ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತದ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕಪ್ಪು ಪಟ್ಟಿ ಧರಿಸಿ ಆಟವಾಡಿದ್ದು ಯಾಕೆ ಗೊತ್ತೆ??

258

Get real time updates directly on you device, subscribe now.

ನಿನ್ನೆ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಅತ್ಯಂತ ರೋಚಕವಾದ ಮ್ಯಾಚ್ ಗಳಲ್ಲಿ ಒಂದು ಎಂದರೆ ತಪ್ಪಾಗುವುದಿಲ್ಲ. ಭಾರತ ತಂಡದ ಗೆಲುವು ಎಲ್ಲಾ ಭಾರತೀಯರು ಸಂಭ್ರಮ ಪಡುವ ಹಾಗೆ ಮಾಡಿದೆ. ಎಲ್ಲಾ ಭಾರತೀಯರು ಗೆದ್ದ ಸಂತೋಷದಲ್ಲಿದ್ದಾರೆ. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ್ ಬ್ಲ್ಯಾಕ್ ಬ್ಯಾಂಡ್ ಧರಿಸಿ ಭಾರತದ ವಿರುದ್ಧ ಪಂದ್ಯವನ್ನು ಆಡಿದರು. ಇದನ್ನು ನೋಡಿ ಹಲವರಿಗೆ ಪ್ರಶ್ನೆಯು ಸಹ ಮೂಡಿತು, ಪಾಕಿಸ್ತಾನ್ ತಂಡ ಯಾಕೆ ಕಪ್ಪು ಬ್ಯಾಂಡ್ ಧರಿಸಿ ಮ್ಯಾಚ್ ಗೆ ಬಂದಿದ್ದಾರೆ ಎಂದು ಪ್ರಶ್ನೆ ಮೂಡಿರುವುದು ಸಹಜ, ಅದಕ್ಕೆ ಉತ್ತರವನ್ನು ಈಗ ತಿಳಿಸುತ್ತೇವೆ ನೋಡಿ..

ಇಂಡಿಯಾ ಪಾಕಿಸ್ತಾನ್ ಮ್ಯಾಚ್ ಎಂದರೆ ಎಲ್ಲರಿಯು ಎಲ್ಲಿಲ್ಲದ ಉತ್ಸಾಹ, ಆಸಕ್ತಿ ಎಂದರೆ ತಪ್ಪಾಗುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಮ್ಯಾಚ್ ಎನ್ನುವುದಕ್ಕಿಂತ ಅದು ಯುದ್ಧದ ಹಾಗೆ ಅನ್ನಿಸುತ್ತದೆ. ಅಷ್ಟರ ಮಟ್ಟಿಗೆ ರೋಚಕವಾಗಿರುತ್ತದೆ ಪಂದ್ಯಗಳು. ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಬ್ಲ್ಯಾಕ್ ಬ್ಯಾಂಡ್ ಧರಿಸಿ ಪಂದ್ಯವನ್ನು ಆಡಿದ್ದಾರೆ, ಇದಕ್ಕೆ ಕಾರಣ ಏನೆಂದರೆ ಸಧ್ಯಕ್ಕೆ ಪಾಕಿಸ್ತಾನ ಇರುವ ಪರಿಸ್ಥಿತಿ, ಪಾಕಿಸ್ತಾನದಲ್ಲಿ ಈಗ ಚಿಂತಾಜನಕ ವಾತಾವರಣ ಇದೆ. ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿರುವ ಕಾರಣ, 42ಲಕ್ಷಕ್ಕಿಂತ ಹೆಚ್ಚು ಜನರು ಬೀದಿ ಪಾಲಾಗಿದ್ದಾರೆ, ಇದರಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 900ಕ್ಕಿಂತ ಹೆಚ್ಚಾಗಿದೆ. ಪಾಕಿಸ್ತಾನ್ ಈಗ ಬಹಳ ನೋವಿನಲ್ಲಿದೆ.

ಈ ಕಾರಣದಿಂದ ಪಾಕಿಸ್ತಾನ್ ತಂಡ ಬ್ಲ್ಯಾಕ್ ಬ್ಯಾಂಡ್ ಧರಿಸಿ ಆಟವಾಡಿದ್ದು, ಅದರ ಬಗ್ಗೆ ಅಧಿಕೃತ ಹೇಳಿಕೆ ಸಹ ನೀಡಿದ್ದಾರೆ. “ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಉಂಟಾಗಿರುವ ಕಾರಣ, ಪ್ರವಾಹ ಪೀಡಿತರಿಗೆ ಬೆಂಬಲ ಸೂಚಿಸಲು, ಮತ್ತು ಒಗ್ಗಟ್ಟು ವ್ಯಕ್ತಪಡಿಸುವ ಕಾರಣ ಭಾರತ ವಿರುದ್ಧದ ಪಂದ್ಯದಲ್ಲಿ ಬ್ಲ್ಯಾಕ್ ಬ್ಯಾಂಡ್ ಧರಿಸಿ ಆಡಲಿದ್ದೇವೆ..” ಎಂದು ಪಾಕಿಸ್ತಾನ್ ತಂಡ ಹೇಳಿದೆ. ಪಾಕಿಸ್ತಾನದಲ್ಲಿ ನೂರಾರು ಜನರ ಪ್ರಾಣ ಹಾನಿ ಆಗಿದೆ, ಪಾಕ್ ಆಟಗಾರರು ಆ ನೋವಿನಲ್ಲಿ ಮೈದಾನಕ್ಕೆ ಬಂದು ಮ್ಯಾಚ್ ಆಡಿದ್ದಾರೆ. 2 ಲಕ್ಷಕ್ಕಿಂತ ಹೆಚ್ಚು ಮನೆಗಳು ನಾಶವಾಗಿದೆ. ಹಿಂದಿನ 24 ಗಂಟೆಗಳಲ್ಲಿ 34 ಜನರು ಪ್ರಾಣ ಕಳೆದುಕೊಂಡಿದ್ದಾರೆ.

Get real time updates directly on you device, subscribe now.