ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಾಬರ್ ಅಲ್ಲ, ರೋಹಿತ್ ಕೊಹ್ಲಿ ಅಲ್ಲವೇ ಅಲ್ಲ, ಈ ಭಾರತೀಯನೆ ಏಷ್ಯಾ ಕಪ್ ನಲ್ಲಿ ಅತಿ ಹೆಚ್ಚು ಗಳಿಸುವುದು ಎಂದ ರಶೀದ್ ಖಾನ್: ಯಾರಂತೆ ಗೊತ್ತೇ??

231

Get real time updates directly on you device, subscribe now.

ಬಹು ನಿರೀಕ್ಷಿತ ಏಷ್ಯಾಕಪ್ ಪಂದ್ಯಗಳು ನಿನ್ನೆಯಿಂದ ಶುರುವಾಗಿದ್ದು, ಭಾರತ, ಪಾಕಿಸ್ತಾನ್, ಅಫ್ಘಾನಿಸ್ಥಾನ್, ಬಾಂಗ್ಲಾದೇಶ್, ಹಾಂಗ್ ಕಾಂಗ್ ಮತ್ತು ಶ್ರೀಲಂಕಾ ತಂಡಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ. ಭಾರತದ ಮೊದಲ ಪಂದ್ಯ ಇಂದು ನಡೆಯಲಿದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಪ್ರಿಯರು ಪಂದ್ಯವನ್ನು ನೋಡಲು ಕಾಯುತ್ತಿದ್ದಾರೆ. ಇದೀಗ ಭಾರತದ ಒಬ್ಬ ಆಟಗಾರನ ಬಗ್ಗೆ ಅಫ್ಘಾನಿಸ್ತಾನ್ ಆಲ್ ರೌಂಡರ್ ರಶೀದ್ ಖಾನ್ ಮಾತನಾಡಿದ್ದಾರೆ.

ರಶೀದ್ ಖಾನ್ ಅವರು ಅದ್ಭುತವಾದ ಆಲ್ ರೌಂಡರ್, ಐಪಿಎಲ್ ನಲ್ಲಿ ಸಹ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಇದೀಗ ಇವರು ಭಾರತದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮಾತನಾಡಿದ್ದಾರೆ. ಭಾರತದ ಪರವಾಗಿ ಸೂರ್ಯಕುಮಾರ್ ಉತ್ತಮವಾದ ಪ್ರದರ್ಶನ ನೀಡುವುದರಲ್ಲಿ ಸಂಶಯ ಇಲ್ಲ ಎಂದಿದ್ದಾರೆ ರಶೀದ್ ಖಾನ್. “ಸೂರ್ಯಕುಮಾರ್ ಯಾದವ ಅದ್ಭುತವಾರ ಪ್ಲೇಯರ್. ಐಪಿಎಲ್ ನಲ್ಲಿ ನೀಡಿದ ಪ್ರದರ್ಶನದ ಹಾಗೆಯೇ ಭಾರತ ತಂಡಕ್ಕೂ ಉತ್ತಮವಾದ ಕೊಡುಗೆ ನೀಡಿದ್ದಾರೆ. ಏಷ್ಯಾಕಪ್ ಪಂದ್ಯಗಳಲ್ಲಿ ಹೆಚ್ಚಿನ ರನ್ ಗಳಿಸುವ ಆಟಗಾರರರಲ್ಲಿ ಸೂರ್ಯಕುಮಾರ್ ಯಾದವ್ ಒಬ್ಬರಾಗಿದ್ದಾರೆ. ಯಾವಾಗಲೂ ಪಾಸಿಟಿವ್ ಆಗಿ ಆಟವಾಡುತ್ತಾರೆ. ಕ್ರೀಸ್ ನಲ್ಲಿ ನಿರತರಾಗಿರುತ್ತಾರೆ.

ಸೂರ್ಯಕುಮಾರ್ ಯಾದವ್ ತಂಡಕ್ಕಾಗಿ ಉತ್ತಮವಾದ ಪ್ರದರ್ಶನ ನೀಡಬೇಕು ಎಂದು ಪ್ರಯತ್ನ ಮಾಡುತ್ತಾರೆ. ಐಪಿಎಲ್ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಬೌಲಿಂಗ್ ಮಾಡುವುದು ಕಷ್ಟವಾಗಿತ್ತು. ಇದು ಆರೋಗ್ಯಕರ ಸ್ಪರ್ಧೆ ಆಗಿದೆ. ಭಾರತಕ್ಕಾಗಿ ಅವರು ಕ್ರಿಕೆಟ್ ಗ್ರೌಂಡ್ ಗೆ ಬಂದಾಗ, ಬೌಲಿಂಗ್ ಮಾಡಲು ಕಾತುರನಾಗಿದ್ದೇನೆ..” ಎಂದಿದ್ದಾರೆ ರಶೀದ್ ಖಾನ್. 31 ವರ್ಷದ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಎಲ್ಲರಿಂದಲೂ ಉತ್ತಮವಾದ ಪ್ರಶಂಸೆ ಪಡೆದುಕೊಳ್ಳುತ್ತಿದ್ದಾರೆ. ಏಷ್ಯಾಕಪ್ ಪಂದ್ಯಗಳಲ್ಲಿ ಇವರ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.