ತೇ??

ನಟ ಡಿಬಾಸ್ ದರ್ಶನ್ ಅವರು ಈಗ ಕ್ರಾಂತಿ ಸಿನಿಮಾ ಬಿಡುಗಡೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ದರ್ಶನ್ ಅವರು ಅಭಿನಯಿಸಿರುವ ಕ್ರಾಂತಿ ಸಿನಿಮಾ ಅಕ್ಷರಕ್ರಾಂತಿ ಕಥೆಯನ್ನು ಹೊಂದಿದೆ. ಅಂದರೆ ಕನ್ನಡ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಸಿನಿಮಾ ಕಥೆ ಇದ್ದು, ಈ ಸಿನಿಮಾವನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ನಿರ್ದೇಶಿಸಿ, ಶೈಲಜಾ ನಾಗ್ ಅವರು ನಿರ್ಮಾಣ ಮಾಡಿ, ದೊಡ್ಡ ಕಲಾವಿದರು ಕ್ರಾಂತಿ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಚಿತ್ರೀಕರಣ ಪೂರ್ತಿಯಾಗಿ ಮುಗಿದು, ಬಿಡುಗಡೆಗೆ ಸಿದ್ಧವಾಗುತ್ತಿದೆ.

ಈ ನಡುವೆ ಡಿಬಾಸ್ ದರ್ಶನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದು, ಅದನ್ನು ನೋಡಿದರೆ ಒಂದು ದೀರ್ಘವಾದ ಸಂದೇಶ ಆ ಪೋಸ್ಟ್ ನಲ್ಲಿದೆ. ದರ್ಶನ್ ಅವರು ಒಂದು ವಿಡಿಯೋ ಶೇರ್ ಮಾಡಿ, ಒಂಟಿಯಾಗಿ ಹೋರಾಡುವುದನ್ನು ಕಲಿಯಿರಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ವಿಡಿಯೋದಲ್ಲಿ ಒಂಟಿ ಆನೆಯೊಂದು ನೀರು ಕುಡಿಯುವಾಗ, ಮೂರು ಸಿಂಹಗಳು ಅದರ ಮೇಲೆ ಎರಗಿ, ಬೇಟೆಯಾಡಲು ಪ್ರಯತ್ನ ಮಾಡುತ್ತದೆ. ಒಂಟಿಯಾಗಿರುವ ಆನೆ ಸಿಂಹಗಳನ್ನು ನೋಡಿ ಹೆದರುವುದಿಲ್ಲ, ಬದಲಾಗಿ ಒಂಟಿಯಾಗಿ ಹೋರಾಡುತ್ತದೆ. ಸಿಂಹಗಳಿಂದ ತಪ್ಪಿಸಿಕೊಂಡು ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತದೆ.

ಈ ವಿಡಿಯೋ ಶೇರ್ ಮಾಡಿರುವ ಡಿಬಾಸ್, ಏನೇ ಆದರೂ ಒಂಟಿಯಾಗಿ ಧೈರ್ಯದಿಂದ ಫೈಟ್ ಮಾಡಬೇಕು, ನಮ್ಮನ್ನು ನಾವು ಉಳಿಸಿಕೊಳ್ಳಬೇಕು ಎಂದು ಸಂದೇಶ ಸಾರಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ದರ್ಶನ್ ಅವರು ಕ್ರಾಂತಿ ಸಿನಿಮಾ ಬಳಿಕ ತರುಣ್ ಸುಧೀರ್ ನಿರ್ದೇಶನದಲ್ಲಿ ಡಿ56 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ನಟಿ ಮಾಲಾಶ್ರೀ ಮತ್ತು ನಿರ್ಮಾಪಕ ಕೋಟಿ ರಾಮು ಅವರ ಮಗಳು ರಾಧನಾ ರಾಮ್ ಆಯ್ಕೆಯಾಗಿದ್ದಾರೆ. ಈಗಾಗಲೇ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದಾರೆ ಎನ್ನಲಾಗಿದೆ.