ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಿಮಗೆ ಸಾಕಷ್ಟು ತೊಂದರೆ ಕೊಡುತ್ತಿರುವ ಮಧುಮೇಹವನ್ನು ನಿಯಂತ್ರದಲ್ಲಿ ಇಡಲು, ಈ ಸಸ್ಯದ ಎಲೆಗಳನ್ನು ಹೀಗೆ ಬಳಸಿ ಸಾಕು.

27

Get real time updates directly on you device, subscribe now.

ಮಧುಮೇಹ ಎನ್ನುವುದು ಈಗ ಸಾಮಾನ್ಯವಾದ ಖಾಯಿಲೆಯ ಹಾಗೆ ಆಗಿದೆ. ಪ್ರತಿ ಮನೆಯಲ್ಲೂ ಮಧುಮೇಹ ಇರುವಂತಹ ಒಬ್ಬರು ಇರುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ವಯಸ್ಸಿನವರಲ್ಲೂ ಈಗ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಲು ಕೆಲವು ಮನೆಮದ್ದುಗಳು ಸಹ ಇದೆ. ಮಧುಮೇಹ ಸಮಸ್ಯೆ ಕಡಿಮೆ ಮಾಡಲು ಒಂದು ಸಸ್ಯ ಭಾರಿ ಸಹಾಯ ಮಾಡುತ್ತದೆ. NCBI ಹೇಳಿರುವ ಪ್ರಕಾರ, ಮಧುಮೇಹ ಸಮಸ್ಯೆಗೆ ರಾಮಬಾಣದ ಹಾಗೆ ಸಹಾಯ ಮಾಡುವುದು, ಇನ್ಸುಲಿನ್ ಗಿಡದ ಎಲೆಗಳು. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಟೈಪ್2 ಡೈಯಾಬಿಟಿಸ್ ಗೆ ಚಿಕಿತ್ಸೆ ನೀಡಬಹುದು, ಈ ಗಿಡದ ಎಲೆಗಳಲ್ಲಿ ಇನ್ಸುಲಿನ್ ಇರುವುದಿಲ್ಲ, ಇವು ಇನ್ಸುಲಿನ್ ಅನ್ನು ಉತ್ಪಾದಿಸುವುದು ಇಲ್ಲ, ಇದರಲ್ಲಿರುವ ರಾಸಾಯನಿಕ ಅಂಶಗಳು, ಸಕ್ಕರೆಯನ್ನು ಗ್ಲೈಕೋಜಿನ್ ಆಗಿ ಪರಿವರ್ತನೆ ಮಾಡುತ್ತದೆ.

ಇದರಿಂದ ಚಯಾಪಚಯ ಕ್ರಿಯೆ ಸಹ ಉತ್ತೇಜಿತವಾಗುತ್ತದೆ. ಇನ್ಸುಲಿನ್ ಗಿಡಕ್ಕೆ ಆಯುರ್ವೇದದಲ್ಲಿ ಮಹತ್ವ ಇದೆ. ಇದರ ವೈಜ್ಞಾನಿಕ ಹೆಸರು ಕ್ಯಾಕ್ಟಸ್ ಪಿಕ್ಟಸ್, ಇದನ್ನು ಕ್ರೆಪ್ ಶುಂಠಿ, ಕೇಮುಕ್, ಕ್ಯೂ ಎಂದು ಬೇರೆ ಹೆಸರಿನಲ್ಲಿ ಸಹ ಕರೆಯುತ್ತಾರೆ. ಈ ಗಿಡದ ಎಲೆಗಳನ್ನು ಆಗಿಯುವುದರಿಂದ, ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಈ ಎಲೆಗಳು ಹುಳಿ ರುಚಿ ಕೊಡುತ್ತದೆ. ಮಧುಮೇಹ ರೋಗಕ್ಕೆ ಇನ್ಸುಲಿನ್ ಸಹಾಯ ಮಾಡುತ್ತದೆ. ಇದರಲ್ಲಿರುವ ಕಾರ್ಸೋಲಿಕ್ ಅಂಶ ಇರುತ್ತದೆ, ಇದರಿಂದ ಕೆಮ್ಮು ನೆಗಡಿ ಸೋಂಕು, ಅಸ್ತಮಾ ಅಂತಹ ಸಮಸ್ಯೆಗಳಿಗೆ ಪ್ರಯೋಜನ ನೀಡುತ್ತದೆ. ಮಧುಮೇಹ ಸಮಸ್ಯೆ ಇರುವವರು ನಿರ್ಧಿಷ್ಟ ಸಮಯದಲ್ಲಿ 6 ರಿಂದ 7 ಬಾರಿ ಆಹಾರ ಸೇವಿಸಿದರೆ, ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಹೆಚ್ಚಾಗುತ್ತದೆ.

ಹಾಗಾಗಿ ಅಂತರದಲ್ಲಿ ತಿನ್ನುವುದು ಒಳ್ಳೆಯದು ಎಂದು ಹೇಳುತ್ತಾರೆ. ಹಾಗೂ ಬೆಳಗ್ಗೆ ಮತ್ತು ಸಂಜೆ ಸೇವಿಸುವುದು ಪ್ರಯೋಜನ ನೀಡುತ್ತದೆ. ಆರೋಗ್ಯ ತಜ್ಞರು ಹೇಳಿರುವ ಪ್ರಕಾರ, ಪ್ರತಿದಿನ ಒಂದು ತಿಂಗಳ ಕಾಲ, ಈ ಎಲೆಗಳನ್ನು ಆಗಿಯುವುದರಿಂದ ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇರುತ್ತದೆ. ಇದನ್ನು ಬಳಸುವುದು ಹೇಗೆ ಎಂದು ತಿಳಿಸುತ್ತೇವೆ.. ಇನ್ಸುಲಿನ್ ಸಸ್ಯದಿಂದ ಎರಡು ಎಲೆಗಳನ್ನು ತೆಗೆದುಕೊಂಡು, ಚೆನ್ನಾಗಿ ತೊಳೆಯಿರಿ, ನಂತರ ಎಲೆಗಳನ್ನು ಚೆನ್ನಾಗಿ ಅರೆದು ಒಂದು ಲೋಟ ನೀರಿನಲ್ಲಿ ಸೇರಿಸಿ, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೇವನೆ ಮಾಡಿ, ಇದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ಆರೋಗ್ಯ ತಜ್ಞರು ಹೇಳಿರುವ ಪ್ರಕಾರ, ಇದನ್ನು ನಿಯಮಿತವಾಗಿ ಬಳಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

Get real time updates directly on you device, subscribe now.